ADVERTISEMENT

100ನೇ ಪ್ರಶಸ್ತಿಯತ್ತ ನೊವಾಕ್‌ ಜೊಕೊವಿಚ್

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2025, 0:30 IST
Last Updated 30 ಮಾರ್ಚ್ 2025, 0:30 IST
<div class="paragraphs"><p>ನೊವಾಕ್‌&nbsp;ಜೊಕೊವಿಚ್‌</p></div>

ನೊವಾಕ್‌ ಜೊಕೊವಿಚ್‌

   

ಮಿಯಾಮಿ ಗಾರ್ಡನ್ಸ್: ಸರ್ಬಿಯಾದ ಟೆನಿಸ್‌ ತಾರೆ ನೊವಾಕ್‌ ಜೊಕೊವಿಚ್‌ ಅವರು ವೃತ್ತಿಜೀವನದ 100ನೇ ಕಿರೀಟದ ಹೊಸ್ತಿಲಲ್ಲಿದ್ದಾರೆ.

ದಾಖಲೆಯ 24 ಗ್ರ್ಯಾನ್‌ಸ್ಲಾಮ್‌ ಸೇರಿದಂತೆ 99 ಪ್ರಶಸ್ತಿಗಳಿಗೆ ಒಡೆಯನಾಗಿರುವ 37 ವರ್ಷ ವಯಸ್ಸಿನ ಜೊಕೊವಿಚ್‌, ಮಿಯಾಮಿ ಓಪನ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಈ ಮೂಲಕ ಎಟಿಪಿ ಮಾಸ್ಟರ್ಸ್ 1000 ಫೈನಲ್ ತಲುಪಿದ ಅತ್ಯಂತ ಹಿರಿಯ ವಯಸ್ಸಿನ ಆಟಗಾರ ಎಂಬ ಹಿರಿಮೆಗೂ ಪಾತ್ರವಾಗಿದ್ದಾರೆ.

ADVERTISEMENT

ನಾಲ್ಕನೇ ಶ್ರೇಯಾಂಕದ ಜೊಕೊವಿಚ್‌ ಶನಿವಾರ ಸೆಮಿಫೈನಲ್‌ನಲ್ಲಿ 6-2, 6-3ರಿಂದ ಗ್ರಿಗರ್ ಡಿಮಿಟ್ರೋವ್ (ಬಲ್ಗೇರಿಯಾ) ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.