
ಪ್ರಜ್ವಲ್ ದೇವ್
ಬೆಂಗಳೂರು: ಕರ್ನಾಟಕದ ಪ್ರಜ್ವಲ್ ದೇವ್ ಅವರು ಇದೇ 5ರಿಂದ 11ರವರೆಗೆ ನಡೆಯಲಿರುವ 10ನೇ ಬೆಂಗಳೂರು ಓಪನ್ ಟೆನಿಸ್ ಟೂರ್ನಿಗೆ ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದಾರೆ. ಎಟಿಪಿ ಚಾಲೆಂಜರ್ ಟೂರ್ ಮಟ್ಟದ ಈ ಟೂರ್ನಿಯು ಕಬ್ಬನ್ ಪಾರ್ಕ್‌ನ ಎಸ್.ಎಂ. ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ನಡೆಯಲಿವೆ.
‘ಬೆಂಗಳೂರು ಓಪನ್ ಟೂರ್ನಿಗೆ ವೈಲ್ಡ್ ಕಾರ್ಡ್ ಪ್ರವೇಶ ದೊರಕಿರುವುದು ಹೆಮ್ಮೆಯ ಕ್ಷಣ. ತವರು ನೆಲ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಮಟ್ಟದ ಈ ಟೂರ್ನಿಯು ನಮ್ಮ ಸಾಮರ್ಥ್ಯ ಪರೀಕ್ಷೆಗೆ ಅವಕಾಶವಾಗಿದೆ’ ಎಂದು ಪ್ರಜ್ವಲ್ ಪ್ರತಿಕ್ರಿಯಿಸಿದ್ದಾರೆ.
29 ವರ್ಷ ವಯಸ್ಸಿನ ಮೈಸೂರಿನ ಆಟಗಾರ ಭುವನೇಶ್ವರದಲ್ಲಿ ನವೆಂಬರ್‌ನಲ್ಲಿ ನಡೆದ ಐಟಿಎಫ್ ವಿಶ್ವ ಟೆನಿಸ್ ಟೂರ್ ಎಂ15 ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅವರು ಪ್ರಸ್ತುತ ಎಟಿಪಿ ಸಿಂಗಲ್ಸ್ ರ್‍ಯಾಂಕಿಂಗ್‌ನಲ್ಲಿ 632ನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.