ADVERTISEMENT

ಸಾವಿರ ಗೆಲುವಿನ ಸರದಾರ ನಡಾಲ್

ಏಜೆನ್ಸೀಸ್
Published 6 ನವೆಂಬರ್ 2020, 4:31 IST
Last Updated 6 ನವೆಂಬರ್ 2020, 4:31 IST
ರಫೆಲ್ ನಡಾಲ್
ರಫೆಲ್ ನಡಾಲ್   

ಪ್ಯಾರಿಸ್ : ಟೆನಿಸ್ ತಾರೆ ರಫೆಲ್ ನಡಾಲ್ ಅವರು ತಮ್ಮ ವೃತ್ತಿಜೀವನದಲ್ಲಿ ಒಂದು ಸಾವಿರ ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದರು.

ಬುಧವಾರ ಇಲ್ಲಿಯ ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣದಲ್ಲಿ ನಡೆದ ಪ್ಯಾರಿಸ್ ಮಾಸ್ಟರ್ಸ್‌ ಪಂದ್ಯದಲ್ಲಿ ನಡಾಲ್ 4–6, 7–6, 6–4 ರಿಂದ ಫೆಲಿಸಿಯಾನೊ ಲೊಪೆಜ್ ವಿರುದ್ಧ ಗೆದ್ದರು. ಅದರೊಂದಿಗ ಸಾವಿರ ಪಂದ್ಯಗಳನ್ನು ಜಯಿಸಿದ ವಿಶ್ವದ ನಾಲ್ಕನೇ ಆಟಗಾರನಾದರು. ‌

ಜಿಮ್ಮಿ ಕಾನರ್ಸ್ (1,274), ರೋಜರ್ ಫೆಡರರ್ (1242) ಮತ್ತು ಇವಾನ್ ಲೆಂಡ್ಲ್ (1068) ಅವರ ನಂತರದ ಸ್ಥಾನವನ್ನು ನಡಾಲ್ ಪಡೆದರು. ಆದರೆ ಅವರ ಈ ಸಾಧನೆಯನ್ನು ಕಣ್ತುಂಬಿಕೊಳ್ಳಲು ಕ್ರೀಡಾಂಗಣದಲ್ಲಿ ಅಭಿಮಾನಿಗಳು ಇರಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.