ADVERTISEMENT

ಆಸ್ಟ್ರೇಲಿಯನ್ ಓಪನ್‌ನಿಂದ ಹೊರಗುಳಿದ ರೋಜರ್ ಫೆಡರರ್

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 2:49 IST
Last Updated 28 ಡಿಸೆಂಬರ್ 2020, 2:49 IST
ರೋಜರ್ ಫೆಡರರ್: ಎಎಫ್‌ಪಿ ಚಿತ್ರ
ರೋಜರ್ ಫೆಡರರ್: ಎಎಫ್‌ಪಿ ಚಿತ್ರ   

‌ಮೆಲ್ಬರ್ನ್: ಎರಡು ಹಂತದ ಮೊಣಕಾಲಿನ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಸ್ವಿಟ್ಜರ್‌ಲೆಂಡ್‌ನ ಶ್ರೇಷ್ಠ ಟೆನಿಸ್ ಆಟಗಾರ ರೋಜರ್ ಫೆಡರರ್ ಅವರು ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್‌ನಿಂದ ಹೊರಗುಳಿಯುತ್ತಿದ್ದಾರೆ ಎಂದು ಸೋಮವಾರ ಟೂರ್ನಿಯ ಸಂಘಟಕರು ತಿಳಿಸಿದ್ದಾರೆ.

ಫೆಬ್ರುಬರಿಯಿಂದ ಕಣದಿಂದ ಹೊರಗುಳಿದಿದ್ದ ರೋಜರ್ ಫೆಡರರ್ ಇತ್ತೀಚೆಗೆ ಅಭ್ಯಾಸ ಆರಂಭಿಸಿದ್ದರು. ಜೊತೆಗೆ, ಫೆಬ್ರುವರಿ 8ರಿಂದ ಮೆಲ್ಬರ್ನ್‌ನಲ್ಲಿ ಆರಂಭವಾಗಲಿರುವ ಗ್ರ್ಯಾನ್ ಸ್ಲ್ಯಾಮ್ ಪ್ರವೇಶ ಪಟ್ಟಿಯಲ್ಲೂ ಇದ್ದರು.

"ಆದರೆ, ಕಠಿಣ ಗ್ರ್ಯಾನ್ ಸ್ಲ್ಯಾಮ್‌ಗೆ ಸಿದ್ಧರಾಗಲು ರೋಜರ್ ಫೆಡರರ್ ಬಳಿ ಸಾಕಷ್ಟು ಸಮಯವಿಲ್ಲ. ಹಾಗಾಗಿ, 2021ರ ಮೆಲ್ಬರ್ನ್‌ ಟೂರ್ನಿಗೆ ಆಗಮಿಸಲು ಸಾಧ್ಯವಾಗದಿರುವುದಕ್ಕೆ ರೋಜರ್ ಫೆಡರರ್ ತೀವ್ರ ಹತಾಶೆಗೊಂಡಿದ್ದಾರೆ," ಎಂದುಟೂರ್ನಮೆಂಟ್ ಮುಖ್ಯಸ್ಥ ಕ್ರೇಗ್ ಟಿಲೆ ತಿಳಿಸಿದ್ದಾರೆ.

"ಕಮ್ ಬ್ಯಾಕ್ ಮಾಡಲು ತಯಾರಿ ನಡೆಸುತ್ತಿರುವ ಫೆಡರರ್‌ಗೆ ನಾವು ಶುಭ ಕೋರುತ್ತೇವೆ. 2022ರ ಮೆಲ್ಬರ್ನ್ ಟೂರ್ನಿಯಲ್ಲಿ ಅವರನ್ನು ನೋಡಲು ಬಯಸುತ್ತೇವೆ." ಎಂದಿದ್ದರೆ.

2020ರ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್‌ನಲ್ಲಿ ನೋವಾಕ್ ಜೊಕೊವಿಕ್ ವಿರುದ್ಧ ಸೋತ ಬಳಿಕ ಫೆಡರರ್ ಯಾವುದೇ ಟೂರ್ನೀಯಲ್ಲಿ ಆಡಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.