ಮೆಲ್ಬರ್ನ್: ಭಾರತದ ಸಾನಿಯಾ ಮಿರ್ಜಾ ಅವರ ಕೊನೆಯ ಗ್ರ್ಯಾನ್ಸ್ಲಾಮ್ ಡಬಲ್ಸ್ ಪಂದ್ಯ ಸೋಲಿನೊಂದಿಗೆ ಅಂತ್ಯವಾಯಿತು. ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮಹಿಳಾ ಡಬಲ್ಸ್ನ ಎರಡನೇ ಸುತ್ತಿನಲ್ಲಿ ಸಾನಿಯಾ ಅವರ ಕಜಕಸ್ತಾನದ ಜೊತೆಗಾರ್ತಿ ಅನ್ನಾ ಡ್ಯಾನಿಲಿನಾ 4-6, 6-4, 2-6ರಿಂದ ಬೆಲ್ಜಿಯಂನ ಅಲಿಸನ್ ವ್ಯಾನ್ ಯುತ್ವಂಕ್ ಮತ್ತು ಉಕ್ರೇನ್ನ ಅನ್ಹೆಲಿನಾ ಕಲಿನಿನಾ ಎದುರು ಸೋತರು.
ಸಾನಿಯಾ ಅವರು ಮಿಶ್ರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಜೊತೆಯಾಗಿ ಆಡಲಿದ್ದಾರೆ. ಪುರುಷರ ಡಬಲ್ಸ್ನ ಎರಡನೇ ಸುತ್ತಿನಲ್ಲಿ ಎನ್. ಶ್ರೀರಾಮ್ ಬಾಲಾಜಿ– ಜೀವನ್ ನೆಡುಂಚೇಳಿಯನ್ 4-6 4-6ರಿಂದ ಫ್ರಾನ್ಸ್ನ ಜೆರೆಮಿ ಚಾರ್ಡಿ– ಫ್ಯಾಬ್ರಿಕ್ ಮಾರ್ಟಿನ್ ವಿರುದ್ಧ ಸೋತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.