ADVERTISEMENT

ಅಕ್ಲೆಂಡ್ ಕ್ಲಾಸಿಕ್ ಟೆನಿಸ್‌ ಟೂರ್ನಿ: ಸರೇನಾ ವಿಲಿಯಮ್ಸ್‌ಗೆ ಸುಲಭ ಜಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 11:47 IST
Last Updated 7 ಜನವರಿ 2020, 11:47 IST
   

ಅಕ್ಲೆಂಡ್: ಅಕ್ಲೆಂಡ್ ಕ್ಲಾಸಿಕ್ ಸಿಂಗಲ್ಸ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಇಟಲಿಯ ಕಾಮಿಲಾ ಗಿಯೋರ್ಗಿ ಅವರನ್ನು ಮಣಿಸಿದಅನುಭವಿ ಆಟಗಾರ್ತಿಸೆರೇನಾ ವಿಲಿಯಮ್ಸ್, ಎರಡನೇ ಸುತ್ತಿಗೆ ಲಗ್ಗೆ ಇಟ್ಟರು.

ಪಂದ್ಯದಲ್ಲಿ ಗಿಯೋರ್ಗಿಯ ಸರ್ವ್‌ ಅನ್ನು ಮೂರು ಬಾರಿ ಮುರಿದ 38 ವಯಸ್ಸಿನ ಸೆರೇನಾ, ಎಂಟು ಏಸ್‌ ಸಿಡಿಸಿದರು. ಅವರು ಈ ಪಂದ್ಯವನ್ನು 6–3, 6–2 ಅಂತರದಿಂದ ಗೆದ್ದುಕೊಂಡರು.

ಪಂದ್ಯದ ಬಳಿಕ ಮಾತನಾಡಿದ ಸೆರೇನಾ, ‘ನನ್ನ ತೋಳುಗಳು ಮತ್ತು ಕಾಲುಗಳಲ್ಲಿ ಇನ್ನೂ ಬಲವಿದೆ ಎಂಬುದನ್ನು ತಿಳಿಯಲು ಇದರಿಂದ ಸಾಧ್ಯವಾಯಿತು’ ಎಂದು ಹೇಳಿದರು.

ADVERTISEMENT

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಅಮೆರಿಕ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ಕೆನಡಾದ ಬಿಯಾಂಕಾ ಅಂಡ್ರೆಸ್ಕ್ಯೂ ಎದುರು ಸೋಲು ಕಂಡಿದ್ದ ಸೆರೇನಾ ಆ ಬಳಿಕ ಕಣಕ್ಕಿಳಿದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.