ADVERTISEMENT

‘ವಿಶೇಷ ರ‍್ಯಾಂಕಿಂಗ್‌’ ಪದ್ಧತಿ: ಬದಲಾದ ನಿಯಮ, ಸೆರೆನಾ ಖುಷಿ

ಏಜೆನ್ಸೀಸ್
Published 27 ಡಿಸೆಂಬರ್ 2018, 19:03 IST
Last Updated 27 ಡಿಸೆಂಬರ್ 2018, 19:03 IST
ಸೆರೆನಾ ವಿಲಿಯಮ್ಸ್
ಸೆರೆನಾ ವಿಲಿಯಮ್ಸ್   

ಅಬು ಧಾಬಿ: ವಿಶ್ವ ಟೆನಿಸ್ ಸಂಸ್ಥೆಯು 2019ರಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ‘ವಿಶೇಷ ರ‍್ಯಾಂಕಿಂಗ್‌’ ಪದ್ಧತಿಗೆ ಅಮೆರಿಕದ ಆಟಗಾರ್ತಿ, ಸೆರೆನಾ ವಿಲಿಯಮ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಯಿಯಾದ ನಂತರ ಟೆನಿಸ್ ಅಂಗಣಕ್ಕೆ ಮರಳುವ ಆಟಗಾರ್ತಿಯರಿಗೆ ಹೊಸ ಪದ್ಧತಿಯಡಿ ವಿಶೇಷ ರ‍್ಯಾಂಕಿಂಗ್ ನೀಡಲಾಗುತ್ತದೆ. ಇದು ಅವರಿಗೆ ಶ್ರೇಯಾಂಕವನ್ನು ನೀಡಲು ಸಹಕಾರಿಯಾಗಲಿದೆ.

ಸೆರೆನಾ, ವಿಕ್ಟೋರಿಯಾ ಅಜರೆಂಕಾ ಮೊದಲಾದವರು ತಾಯಿಯಾದ ನಂತರವೂ ಅಂಗಣಕ್ಕೆ ಇಳಿದಿದ್ದು ಇಂಥ ಪದ್ಧತಿ ಜಾರಿಗಾಗಿ ದನಿ ಎತ್ತಿದ್ದರು.

ADVERTISEMENT

ಇಲ್ಲಿ ಗುರುವಾರ ನಡೆದ ಸಹೋದರಿ ವೀನಸ್ ವಿಲಿಯಮ್ಸ್ ಅವರ ಪ್ರದರ್ಶನ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಸೆರೆನಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಇದು ಅತ್ಯುತ್ತಮ ನಡೆ. ವಿವಾಹಿತ ಆಟಗಾರ್ತಿಯರಿಗೆ ಈ ಪದ್ಧತಿ ತುಂಬ ಖುಷಿ ನೀಡಲಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.