ADVERTISEMENT

ಎಸ್‌.ಎಂ. ಕೃಷ್ಣ ಸ್ಮಾರಕ ಟೆನಿಸ್‌ 31ರಿಂದ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 23:38 IST
Last Updated 24 ಮಾರ್ಚ್ 2025, 23:38 IST
<div class="paragraphs"><p>ಎಸ್‌.ಎಂ. ಕೃಷ್ಣ</p></div>

ಎಸ್‌.ಎಂ. ಕೃಷ್ಣ

   

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್‌.ಎಂ.ಕೃಷ್ಣ ಅವರ ಸ್ಮರಣಾರ್ಥ ಐಟಿಎಫ್‌ ವಿಶ್ವ ಟೆನಿಸ್‌ ಟೂರ್‌ ಪುರುಷರ ಎಂ25 ಟೂರ್ನಿಯನ್ನು ಇದೇ 31ರಿಂದ ಏ.6ರವರೆಗೆ ಆಯೋಜಿಸುವುದಾಗಿ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ (ಕೆಎಸ್‌ಎಲ್‌ಟಿಎ) ಪ್ರಕಟಿಸಿದೆ. ಟೂರ್ನಿಯು ಒಟ್ಟು ₹25.67 ಲಕ್ಷ ಬಹುಮಾನ ಮೊತ್ತವನ್ನು ಒಳಗೊಂಡಿದೆ.

ಕೆಎಸ್‌ಎಲ್‌ಟಿಎ ಅಧ್ಯಕ್ಷರಾಗಿ ಎರಡು ದಶಕಗಳ ಕಾಲ (1999–2020) ಸೇವೆ ಸಲ್ಲಿಸಿದ್ದ ಕೃಷ್ಣ ಅವರಿಗೆ ಗೌರವ ಸಲ್ಲಿಕೆಯ ಭಾಗವಾಗಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಟೂರ್ನಿಯನ್ನು ಆಯೋಜಿಸಲಾಗಿದೆ. ಟೆನಿಸ್ ಬಗ್ಗೆ ಅಪಾರ ಒಲವು ಹೊಂದಿದ್ದ ಕೃಷ್ಣ ಅವರು ಕೆಎಸ್‌ಎಲ್‌ಟಿಎ ಅನ್ನು ಮೇಲ್ದರ್ಜೆಗೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ADVERTISEMENT

ಮಾರ್ಚ್ 29 ಮತ್ತು 30ರಂದು ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. 31ರಂದು ಮುಖ್ಯಸುತ್ತಿನ ಸ್ಪರ್ಧೆ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.