ADVERTISEMENT

ರಿಧಿಗೆ ಆಘಾತ ನೀಡಿದ ಶ್ರೀ ತನ್ವಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 15:41 IST
Last Updated 17 ಫೆಬ್ರುವರಿ 2021, 15:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಅಗ್ರ ಶ್ರೇಯಾಂಕಿತ ಆಟಗಾರ್ತಿ ರಿಧಿ ಚೌಧರಿಗೆ ಆಘಾತ ನೀಡಿದ ಶ್ರೀ ತನ್ವಿ ದಾಸರಿ ಅವರು ಎಐಟಿಎ 16 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ‌

ಅಮೋಘ ಸ್ಪೋರ್ಟ್ಸ್ ಟೆನಿಸ್ ಅಕಾಡೆಮಿಯು ಇಲ್ಲಿಯ ಪ್ಯಾಲೇಸ್ ಮೈದಾನದಲ್ಲಿ ಆಯೋಜಿಸಿರುವ ಟೂರ್ನಿಯಲ್ಲಿ ಬುಧವಾರ ಶ್ರೀ ತನ್ವಿ 6–2, 4–6, 6–4ರಿಂದ ರಿಧಿ ಅವರನ್ನು ಸೋಲಿಸಿದರು.

ಬಾಲಕಿಯರ ಸಿಂಗಲ್ಸ್ ವಿಭಾಗದ ಇತರ ಪ್ರೀಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ವನ್ಯಾ ಶ್ರೀವಾಸ್ತವ್‌ 4-6, 7-6, 6-2ರಿಂದ ನಿಧಿ ಭುವಿಲಾ ಶ್ರೀನಿವಾಸ ಎದುರು, ಗಗನಾ ಮೋಹನ್ ಕುಮಾರ್‌ 6-0, 6-3ರಲ್ಲಿ ಧರಣಿ ಧನ್ಯಂತ ಶ್ರೀನಿವಾಸ ವಿರುದ್ಧ, ಕಾಜಲ್ ರಾಮಿಸೆಟ್ಟಿ 6-2, 6-1ರಿಂದ ಲಾವಣ್ಯ ತಿವಾರಿ ವಿರುದ್ಧ ಜಯಿಸಿ ಎಂಟರಘಟ್ಟ ಪ್ರವೇಶಿಸಿದರು.

ADVERTISEMENT

ಬಾಲಕರ ವಿಭಾಗದಲ್ಲಿ ಮನದೀಪ್ ರೆಡ್ಡಿ 6-1, 6-0ರಿಂದ ಸಕ್ಷಮ್‌ ಸುಮನ್ ವಿರುದ್ಧ, ಧೃವ ಅಡಿಗ 6-4, 6-3ರಿಂದ ಶೌರ್ಯ ಭಟ್ಟಾಚಾರ್ಯ ಎದುರು, ರೇತಿನ್ ಪ್ರಣವ್‌ 6-1, 6-1ರಿಂದ ಗೌರವ್‌ ಸುಮುಖ್ ಮೇಲೆ, ಜೇಸನ್ ಮೈಕೆಲ್ ಡೇವಿಡ್‌ 6-2, 6-0ರಿಂದ ಸೋಮ ಸುಹಾಸ್‌ ವಿರುದ್ಧ ಜಯಿಸಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.