ADVERTISEMENT

ಟೇಬಲ್ ಟೆನಿಸ್ ಟೂರ್ನಿ | ತಮೋಜ್ಞಾ, ತನಿಷ್ಕಾಗೆ ಪ್ರಶಸ್ತಿ

ರಾಜ್ಯ ರ‍್ಯಾಂಕಿಂಗ್‌ ಟಿಟಿ: ಸಾಕ್ಷ್ಯ, ಸಿದ್ಧಾಂತ್ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 14:11 IST
Last Updated 12 ಜುಲೈ 2025, 14:11 IST
ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಭಾನುವಾರ ನಡೆದ ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ಪ್ರಶಸ್ತಿ ಜಯಿಸಿದವರು (ಎಡದಿಂದ), ಸಾಕ್ಷ್ಯಾ ಸಂತೋಷ್, ಸಿದ್ಧಾಂತ್, ತನಿಷ್ಕಾ ಮತ್ತು ತಮೋಜ್ಞಾ 
ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಭಾನುವಾರ ನಡೆದ ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ಪ್ರಶಸ್ತಿ ಜಯಿಸಿದವರು (ಎಡದಿಂದ), ಸಾಕ್ಷ್ಯಾ ಸಂತೋಷ್, ಸಿದ್ಧಾಂತ್, ತನಿಷ್ಕಾ ಮತ್ತು ತಮೋಜ್ಞಾ    

ಮಂಗಳೂರು:  ಎಂ. ತಮೋಜ್ಞಾ ಮತ್ತು ತನಿಷ್ಕಾ ಕಪಿಲ್ ಕಾಲಭೈರವ ಅವರು ಇಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 15 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು. 

ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶನಿವಾರ ನಡೆದ 15 ವರ್ಷದೊಳಗಿನವರ ಫೈನಲ್‌ನಲ್ಲಿ ತಮೋಜ್ಞಾ 11 - 8, 11 -7, 11-3 ರಿಂದ ಎಂ. ಸಿದ್ಧಾಂತ್ ವಿರುದ್ಧ ಗೆದ್ದರು. ಸೆಮಿಫೈನಲ್‌ನಲ್ಲಿ ತಮೋಜ್ಞಾ 11–9,6–11, 11–4, 11–7ರಿಂದ ಎಂ. ಸಾತ್ವಿಕ್ ವಿರುದ್ಧ ಗೆದ್ದರು. ಇನ್ನೊಂದು ಪಂದ್ಯದಲ್ಲಿ ಸಿದ್ಧಾಂತ್ 11–6, 8–11, 14–12, 8–11, 11–5ರಿಂದ ವೇದಾಂತ್ ವಸಿಷ್ಠ ವಿರುದ್ಧ ಜಯಿಸಿದರು. 

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ತನಿಷ್ಕಾ 11-6, 11-2 , 11-3 ರಿಂದ ಸಾಕ್ಷ್ಯ ಸಂತೋಷ್ ವಿರುದ್ಧ ಜಯಿಸಿದರು. ಸೆಮಿಫೈನಲ್‌ ಪಂದ್ಯಗಳಲ್ಲಿ; ತನಿಷ್ಕಾ 7–11, 11–4, 11–5, 9–11, 11–6ರಿಂದ ರಾಶಿ ವಿ ರಾವ್ ವಿರುದ್ಧ; ಸಾಕ್ಷ್ಯ 11–3, 11–7,11–3ರಿಂದ ಕೃಶಾ ಪಿ ಕರ್ಕೆರಾ ವಿರುದ್ಧ ಜಯಿಸಿದರು.  

ADVERTISEMENT

13 ವರ್ಷದೊಳಗಿನವರ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಸಾಕ್ಷ್ಯ 11 - 8, 11-5 , 11-5ರಿಂದ ಯುಕ್ತಾ ಹರ್ಷ ವಿರುದ್ಧ ಗೆದ್ದರು. ನಾಲ್ಕರ ಘಟ್ಟದಲ್ಲಿ ಸಾಕ್ಷ್ಯ 11 - 5 , 11 - 5 , 11 - 1ರಿಂದ ರಿಯಾ ಹರ್ಟಿಸ್ ಹಾಗೂ ಯುಕ್ತಾ 1 - 6 , 11 - 8 , 6 - 11 , 11 - 8 ರಿಂದ ಎಂ. ಆದ್ಯಾ ವಿರುದ್ಧ ಗೆಲುವು ಸಾಧಿಸಿದರು. 

ಬಾಲಕರ ಫೈನಲ್‌ನಲ್ಲಿ ಸಿದ್ಧಾಂತ್ 1 - 9 , 11 - 13 , 11 - 4 , 8 - 11 , 11 - 9ರಿಂದ ಎಂ. ಸಾತ್ವಿಕ್ ವಿರುದ್ಧ ಜಯಿಸಿದರು.  ಸೆಮಿಫೈನಲ್‌ನಲ್ಲಿ ಸಾತ್ವಿಕ್ 11 - 7, 16 - 14, 7 - 11, 8 - 11, 11 - 6ರಿಂದ ದೀಪಕ್ ಬೆಳವಡಿ ವಿರುದ್ಧ ಹಾಗೂ ಸಿದ್ಧಾಂತ್ 11 - 5 , 11 - 4 , 11 - 7ರಿಂದ ಸುಚೇತ್ ಧರೆಣ್ಣವರ ವಿರುದ್ಧ ಗೆದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.