ADVERTISEMENT

ರೋಹನ್‌ ಬೋಪಣ್ಣ-ಅರ್ಜುನ್‌ಗೆ ವೈಲ್ಡ್‌ಕಾರ್ಡ್‌

ಮಹಾರಾಷ್ಟ್ರ ಓಪನ್‌ ಟೆನಿಸ್‌ ಟೂರ್ನಿ

ಪಿಟಿಐ
Published 31 ಜನವರಿ 2020, 19:45 IST
Last Updated 31 ಜನವರಿ 2020, 19:45 IST
ರೋಹನ್‌ ಬೋಪಣ್ಣ
ರೋಹನ್‌ ಬೋಪಣ್ಣ   

ಪುಣೆ: ಭಾರತದ ರೋಹನ್‌ ಬೋಪಣ್ಣ ಹಾಗೂ ಅರ್ಜುನ್‌ ಖಾಡೆ ಜೋಡಿಗೆ ಮಹಾರಾಷ್ಟ್ರ ಓಪನ್‌ ಟೆನಿಸ್‌ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ವೈಲ್ಡ್‌ಕಾರ್ಡ್‌ ಪ್ರವೇಶ ಲಭಿಸಿದೆ. ಮೂರನೇ ಆವೃತ್ತಿಯ ಟೂರ್ನಿಯು ಫೆಬ್ರುವರಿ 3ರಿಂದ 9ರವರೆಗೆ ನಡೆಯಲಿದೆ.

ವಿಶ್ವ ಡಬಲ್ಸ್ ಕ್ರಮಾಂಕದಲ್ಲಿ 38ನೇ ಸ್ಥಾನದಲ್ಲಿರುವ ಬೋಪಣ್ಣ, ಹೋದ ಆವೃತ್ತಿಯ ಡಬಲ್ಸ್ ವಿಭಾಗದಲ್ಲಿ ದಿವಿಜ್‌ ಶರಣ್‌ ಜೊತೆಗೂಡಿ ಚಾಂಪಿಯನ್‌ ಪಟ್ಟ ಧರಿಸಿದ್ದರು. ದಕ್ಷಿಣ ಏಷ್ಯಾದ ಏಕೈಕ ಎಟಿಪಿ ಟೂರ್‌ ಟೂರ್ನಿ ಎನಿಸಿಕೊಂಡಿರುವ ಮಹಾರಾಷ್ಟ್ರ ಓಪನ್‌ನಲ್ಲಿ ಈ ಬಾರಿ ಅವರು ಸ್ಥಳೀಯ ಆಟಗಾರ ಅರ್ಜುನ್‌ ಖಾಡೆ ಜೊತೆಯಾಗಿ ಆಡಲಿದ್ದಾರೆ.

ದಿವಿಜ್‌, ಈಗಾಗಲೇ ಟೂರ್ನಿಯ ಪ್ರಧಾನ ಸುತ್ತಿಗೆ ನೇರ ಪ್ರವೇಶ ಪಡೆದಿದ್ದು, ರಷ್ಯಾ ಆಟಗಾರ ಅರ್ಟೆಮ್‌ ಸಿತಾಕ್‌ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ. ಅರ್ಜುನ್‌ ಖಾಡೆ ಅವರಿಗೆ ಸಿಂಗಲ್ಸ್‌ ವಿಭಾಗದಲ್ಲೂ ವೈಲ್ಡ್‌ಕಾರ್ಡ್‌ ಪ್ರವೇಶ ಸಿಕ್ಕಿದೆ. ಶಶಿಕುಮಾರ್ ಮುಕುಂದ್‌, ವೈಲ್ಡ್‌ಕಾರ್ಡ್‌ ಪಡೆದ ಭಾರತದ ಇನ್ನೋರ್ವ ಆಟಗಾರ.

ADVERTISEMENT

ಖಾಡೆ ಹಾಗೂ ಮುಕುಂದ್‌ ಸೇರಿದಂತೆ ಭಾರತದ ಐವರು ಆಟಗಾರರು ಸಿಂಗಲ್ಸ್‌ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟು 28 ಆಟಗಾರರನ್ನು ಒಳಗೊಂಡ ಡ್ರಾ ಇದಾಗಿದೆ.

ಶನಿವಾರ ಹಾಗೂ ಭಾನುವಾರ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.