ADVERTISEMENT

ಟೆನಿಸ್‌ | ಒಲಿಂಪಿಕ್ಸ್‌ ಅರ್ಹತೆಗೆ ಮಾನದಂಡ ನಿಗದಿ

ಪಿಟಿಐ
Published 9 ಜೂನ್ 2020, 15:46 IST
Last Updated 9 ಜೂನ್ 2020, 15:46 IST

ಲಂಡನ್: ಮುಂದಿನ ವರ್ಷದ ಜೂನ್‌ 7ರಂದು ಪ್ರಕಟವಾಗುವ ಎಟಿಪಿ ಹಾಗೂ ಡಬ್ಲ್ಯುಟಿಎ ರ‍್ಯಾಂಕಿಂಗ್‌ಗಳ ಆಧಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವವರ ಅಂತಿಮ ಪಟ್ಟಿಯನ್ನು ಪ್ರಕಟಿಸುವುದಾಗಿ ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌) ಮಂಗಳವಾರ ತಿಳಿಸಿದೆ.

ಪುರುಷ ಮತ್ತು ಮಹಿಳಾ ಸಿಂಗಲ್ಸ್‌ನಲ್ಲಿ ಒಟ್ಟು 64 ಮಂದಿ ಕಣಕ್ಕಿಳಿಯಲಿದ್ದು, ಈ ಪೈಕಿ ಜೂನ್‌ 7ರ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಉತ್ತಮ ಸ್ಥಾನ ಹೊಂದಿರುವ 56 ಮಂದಿ ನೇರ ಅರ್ಹತೆ ಪಡೆಯಲಿದ್ದಾರೆ.

ಡಬಲ್ಸ್‌ನಲ್ಲಿ 32 ಜೋಡಿ ಅಂಗಳಕ್ಕಿಳಿಯಬಹುದಾಗಿದೆ. ಜೂನ್‌ 7ರ ರ‍್ಯಾಂಕಿಂಗ್‌ನಲ್ಲಿ ಅಗ್ರ ಹತ್ತರೊಳಗೆ ಸ್ಥಾನ ಪಡೆದಿರುವವರಿಗೆ ನೇರ ಅರ್ಹತೆ ಸಿಗಲಿದ್ದು, ತಮ್ಮ ಜೋಡಿಯನ್ನು ಆಯ್ಕೆ ಮಾಡಿಕೊಳ್ಳಲು ಅವರಿಗೆ ಮುಕ್ತ ಅವಕಾಶ ನೀಡಲಾಗಿದೆ.

ADVERTISEMENT

ಮಿಶ್ರ ಡಬಲ್ಸ್‌ನಲ್ಲಿ 16 ಜೋಡಿಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯಲಿವೆ. ಟೋಕಿಯೊ ಕೂಟವು ಮುಂದಿನ ವರ್ಷದ ಜುಲೈ 23ರಿಂದ ಆಗಸ್ಟ್‌ 8ರವರೆಗೆ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.