ADVERTISEMENT

ಬಿಲ್ಲಿ ಜೀನ್ ಕಿಂಗ್‌ ಕಪ್ ಟೆನಿಸ್‌: ಅಮೆರಿಕ ವಿರುದ್ಧ ಉಕ್ರೇನ್ ಕಣಕ್ಕೆ

ರಾಯಿಟರ್ಸ್
Published 13 ಏಪ್ರಿಲ್ 2022, 13:19 IST
Last Updated 13 ಏಪ್ರಿಲ್ 2022, 13:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ರಷ್ಯಾ ಆಕ್ರಮಣದಿಂದ ನಲುಗಿರುವ ಉಕ್ರೇನ್ ದೇಶದ ತಂಡವು ಬಿಲ್ಲಿ ಜೀನ್ ಕಿಂಗ್ ಕಪ್ ಟೆನಿಸ್‌ ಟೂರ್ನಿಯಲ್ಲಿ ಅಮೆರಿಕ ತಂಡದ ಸವಾಲು ಎದುರಿಸಲಿದೆ.

ಅಮೆರಿಕದ ನಾರ್ತ್‌ ಕರೋಲಿನಾದಲ್ಲಿ ಶುಕ್ರವಾರ ಮತ್ತು ಶನಿವಾರ ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳ ಮೂಲಕ, ದೇಶವಾಸಿಗಳ ಸಮರದ ವ್ಯಾಕುಲತೆಯನ್ನು ಸ್ವಲ್ಪಮಟ್ಟಿಗೆ ಮರೆಸುವ ಪ್ರಯತ್ನ ಮಾಡುವುದಾಗಿ ಉಕ್ರೇನ್ ಆಟಗಾರ್ತಿಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇವು ಕ್ವಾಲಿಫೈಯರ್‌ ಪಂದ್ಯಗಳಾಗಿದ್ದು ನವೆಂಬರ್‌ನಲ್ಲಿ ಫೈನಲ್ಸ್‌ ನಡೆಯಲಿವೆ.

ADVERTISEMENT

ನವೆಂಬರ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ನಾವು ಜಯಿಸಿದರೆ ಟ್ರೋಫಿಯನ್ನು ದೇಶದಲ್ಲಿ ಶಾಂತಿ ನೆಲೆಸುವ ಸೂಚಕವಾಗಿ ಸ್ವೀಕರಿಸುವುದಾಗಿ ಉಕ್ರೇನ್ ತಂಡದ ನಾಯಕಿ ಓಲ್ಗಾ ಸವಚುಕ್‌ ಮತ್ತು ಸಹ ಆಟಗಾರ್ತಿ ಕ್ಯಾತರಿನಾ ಜವತ್ಸಕಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.