ADVERTISEMENT

ಧಾರವಾಡದ ರೋಹಿತ್‌ ವಿಂಬಲ್ಡನ್‌ ಟೂರ್ನಿಗೆ ಅಂಪೈರ್‌

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 18:45 IST
Last Updated 20 ಜೂನ್ 2018, 18:45 IST
ರೋಹಿತ್‌ ಸಂಗಮೇಶ ಬಾಲಾಗವಿ
ರೋಹಿತ್‌ ಸಂಗಮೇಶ ಬಾಲಾಗವಿ   

ಹುಬ್ಬಳ್ಳಿ: ಐಟಿಎಫ್‌ ಮತ್ತು ಡೇವಿಸ್ ಕಪ್‌ ಸೇರಿದಂತೆ ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಅಂಪೈರ್‌ ಆಗಿ ಕೆಲಸ ಮಾಡಿರುವ ಧಾರವಾಡದ ರೋಹಿತ್‌ ಸಂಗಮೇಶ ಬಾಲಾಗವಿ, ಅವರು ಇದೇ ತಿಂಗಳು 25ರಿಂದ ಲಂಡನ್‌ನಲ್ಲಿ ನಡೆಯಲಿರುವ ವಿಂಬಲ್ಡನ್‌ ಟೆನಿಸ್ ಟೂರ್ನಿಗೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಲು ಆಯ್ಕೆಯಾಗಿದ್ದಾರೆ.

ಎಟಿಪಿ ವರ್ಲ್ಡ್‌ ಟೂರ್‌, ಫೆಡರೇಷನ್‌ ಕಪ್‌, ಚೆನ್ನೈ ಓಪನ್‌ ಟೂರ್ನಿಗಳಲ್ಲಿ ಅಂಪೈರ್‌ ಆಗಿ ಕೆಲಸ ಮಾಡಿದ್ದರು. 2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಡಬ್ಲ್ಯೂಟಿಎ ಟೂರ್ನಿಯಲ್ಲಿ ಮೊದಲ ಬಾರಿ ಅಂಪೈರ್‌ ಆಗಿದ್ದರು. ಕೆಲಸ ಮಾಡುವ ಅವಕಾಶ ಸಿಕ್ಕಿದ್ದರಿಂದ ಹೆಮ್ಮೆ ಎನಿಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT