
ಟೆನಿಸ್
ಬೆಂಗಳೂರು: ಕರ್ನಾಟಕದ ರಚೆಲ್ ರಾಯುಡು ಹಾಗೂ ತೆಲಂಗಾಣದ ಜೆ.ಕೆ.ಕಲಾ ಅವರು ಎಐಟಿಎ ಟಿಎಸ್–7 ರಾಷ್ಟ್ರೀಯ ಸರಣಿಯ ಟೆನಿಸ್ ಟೂರ್ನಿಯ (12 ವರ್ಷದೊಳಗಿನವರ) ಬಾಲಕಿಯರ ಸಿಂಗಲ್ಸ್‌ನಲ್ಲಿ ಗುರುವಾರ ಫೈನಲ್ ಪ್ರವೇಶಿಸಿದರು.
ಸುಂಕದಕಟ್ಟೆಯ ‘ಫೋಕಸ್ ಟೆನಿಸ್ ಮತ್ತು ಪಿಕಲ್‌ಬಾಲ್ ಅಕಾಡೆಮಿ’ಯಲ್ಲಿ ನಡೆಯುತ್ತಿರುವ ಟೂರ್ನಿಯ ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಕಲಾ ಅವರು 6–1, 6–2ರಿಂದ ಕರ್ನಾಟಕದ ಶೆಲ್ಸೀ ಔರಾ ಮೆನನ್ ವಿರುದ್ಧ ಹಾಗೂ ರಚೆಲ್ 6–4, 5–7, 10–5ರಿಂದ ಮೂರನೇ ಶ್ರೇಯಾಂಕದ ಆಟಗಾರ್ತಿ ಎಸ್.ಬಿ.ಧಾತ್ರಿ ವಿರುದ್ಧ ಗೆಲುವು ಸಾಧಿಸಿದರು.
ಬಾಲಕರ ವಿಭಾಗದಲ್ಲಿ ಕರ್ನಾಟಕದ ಆಟಗಾರರಾದ ದರ್ಶ್ ಮಲ್ಹಾನ್ ಹಾಗೂ ಹೋಜಸ್ವಿನ್ ಎಚ್.ಎಚ್. ಅವರು ಪ್ರಶಸ್ತಿ ಸುತ್ತು ಪ್ರವೇಶಿಸಿದರು.
ನಾಲ್ಕನೇ ಶ್ರೇಯಾಂಕದ ಆಟಗಾರ ಹೋಜಸ್ವಿನ್ ಅವರು ಸೆಮಿಫೈನಲ್ ಪಂದ್ಯದಲ್ಲಿ 6–1, 3–6, 10–8ರಿಂದ ಅಗ್ರ ಶ್ರೇಯಾಂಕದ ಆಟಗಾರ ಶ್ರವಿನ್ ರುಬೇಷ್ ಅವರಿಗೆ ಆಘಾತ ನೀಡಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ದರ್ಶ್ ಅವರು 6–2, 6–3ರಿಂದ ಮೂರನೇ ಶ್ರೇಯಾಂಕದ ಆಟಗಾರ ಆಹಾನ್ ಶಾ ವಿರುದ್ಧ ಸುಲಭ ಜಯ ದಾಖಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.