ADVERTISEMENT

ಅಮೆರಿಕ ಓಪನ್: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಸೆರೆನಾ ವಿಲಿಯಮ್ಸ್‌ 

ಏಜೆನ್ಸೀಸ್
Published 10 ಸೆಪ್ಟೆಂಬರ್ 2020, 6:02 IST
Last Updated 10 ಸೆಪ್ಟೆಂಬರ್ 2020, 6:02 IST
ಸೆರೆನಾ ವಿಲಿಯಮ್ಸ್
ಸೆರೆನಾ ವಿಲಿಯಮ್ಸ್   

ನ್ಯೂಯಾರ್ಕ್: ಆತಿಥೇಯ ದೇಶದ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಬುಧವಾರ ತಡರಾತ್ರಿನಡೆದಮಹಿಳೆಯರ ಸಿಂಗಲ್ಸ್‌ನಲ್ಲಿವಿಶ್ವದ ಮೂರನೇ ಶ್ರೇಯಾಂಕದ ಆಟಗಾರ್ತಿ ಸೆರೆನಾ, ಬಲ್ಗೇರಿಯದ ಸ್ವೆಟಾನಾ ಪಿರೊಂಕೋವಾ ವಿರುದ್ಧ 6–4, 6–3, 6–2 ಸೆಟ್‌ಗಳಿಂದ ಗೆದ್ದರು.

ಸೆರೆನಾಸೆಮಿಫೈನಲ್ಸ್‌ನಲ್ಲಿಬೆಲಾರಸ್‌ನ ಟೆನಿಸ್‌ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ ಎದುರು ಸೆಣಸಲಿದ್ದಾರೆ.

ADVERTISEMENT

ಪುರುಷರ ವಿಭಾಗದಲ್ಲಿರಷ್ಯಾದಡೇನಿಯಲ್ ಮೆಡ್ವೆಡೆವ್ 7-6, 6-3, 7-6 ರಿಂದ ಆಂಡ್ರೆ ರುಬ್ಲೆವ್ ವಿರುದ್ಧ ಗೆಲುವು ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.