ADVERTISEMENT

US Open 2022: ಮರೆಗೆ ಸೋಲು, ಮೆಡ್ವೆಡೆವ್‌ಗೆ ಗೆಲುವು

ಏಜೆನ್ಸೀಸ್
Published 3 ಸೆಪ್ಟೆಂಬರ್ 2022, 19:31 IST
Last Updated 3 ಸೆಪ್ಟೆಂಬರ್ 2022, 19:31 IST
ಡೇನಿಯಲ್ ಮೆಡ್ವೆಡೆವ್‌– ಎಎಫ್‌ಪಿ ಚಿತ್ರ
ಡೇನಿಯಲ್ ಮೆಡ್ವೆಡೆವ್‌– ಎಎಫ್‌ಪಿ ಚಿತ್ರ   

ನ್ಯೂಯಾರ್ಕ್‌: ಅಗ್ರ ರ‍್ಯಾಂಕ್‌ನ ಆಟಗಾರ ರಷ್ಯಾದ ಡೇನಿಯಲ್‌ ಮೆಡ್ವೆಡೆವ್‌ ಪುರುಷರ ಸಿಂಗಲ್ಸ್‌ ವಿಭಾಗ ಮೂರನೇ ಸುತ್ತು ಪ್ರವೇಸಿದರು. ಮೂರನೇ ಸುತ್ತಿನಲ್ಲಿ ಅವರು 6-4, 6-2, 6-2 ರಲ್ಲಿ ಚೀನಾದ ವು ಯಿಬಿಂಗ್‌ ವಿರುದ್ಧ ಗೆದ್ದರು.

ಬ್ರಿಟನ್‌ನ ಆ್ಯಂಡಿ ಮರೆ ಮೂರನೇ ಸುತ್ತಿನಲ್ಲಿ ಮುಗ್ಗರಿಸಿದರು. ಇಟಲಿಯ ಮಟೆಯೊ ಬೆರೆಟೆನಿ 6-4, 6-4, 6-7, 6-3 ರಲ್ಲಿ ಮರೆ ಅವರನ್ನು ಮಣಿಸಿದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯಗಳಲ್ಲಿ ಅಮೆರಿಕದ ಕೊಕೊ ಗಾಫ್‌ 6–2, 6–3 ರಲ್ಲಿ ತಮ್ಮದೇ ದೇಶದ ಮ್ಯಾಡಿಸನ್‌ ಕೀಸ್‌ ವಿರುದ್ಧ ಗೆದ್ದರೆ, ಟ್ಯುನಿಷಿಯಾದ ಆನ್ಸ್‌ ಜಬೇರ್‌ 4–6, 6–4, 6–3 ರಲ್ಲಿ ಅಮೆರಿಕದ ಶೆಲ್ಬಿ ರೋಜರ್ಸ್‌ ಅವರನ್ನು ಮಣಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.