ADVERTISEMENT

ವಿಶ್ವ ಟೀಮ್‌ ಟೆನಿಸ್‌ನಲ್ಲಿ ವೀನಸ್‌ ಕಣಕ್ಕೆ

ಏಜೆನ್ಸೀಸ್
Published 26 ಜೂನ್ 2020, 9:55 IST
Last Updated 26 ಜೂನ್ 2020, 9:55 IST
ವೀನಸ್‌ ವಿಲಿಯಮ್ಸ್‌ 
ವೀನಸ್‌ ವಿಲಿಯಮ್ಸ್‌    

ವಾಷಿಂಗ್ಟನ್‌: ಅಮೆರಿಕದ ಅನುಭವಿ ಆಟಗಾರ್ತಿ ವೀನಸ್‌ ವಿಲಿಯಮ್ಸ್‌ ಅವರು ವಿಶ್ವ ಟೀಮ್‌ ಟೆನಿಸ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಅವರು 15ನೇ ಬಾರಿ ಈ ಟೂರ್ನಿಯಲ್ಲಿ ಆಡಲಿದ್ದಾರೆ.

ಒಂಬತ್ತು ತಂಡಗಳನ್ನೊಳಗೊಂಡ ಈ ಟೂರ್ನಿಯು ಜುಲೈ 12ರಿಂದ ಆರಂಭವಾಗಲಿದೆ. ವೆಸ್ಟ್‌ ವರ್ಜಿನಿಯಾದಲ್ಲಿ ಒಟ್ಟು ಮೂರು ವಾರಗಳ ಕಾಲ ಪಂದ್ಯಗಳು ನಡೆಯಲಿವೆ.

ADVERTISEMENT

40 ವರ್ಷ ವಯಸ್ಸಿನ ವೀನಸ್‌ ಅವರು ವಾಷಿಂಗ್ಟನ್‌ ಕ್ಯಾಸ್ಟಲ್ಸ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ.ಅಮೆರಿಕದ ಆಟಗಾರ್ತಿಯು ಗ್ರ್ಯಾನ್‌ಸ್ಲಾಮ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಏಳು ಪ್ರಶಸ್ತಿಗಳನ್ನು ಜಯಿಸಿದ ಸಾಧನೆ ಮಾಡಿದ್ದಾರೆ.

2,500 ಆಸನ ಸಾಮರ್ಥ್ಯವಿರುವ ಹೊರಾಂಗಣ ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜನೆಯಾಗಿದೆ. ಪ್ರತಿ ಪಂದ್ಯವನ್ನು ವೀಕ್ಷಿಸಲು 500 ಮಂದಿಗೆ ಅವಕಾಶ ನೀಡಲು ಆಯೋಜಕರು ತೀರ್ಮಾನಿಸಿದ್ದಾರೆ.

ಪಂದ್ಯಗಳನ್ನು ನೋಡಲು ಕ್ರೀಡಾಂಗಣದೊಳಗೆ ಹೋಗುವ ಪ್ರೇಕ್ಷಕರು ಮುಖಗವಸು ಧರಿಸುವುದು ಹಾಗೂ ದೇಹದ ಉಷ್ಣಾಂಶ ಪರೀಕ್ಷಿಸಿಕೊಂಡಿರುವ ಪತ್ರ ತೋರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

₹37.79 ಕೋಟಿ ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ ಈ ವರ್ಷದ ಆಸ್ಟ್ರೇಲಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಸೋಫಿಯಾ ಕೆನಿನ್‌, 2017ರ ಅಮೆರಿಕ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದ ಸ್ಲೋನ್‌ ಸ್ಟೀಫನ್ಸ್‌ ಹಾಗೂ ಪುರುಷರ ಡಬಲ್ಸ್‌ ವಿಭಾಗದ ಸ್ಪರ್ಧಿಗಳಾದ ಬಾಬ್‌ ಮತ್ತು ಮೈಕ್‌ ಬ್ರಯಾನ್‌ ಅವರೂ ಪಾಲ್ಗೊಳ್ಳಲಿದ್ದಾರೆ.

ಬ್ರಯಾನ್‌ ಸಹೋದರರು ಗ್ರ್ಯಾನ್‌ಸ್ಲಾಮ್‌ನಲ್ಲಿ ಒಟ್ಟು 16 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.