ADVERTISEMENT

ಡಬ್ಲ್ಯುಟಿಎ ಫೈನಲ್ಸ್‌ ಸೇರಿ 11 ಟೆನಿಸ್‌ ಟೂರ್ನಿಗಳು ರದ್ದು

ಏಜೆನ್ಸೀಸ್
Published 24 ಜುಲೈ 2020, 11:22 IST
Last Updated 24 ಜುಲೈ 2020, 11:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಡಬ್ಲ್ಯುಟಿಎ ಫೈನಲ್ಸ್‌ ಸೇರಿದಂತೆ ಚೀನಾದಲ್ಲಿ ನಿಗದಿಯಾಗಿದ್ದ 11 ಟೆನಿಸ್‌ ಟೂರ್ನಿಗಳನ್ನು ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ.

ಚೀನಾದ ಪ್ರಮುಖ ಕ್ರೀಡಾ ಆಡಳಿತ ಮಂಡಳಿಯು, ಕೋವಿಡ್‌ ಕಾರಣ ಈ ವರ್ಷ ಬಾಕಿಯುಳಿದ ಯಾವುದೇ ಟೂರ್ನಿಗಳನ್ನು ಆಯೋಜಿಸುವುದಿಲ್ಲ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಅಕ್ಟೋಬರ್‌–ನವೆಂಬರ್‌ನಲ್ಲಿ ನಿಗದಿಯಾಗಿದ್ದ ಟೂರ್ನಿಗಳನ್ನು ಮುಂದೂಡುವ ಅಥವಾ ಮರು ನಿಗದಿ ಮಾಡುವ ಬದಲಿಗೆ ರದ್ದು ಮಾಡುವ ನಿರ್ಧಾರಕ್ಕೆ ಎಟಿಪಿ ಮತ್ತು ಡಬ್ಲ್ಯುಟಿಎ ಬಂದಿವೆ.

‘ಚೀನಾದಲ್ಲಿ ನಮ್ಮ ಪ್ರಮುಖ ಟೂರ್ನಿಗಳು ಈ ಬಾರಿ ನಡೆಯುತ್ತಿಲ್ಲ. ಇದರಿಂದ ನಿರಾಸೆಯಾಗಿದೆ. ಆದರೆ ಈ ನಿರ್ಧಾರವನ್ನು ನಾವು ಗೌರವಿಸುತ್ತೇವೆ‘ ಎಂದು ಡಬ್ಲ್ಯುಟಿಎ ಮುಖ್ಯಸ್ಥ ಸ್ಟೀವ್‌ ಸೈಮನ್‌ ಹೇಳಿದ್ದಾರೆ.

ADVERTISEMENT

ಏಳು ಮಹಿಳಾ ಟೂರ್ನಿಗಳು ಹಾಗೂಪುರುಷರ ನಾಲ್ಕು ಟೂರ್ನಿಗಳು ರದ್ದುಗೊಂಡಿವೆ.

‘ಯಾವುದೇ ಟೂರ್ನಿಗಳನ್ನು ಆಯೋಜಿಸುವ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯ ನಿಯಮಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದ ಜನರ ಹಿತಕ್ಕಾಗಿ ಚೀನಾ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಗೌರವವಿದೆ’ ಎಂದು ಎಟಿಪಿ ಮುಖ್ಯಸ್ಥ ಆ್ಯಂಡ್ರಿಯಾ ಗಾಡೆಂಜಿ ಹೇಳಿದ್ದಾರೆ.

ಕೋವಿಡ್‌ ಪ್ರಕರಣಗಳಲ್ಲಿ ಏರಿಕೆಯ ಕಾರಣ ಮಾರ್ಚ್‌ನಿಂದ ಎಲ್ಲ ಟೂರ್ನಿಗಳು ಸ್ಥಗಿತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.