ಟೆನಿಸ್
ಲಂಡನ್: ಭಾರತದ ಯುಕಿ ಭಾಂಬ್ರಿ ಮತ್ತು ಅಮೆರಿಕದ ರಾಬರ್ಟ್ ಗ್ಯಾಲವೆ ಜೋಡಿಯು ಪುರುಷರ ಡಬಲ್ಸ್‌ನ ಮೂರನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿತು.
16ನೇ ಶ್ರೇಯಾಂಕದ ಯುಕಿ– ಗ್ಯಾಲವೆ ಜೋಡಿ 4-6, 6-3, 6-7 (10)ರಿಂದ ನಾಲ್ಕನೇ ಶ್ರೇಯಾಂಕದ ಮಾರ್ಸೆಲ್ಲೊ ಗ್ರಾನೊಲ್ಲರ್ಸ್ (ಸ್ಪೇನ್) ಮತ್ತು ಹೊರಾಸಿಯೊ ಜೆಬೆಲ್ಲೊಸ್ (ಅರ್ಜೆಂಟೀನಾ) ಅವರಿಗೆ ಮಣಿಯಿತು. ಈ ರೋಚಕ ಪಂದ್ಯ ಎರಡು ಗಂಟೆ ಒಂಬತ್ತು ನಿಮಿಷ ನಡೆಯಿತು.
ಇದಕ್ಕೂ ಮುನ್ನ ಮಿಶ್ರ ಡಬಲ್ಸ್‌ನಲ್ಲೂ ಭಾಂಬ್ರಿ ಹೊರಬಿದ್ದರು. ಎರಡನೇ ಸುತ್ತಿನ ಪಂದ್ಯದಲ್ಲಿ ಯೂಕಿ ಮತ್ತು ಚೀನಾದ ಜೊತೆಗಾರ್ತಿ ಜಿಯಾಂಗ್ ಕ್ಸಿನ್ಯು 6–7(8), 6–3ರಿಂದ ಮಾರ್ಸೆಲೊ ಅರೆವಾಲೊ ಮತ್ತು ಜಾಂಗ್ ಶುವಾಯ್ ಜೋಡಿಗೆ ಶರಣಾದರು.
ಭಾಂಬ್ರಿ ನಿರ್ಗಮನದೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಕೂಡ ಅಂತ್ಯವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.