ಬೆಂಗಳೂರು: ಹಾಲಿ ಚಾಂಪಿಯನ್ ಆಕಾಶ್ ಅಶೋಕಕುಮಾರ್ ಮತ್ತು ಜೂಡಿ ಅಲ್ಬನ್ ಶುಕ್ರವಾರ ಇಲ್ಲಿ ನಡೆದ ಕರ್ನಾಟಕ ರಾಜ್ಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದರು.
ಪುರುಷರ ವಿಭಾಗದಲ್ಲಿ ಆಕಾಶ್ 92 ಪಿನ್‌ಗಳಿಂದ ಆರ್. ಕಿಶನ್ ಅವರನ್ನು ಸೋಲಿಸಿದರು. ಅದರೊಂದಿಗೆ ಐದನೇ ಟ್ರೋಫಿಯನ್ನು ಗೆದ್ದುಕೊಂಡರು. ಆಕಾಶ್ ಮೊದಲ ಗೇಮ್‌ನಲ್ಲಿ 209–166 ಪಿನ್ ಮತ್ತು ಎರಡನೇಯದ್ದರಲ್ಲಿ 217–168ರಿಂದ ಜಯಿಸಿದರು.
ಮಹಿಳೆಯರ ವಿಭಾಗದಲ್ಲಿ ಜೂಡಿ ಅಲ್ಬನ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಪ್ರೀಮಲ್ ಜಾನ್ ವಿರುದ್ಧ ಗೆದ್ದರು. ಇದು ಅವರಿಗೆ ನಾಲ್ಕನೇ ಪ್ರಶಸ್ತಿ.
ಜೂಡಿ ಮೊದಲ ಗೇಮ್‌ನಲ್ಲಿ 178–158ರಿಂದ ಮತ್ತು ಎರಡನೇಯದ್ದರಲ್ಲಿ 179–156 ಪಿನ್‌ಗಳಿಂದ ಪ್ರೀಮಲ್ ವಿರುದ್ಧ ಜಯಭೇರಿ ಬಾರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.