ADVERTISEMENT

ಕಾರ್ಡ್‌ ದುರ್ಬಳಕೆ ತಪ್ಪಿಸಲು ತಂತ್ರಾಂಶ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಕಾರ್ಡ್‌ ದುರ್ಬಳಕೆ ತಪ್ಪಿಸಲು ತಂತ್ರಾಂಶ
ಕಾರ್ಡ್‌ ದುರ್ಬಳಕೆ ತಪ್ಪಿಸಲು ತಂತ್ರಾಂಶ   

ಆನ್‌ಲೈನ್‌ನಲ್ಲಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ದುರ್ಬಳಕೆ  ತಪ್ಪಿಸಲು ಅಟೊಂ ಟೆಕ್‌ (Atom Tech) ಕಂಪನಿ ನೂತನ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಮೊಬೈಲ್‌ ಮತ್ತು ಸ್ಮಾರ್ಟ್‌ಫೋನ್‌ ಬಳಕೆದಾರರು ಈ ತಂತ್ರಾಂಶವನ್ನು ಸರಳವಾಗಿ ಬಳಕೆ ಮಾಡಬಹುದಾಗಿದೆ. ಹ್ಯಾಕ್‌ ಮಾಡುವವರು ಗ್ರಾಹಕರ ಕಾರ್ಡ್‌ಗಳ ಗುಪ್ತ ಸಂಖ್ಯೆ ಬಳಕೆ ಮಾಡಿಕೊಂಡು ಮೋಸ ಮಾಡುತ್ತಾರೆ. ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್‌ ಬಳಕೆದಾರರು ಈ ನೂತನ ತಂತ್ರಾಂಶವನ್ನು ಅಳವಡಿಸಿಕೊಳ್ಳವ ಮೂಲಕ ಆನ್‌ಲೈನ್‌ನಲ್ಲಿ ಮೋಸ ಹೋಗುವುದನ್ನು ತಪ್ಪಿಸಬಹುದು.

ಕಾರ್ಡ್‌ಗಳಲ್ಲಿ ಹಣ ಪಡೆಯುವಾಗ ಮತ್ತು ಶಾಪಿಂಗ್‌ ಮಾಡುವಾಗ ಮಾತ್ರ ಕಾರ್ಡ್‌ಗಳು ಚಾಲ್ತಿಯಲ್ಲಿರುವಂತೆ ರೂಪಿಸಲಾಗಿದೆ. ಉಳಿದಂತೆ ಕಾರ್ಡ್‌ಗಳು ಯಾವಾಗಲೂ ಆಫ್‌ಲೈನ್‌ ಮೋಡ್‌ನಲ್ಲೇ ಇರುವುದರಿಂದ ಹ್ಯಾಕರ್‌ಗಳು ಕನ್ನ ಹಾಕಲು ಸಾಧ್ಯವಿಲ್ಲ. ಸ್ಮಾರ್ಟ್‌ಫೋನ್‌ ಮತ್ತು ಮೊಬೈಲ್‌ ಫೋನ್‌ಗಳ ಮೂಲಕವೇ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ನಿಯಂತ್ರಣ ಮಾಡಬಹುದಾಗಿದೆ.  2017ರಲ್ಲಿ ಜಾಗತಿಕವಾಗಿ 25 ಸಾವಿರ ಆನ್‌ಲೈನ್‌ ಮೋಸದ ಪ್ರಕರಣಗಳು ದಾಖಲಾಗಿದ್ದು ಒಟ್ಟು 179 ಕೋಟಿ ರೂಪಾಯಿಗಳ ವಂಚನೆ ಎಸಗಲಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಈಗ ಹೊಸ ಟೂಲ್
ಛಾಯಾಚಿತ್ರ ಮತ್ತು ವಿಡಿಯೊ ಸಂವಹನದ ಜನಪ್ರಿಯ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಇದೀಗ ಹೊಸ ಟೂಲ್‌ ಅನ್ನು ಪರಿಚಯಿಸಿದೆ. ಇದರ ಮೂಲಕ ಬಳಕೆದಾರರು ಸಾಧ್ಯವಾದಷ್ಟು ಹೊಸ ಹೊಸ ಪೋಸ್ಟ್‌ಗಳನ್ನು ನೋಡಬಹುದಾಗಿದೆ.

ADVERTISEMENT

ಇನ್‌ಸ್ಟಾಗ್ರಾಂ ಆ್ಯಪ್‌ನಲ್ಲಿ ’ನ್ಯೂ ಪೋಸ್ಟ್‌’ ಎಂಬ ಟೂಲ್‌ ನೀಡಲಾಗಿದೆ. ಇದನ್ನು ಕ್ಲಿಕ್ಕಿಸಿದರೆ ಸಾಕು ಹೊಸ ಹೊಸ ಪೋಸ್ಟ್‌ಗಳು ತೆರೆದುಕೊಳ್ಳುತ್ತವೆ. ಈ ಮೊದಲು ಬಳಕೆದಾರರು ಹೊಸ ಪೋಸ್ಟ್‌ಗಳನ್ನು ವೀಕ್ಷಣೆ ಮಾಡಲು ‘ರಿಫ್ರೆಷ್‌’ ಬಟನ್‌ ಕ್ಲಿಕ್‌ ಮಾಡಬೇಕಿತ್ತು.

ವಿಶ್ವದಾದ್ಯಂತ ಇನ್‌ಸ್ಟಾಗ್ರಾಂ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು ಯುವಕರೇ ಈ ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಟ್ವೀಟರ್, ಸ್ನ್ಯಾಪ್‌ಚಾಟ್ ಮತ್ತು ವಾಟ್ಸ್‌ಆ್ಯಪ್ ಬಳಕೆದಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇನ್‌ಸ್ಟಾಗ್ರಾಂ ಬಳಕೆದಾರರು ಇದ್ದಾರೆ. ಈ ಹೊಸ ಟೂಲ್‌ ಶೀಘ್ರದಲ್ಲಿಯೇ ಬಳಕೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.