ADVERTISEMENT

ಜನಪ್ರಿಯ ಪಾವತಿ ಮಾಧ್ಯಮವಾಗಿ ಮೊಬೈಲ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 19:30 IST
Last Updated 7 ಜೂನ್ 2011, 19:30 IST

ಪ್ರಪಂಚದಲ್ಲಿಯೇ ಎರಡನೆಯ ಅತಿ ದೊಡ್ಡ ಮೊಬೈಲ್ ಮಾರುಕಟ್ಟೆಯಾಗಿರುವ  ಭಾರತದಲ್ಲಿ ಮೊಬೈಲ್ ಅತ್ಯಂತ ಪರಿಣಾಮಕಾರಿ ಪಾವತಿ ಮಾಧ್ಯಮವಾಗಿ ಬೆಳೆಯುತ್ತಿದೆ. ಸದ್ಯ ದೇಶದಲ್ಲಿ 846 ದಶಲಕ್ಷ ಮೊಬೈಲ್ ಗ್ರಾಹಕರಿದ್ದಾರೆ. ನಗದು ಆರ್ಥಿಕತೆಯಲ್ಲಿ ಅತ್ಯಂತ ಪ್ರಬಲ ರಾಷ್ಟ್ರವಾಗಿದೆ. 

ಸುಮಾರು 300 ದಶಲಕ್ಷದಷ್ಟಿರುವ ಮಧ್ಯಮ ವರ್ಗದ ಜನತೆಯ ಆದಾಯದಲ್ಲಿ ಏರಿಕೆಯಾಗಿರುವುದು ಚಿಲ್ಲರೆ ಮಾರುಕಟ್ಟೆಯ ತ್ವರಿತ ಪ್ರಗತಿಗೆ ಕಾರಣವಾಗಿದೆ. ಇದು ಮುಂದಿನ ನಾಲ್ಕು ವರ್ಷಗಳಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆಯನ್ನು ಶೇಕಡಾ 100ಕ್ಕೆ ಮುಟ್ಟಿಸಲಿದೆ  ಎಂದು ಸಮೀಕ್ಷೆಯೊಂದು ಹೇಳಿದೆ. 

ಶೇ.67ರಷ್ಟು ಚಿಲ್ಲರೆ ವಹಿವಾಟು ನಗದು ರೂಪದಲ್ಲಿ ನಡೆಯುತ್ತಿದ್ದು, ಕ್ರೆಡಿಟ್   ಕಾರ್ಡ್, ಡೆಬಿಟ್ ಕಾರ್ಡ್‌ನಂತಹ ಪಾವತಿ ವ್ಯವಸ್ಥೆಗಳು ಅತಿ ಸಣ್ಣ ವರ್ಗದಲ್ಲಿ ಮಾತ್ರಬಳಕೆಯಲ್ಲಿದೆ. ಅಭಿವೃದ್ಧಿಯನ್ನು ಕಾಯ್ದುಕೊಳ್ಳುವಲ್ಲಿ ಮೊಬೈಲ್ ಪಾವತಿಗಳು ದೇಶಕ್ಕೆ ಅತ್ಯಗತ್ಯವಾಗಿದೆ.

ಏಕೆಂದರೆ ಬಹುತೇಕ ಜನರು ಬ್ಯಾಂಕ್ ಖಾತೆ ಹೊಂದಿರದೆ ಇದ್ದರೂ ಮೊಬೈಲ್ ಫೋನ್‌ಗಳನ್ನು ಹೊಂದಿದ್ದಾರೆ. ಮೊಬೈಲ್ ಪಾವತಿ ಆರ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ `ಆರ್‌ಬಿಐ~, ದೂರಸಂಪರ್ಕ ಕಂಪೆನಿಗಳು ಮತ್ತು ತಂತ್ರಜ್ಞಾನ ಪೂರೈಕೆದಾರರು ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂದು ಈ ಸಮೀಕ್ಷೆ ತಿಳಿಸಿದೆ.              

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.