ADVERTISEMENT

ಡ್ರೈವ್‌ನಿಂದ ಶೇರ್ ಮಾಡಿ

ದಯಾನಂದ ಎಚ್‌.ಎಚ್‌.
Published 15 ನವೆಂಬರ್ 2017, 19:30 IST
Last Updated 15 ನವೆಂಬರ್ 2017, 19:30 IST
ಡ್ರೈವ್‌ನಿಂದ ಶೇರ್ ಮಾಡಿ
ಡ್ರೈವ್‌ನಿಂದ ಶೇರ್ ಮಾಡಿ   

ಯಾವುದೇ ಡಾಕ್ಯುಮೆಂಟ್ ಫೈಲ್ ಅಥವಾ ಇನ್ನಾವುದೇ ಬಗೆಯ ಫೈಲ್‌ ಅನ್ನು ಯಾರೊಂದಿಗಾದರೂ ಹಂಚಿಕೊಳ್ಳ ಬೇಕೆಂದರೆ ನಿಮ್ಮ ಡಿವೈಸ್‌ನಲ್ಲಿರುವ ಫೈಲ್‌ ಅನ್ನು ಇಮೇಲ್ ಅಥವಾ ವಾಟ್ಸ್‌ಆ್ಯಪ್‌ ಮೂಲಕ ಹಂಚಿಕೊಳ್ಳುವುದು ಸಾಮಾನ್ಯ. ಆದರೆ, ನಿಮ್ಮ ಡಿವೈಸ್‌ನಲ್ಲಿ ಇಲ್ಲದ, ಆದರೆ, ಗೂಗಲ್‌ ಡ್ರೈವ್‌ನಲ್ಲಿ ಇರುವ ಫೈಲ್‌ ಅನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದು ಹೇಗೆ ಎಂಬ ಬಗ್ಗೆ ಈ ವಾರ ತಿಳಿಯೋಣ.

ಡ್ರೈವ್‌ನಲ್ಲಿರುವ ಫೈಲ್‌ ಅನ್ನು ನಿಮ್ಮ ಡಿವೈಸ್‌ಗೆ ಡೌನ್‌ಲೋಡ್‌ ಮಾಡಿ ಮತ್ತೆ ಅದನ್ನು ಇಮೇಲ್ ಅಥವಾ ಇನ್ನಾವುದೇ ಮಾಧ್ಯಮದ ಮೂಲಕ ಕಳಿಸುವ ಬದಲು ಡ್ರೈವ್‌ನಿಂದಲೇ ಫೈಲ್‌ಗಳನ್ನು ಶೇರ್ ಮಾಡಿಕೊಳ್ಳಬಹುದು. ಇದಕ್ಕಾಗಿ ಮೊದಲು ಡಿವೈಸ್‌ನಲ್ಲಿ ಗೂಗಲ್‌ ಡ್ರೈವ್‌ ತೆರೆಯಿರಿ.

ಡ್ರೈವ್‌ನಲ್ಲಿರುವ ಫೈಲ್‌ಗಳ ಪೈಕಿ ಯಾವ ಫೈಲ್‌ ಅನ್ನು ಕಳಿಸಬೇಕೋ ಆ ಫೈಲ್ ಮೇಲೆ ಲಾಂಗ್ ಪ್ರೆಸ್ ಮಾಡಿ. ಈಗ ಕಾಣುವ ಆಯ್ಕೆಗಳಲ್ಲಿ Share link ಮೇಲೆ ಕ್ಲಿಕ್ ಮಾಡಿ. ಈಗ ಕಾಣುವ ಆಯ್ಕೆಗಳಲ್ಲಿ Share link ಮೇಲೆ ಕ್ಲಿಕ್ ಮಾಡಿ.

ADVERTISEMENT

ಈಗ ವಾಟ್ಸ್‌ಆ್ಯಪ್, ಇಮೇಲ್, ಫೇಸ್‌ಬುಕ್, ಮೆಸೆಂಜರ್, ಟ್ವಿಟರ್, ಬ್ಲೂಟೂತ್‌ ಸೇರಿದಂತೆ ಹಲವು ಶೇರಿಂಗ್ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ನೀವು ಆಯ್ಕೆ ಮಾಡಿಕೊಂಡಿರುವ ಫೈಲ್‌ನ ಲಿಂಕ್‌ ಅನ್ನು ವಾಟ್ಸ್‌ಆ್ಯಪ್‌ ಮೂಲಕ ಕಳಿಸಬೇಕಿದ್ದರೆ ವಾಟ್ಸ್‌ಆ್ಯಪ್‌ ಲೋಗೊ ಮೇಲೆ ಕ್ಲಿಕ್ ಮಾಡಿ.

ಇಲ್ಲಿ ಯಾರಿಗೆ ಕಳಿಸಬೇಕೋ ಅವರ ಹೆಸರು ಟೈಪಿಸಿ, ಅವರೊಂದಿಗೆ ಲಿಂಕ್‌ ಹಂಚಿಕೊಳ್ಳಿ. ಒಂದು ವೇಳೆ ನೀವು ಲಿಂಕ್‌ ಅನ್ನು ಇಮೇಲ್ ಮೂಲಕ ಕಳಿಸಬೇಕಿದ್ದರೆ ಇಮೇಲ್‌ ಐಕಾನ್ ಮೇಲೆ ಕ್ಲಿಕ್ ಮಾಡಿ, ನೀವು ಕಳಿಸಬೇಕೆಂದಿರುವವರ ಇಮೇಲ್ ವಿಳಾಸ ನಮೂದಿಸಿ ಸೆಂಡ್ ಮಾಡಿ.

ಫೈಲ್‌ನ ಲಿಂಕ್ ಮಾತ್ರವಲ್ಲದೆ ಫೈಲ್‌ ಅನ್ನೇ ಕಳಿಸಬೇಕೆಂದರೆ ಆ ಫೈಲ್‌ ಮೇಲೆ ಲಾಂಗ್‌ ಪ್ರೆಸ್ ಮಾಡಿ. ಈಗ ಕಾಣುವ ಆಯ್ಕೆಗಳಲ್ಲಿ Send a copy ಮೇಲೆ ಕ್ಲಿಕ್ ಮಾಡಿ. ಇಲ್ಲಿ ಕಾಣುವ ಶೇರಿಂಗ್‌ ಆಯ್ಕೆಗಳಲ್ಲಿ ಯಾವ ಮಾಧ್ಯಮದ ಮೂಲಕ ಕಳಿಸಬೇಕೋ ಅದನ್ನು ಆಯ್ಕೆ ಮಾಡಿಕೊಂಡು ಫೈಲ್‌ ಕಳಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.