ADVERTISEMENT

ಮನಸ್ಥಿತಿ ಅರಿಯುವ ಹೆಡ್ ಬ್ಯಾಂಡ್!

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ತಲೆಗೆ ಚಿಕ್ಕ ಪಟ್ಟಿಯ ರೀತಿ ಧರಿಸಬಹುದಾದ ‘ಹೆಡ್ ಬ್ಯಾಂಡ್’ ಎಂಬ ಸಾಧನ, ಮನುಷ್ಯನ ಯೋಚನೆಗಳನ್ನು ಗ್ರಹಿಸುವ ಮತ್ತು ಮೌಸ್‌ಗೆ ಪರ್ಯಾಯವಾಗಿ ಬಳಕೆಗೆ ಶೀಘ್ರದಲ್ಲೇ ದೊರೆಯಲಿದೆ.ಇಂತಹುದೊಂದು ಅತ್ಯಾಧುನಿಕ ಗ್ಯಾಜೆಟ್‌ ಅಭಿವೃದ್ಧಿಯಲ್ಲಿ ನಿರತವಾಗಿದೆ ಅಮೆರಿಕದ ತಂತ್ರಜ್ಞರಾದ ರಾಬರ್ಟ್ ಜಾಕೋಬ್ ಮತ್ತು ಸರ್ಜಿಯೊ ಫ್ಯಾಂಟನಿ ತಂಡ.

ಈ ವಿದ್ಯುನ್ಮಾನ ‘ಹಣೆಪಟ್ಟಿ’ಯಲ್ಲಿ  ಸಣ್ಣದಾದ ಕೆಂಪು ಬಲ್ಬ್ ಗಳ (ಎಲ್ಇಡಿ ರೀತಿಯ) ಸಾಲನ್ನು ಅಳವಡಿಸಲಾಗಿದೆ. ಈ ಬಲ್ಬ್‌ಗಳ ಮೂಲಕ ಕಡಿಮೆ ತೀವ್ರತೆಯ ತರಂಗಗಳನ್ನು ತಲೆಗೆ ಹರಿಯುವಂತೆ ಪ್ರೋಗ್ರಾಂ ಮಾಡಲಾಗಿದೆ.

ಈ ಹೆಡ್‌ಬ್ಯಾಂಡನ್ನು ಎರಡು ತಂತಿಗಳ ಮೂಲಕ ಕಂಪ್ಯೂಟರಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ವ್ಯಕ್ತಿಯ ಮೆದುಳು ಬೆಳಕನ್ನು ಹೀರಿಕೊಳ್ಳುವ ಪ್ರಮಾಣದ ಆಧಾರದ ಮೇಲೆ ಆತನ ಮನಸ್ಥಿತಿ ಅರಿಯಬಹುದು ಎನ್ನುತ್ತದೆ ಈ ತಂತ್ರಜ್ಞರ ತಂಡ.

ಇನ್ನೊಂದೆಡೆ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ಪದೇ ಪದೇ ಬಲಗೈ ಮುಂಚಾಚಿ ತೋರುಬೆರಳು ಅದುಮಿ ಮೌಸ್‌ ಕ್ಲಿಕ್ ಅಥವಾ ಸ್ರಾಲಿಂಗ್‌ ಮಾಡುತ್ತಲೇ ಇರಬೇಕು. ಬಹಳಷ್ಟು ಮಂದಿಗೆ ಇದರಿಂದ ಮುಂಗೈ ಮತ್ತು ತೋಳಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಇಂತಹವರಿಗೆ ಈ ಹೆಡ್‌ಬ್ಯಾಂಡ್‌ ಸೂಕ್ತ ಪರಿಹಾರವನ್ನು ಒದಗಿಸಲಿದೆ. ಮೌಸ್‌ನ ಕೆಲಸವನ್ನೇ ಈ ಹೆಡ್‌ಬ್ಯಾಂಡ್‌ ಸುಲಭದಲ್ಲಿ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.