ADVERTISEMENT

ಹಾರ್ಡ್‌ಡಿಸ್ಕ್ ಅಪ್‌ಗ್ರೇಡ್ ಮಾಡಿಕೊಳ್ಳಿ..

​ಪ್ರಜಾವಾಣಿ ವಾರ್ತೆ
Published 21 ಜೂನ್ 2011, 19:30 IST
Last Updated 21 ಜೂನ್ 2011, 19:30 IST

ಹಾರ್ಡ್‌ಡ್ರೈವ್ ಡಿಸ್ಕ್ (ಎಚ್‌ಡಿಡಿ), ಕಂಪ್ಯೂಟರ್‌ನ ದೀರ್ಘಾವಧಿಯ ಮೆಮರಿಯಾಗಿದ್ದು ಇದನ್ನು ಸ್ಟೋರೇಜ್ ಎಂದೂ ಕರೆಯುತ್ತಾರೆ.  ಹಾರ್ಡ್‌ಡ್ರೈವ್ ಎನ್ನುವುದು ದಾಖಲೆಗಳು, ಫೋಟೋಗಳು, ಹಾಡುಗಳು, ವಿಡಿಯೋಗಳು ಇತ್ಯಾದಿಗಳನ್ನು ಇಡುವ `ಫೈಲಿಂಗ್ ಕ್ಯಾಬಿನೆಟ್~ ಇದ್ದಂತೆ. ಇದರ ಸಾಮರ್ಥ್ಯವನ್ನು ಗೀಗಾಬೈಟ್‌ಗಳಲ್ಲಿ ಅಳೆಯುತ್ತಾರೆ.

500 ಜಿಬಿ ಸಾಮರ್ಥ್ಯದ ಸ್ಟೋರೇಜ್ ದಿನನಿತ್ಯದ ಕಂಪ್ಯೂಟರ್ ಬಳಕೆದಾರರಿಗೆ ಬೇಕಾದಷ್ಟಾಗುತ್ತದೆ. ಡ್ರೈವ್‌ಗಳನ್ನು ಮುಂದೆ ಯಾವಾಗ ಬೇಕಾದರೂ ಅಪ್‌ಗ್ರೇಡ್ ಮಾಡಬಹುದು ಅಥವಾ ಅಗತ್ಯಬಿದ್ದರೆ ಯುಎಸ್‌ಬಿ ಮೂಲಕ ಹಾರ್ಡ್‌ಡ್ರೈವ್ ಸೇರಿಸಿಕೊಳ್ಳಬಹುದು.

ಕಂಪ್ಯೂಟರ್ ಖರೀದಿದಾರರಿಗೆ ಖರೀದಿಯ ಸಮಯದಲ್ಲಿ ತಮ್ಮ ಹಾರ್ಡ್‌ಡ್ರೈವ್ ನವೀಕರಿಸುವ (ಅಪ್‌ಗ್ರೇಡ್) ಮಾಡಿಕೊಳ್ಳುವ ಯಾವುದೇ ಅಗತ್ಯ ಇರುವುದಿಲ್ಲ.

ಏಕೆಂದರೆ ಬಳಿಕ ಅದನ್ನು ಅಪ್‌ಗ್ರೇಡ್ ಮಾಡಿಕೊಳ್ಳುವುದು ಅತ್ಯಂತ ಸುಲಭ ಮತ್ತು ಅಗ್ಗ ಎನಿಸುತ್ತದೆ. ಅಗ್ಗದ ಪರಿಹಾರವೆಂದರೆ ಯುಎಸ್‌ಬಿ 3.0 ಹಾರ್ಡ್‌ಡ್ರೈವ್ ಸೇರಿಸಿಕೊಳ್ಳುವುದು. ಈ ಡ್ರೈವ್ ಅನ್ನು ವಿವಿಧ ಉಪಕರಣಗಳಿಂದ ಫೈಲ್‌ಗಳನ್ನು ರಕ್ಷಿಸಿ ಇಡಲು ಮತ್ತು ಮನೆಯಲ್ಲಿಯೇ ಇರುವ ವಿವಿಧ ಕಂಪ್ಯೂಟರ್‌ಗಳೊಂದಿಗೆ ಹಂಚಿಕೊಳ್ಳಲು ಬಳಸಬಹುದು.

ಗೇಮರ್‌ಗಳು ಮತ್ತು ವಿಡಿಯೊ ನಿರ್ಮಾಪಕರಂತಹ ತಾಂತ್ರಿಕವಾಗಿ ಮುಂದುವರೆದಿರುವ ಕಂಪ್ಯೂಟರ್ ಬಳಕೆದಾರರಿಗಾಗಿ ಹೊಸ ಇಂಟೆಲ್ ಸಾಲಿಡ್ ಸ್ಟೇಟ್ ಡ್ರೈವ್ಸ್ (ಇಂಟೆಲ್ ಎಸ್‌ಎಸ್‌ಡಿ), ಲ್ಯಾಪ್‌ಟಾಪ್ ಮತ್ತು   ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳ ಸ್ಟೋರೇಜ್ ಸಾಮರ್ಥ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಾಂತಿಕಾರಕ ಆವಿಷ್ಕಾರ ಎನಿಸಿದೆ.  ಸಾಂಪ್ರದಾಯಿಕ ಹಾರ್ಡ್‌ಡಿಸ್ಕ್ ಡ್ರೈವ್‌ಗಳಿಗಿಂತ ಇಂಟೆಲ್ ಎಸ್‌ಎಸ್‌ಡಿಗಳಲ್ಲಿ ಚಲಿಸುವ ಪಾರ್ಟ್‌ಗಳೇನೂ ಇರುವುದಿಲ್ಲ.  ಇದರಿಂದಾಗಿ ಕಂಪ್ಯೂಟರ್‌ಗಳು ಸದ್ದಿಲ್ಲದೇಅತ್ಯಂತ ವೇಗವಾಗಿ ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತದೆ. ಇಂಟೆಲ್ `ಎಸ್‌ಎಸ್‌ಡಿ~ಗಳಿಗೆ ಕಡಿಮೆ ವಿದ್ಯುತ್ ಬೇಕಾಗುವುದರಿಂದ ಲ್ಯಾಪ್‌ಟಾಪ್‌ಗಳಲ್ಲಿ ಬ್ಯಾಟರಿ ಅವಧಿಯೂ ಹೆಚ್ಚಿರುತ್ತದೆ. ಇಂಟೆಲ್ `ಎಸ್‌ಎಸ್‌ಡಿ~ಗಳನ್ನು ಖರೀದಿಯ ಸಮಯದಲ್ಲಿುಏ ಅಪ್‌ಗ್ರೇಡ್ ಮಾಡಿಕೊಳ್ಳಬಹುದು ಅಥವಾ ಬಳಿಕ ನೀವೇ ಅಪ್‌ಗ್ರೇಡ್ ಮಾಡಿಕೊಳ್ಳಬಹುದು.                       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.