ADVERTISEMENT

‘ವಿಶ್ವಕಪ್’ ಪಯಣಕ್ಕೆ 7 ಆ್ಯಪ್ಸ್ !

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 19:30 IST
Last Updated 3 ಜುಲೈ 2019, 19:30 IST
   

ಇಂಗ್ಲೆಂಡ್‌ನ ಪ್ರಮುಖ ಸ್ಥಳಗಳಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿವೆ. ಇನ್ನೇನು ಸೆಮಿಫೈನಲ್ ಮ್ಯಾಚ್‌ಗಳು ಪ್ರಾರಂಭವಾಗುತ್ತವೆ. ವಿಶ್ವಕಪ್ ಕ್ರಿಕೆಟ್ ಕಣ್ತುಂಬಿಕೊಳ್ಳಲು ಅನೇಕ ಅಭಿಮಾನಿಗಳು, ಈಗಾಗಲೇ ಇಂಗ್ಲೆಂಡ್ ತಲುಪಿದ್ದಾರೆ. ಅಲ್ಲಿರುವ ತಮ್ಮ ಆಪ್ತರೊಂದಿಗೆ ಸ್ಟೇಡಿಯಂನಲ್ಲಿ ಕುಳಿತು ಮ್ಯಾಚ್ ನೋಡುತ್ತಾ ಭಾರತದ ತಂಡವನ್ನು ಬೆಂಬಲಿಸುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಕೆಲವರು, ಸೆಮಿಫೈನಲ್- ಫೈನಲ್ ಮ್ಯಾಚ್ ನೋಡಲು, ಇಂಗ್ಲೆಂಡ್‌ನತ್ತ ಹೊರಡುವ ದಾರಿಯಲ್ಲಿದ್ದಾರೆ. ಹಾಗೆ ವಿಶ್ವಕಪ್ ನೋಡುವುದಕ್ಕಾಗಿ ಲಂಡನ್‌ಗೆ ಹೋಗುತ್ತಿದ್ದರೆ, ನಿಮ್ಮ ಮೊಬೈಲ್‌ನಲ್ಲಿ ಈ 7 ಆ್ಯಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ನಿಮ್ಮ ಪ್ರಯಾಣವನ್ನು ಸುಲಭಗೊಳಿಸಲು ಇವು ನೆರವಾಗುತ್ತವೆ.

ಕ್ಲಿಯರ್‌ ಟ್ರಿಪ್‌: ಈ ಬುಕ್ಕಿಂಗ್‌ ವೇದಿಕೆಯಲ್ಲಿ ಬಹಳಷ್ಟು ಆಫರ್‌ಗಳು ಲಭ್ಯವಿದ್ದು, ಇದನ್ನು ಬಳಸಿ ನೀವು ವಿಶ್ವಕಪ್ ವೀಕ್ಷಣೆಗೆ ಹೊರಡಲು ಟಿಕೆಟ್ ಬುಕ್ ಮಾಡಬಹುದು. ಕ್ರಿಕೆಟ್ ಜೊತೆಗೆ ಆ ದೇಶದ ವಿವಿಧ ಪ್ರೇಕ್ಷಣಿಯ ಸ್ಥಳಗಳಿಗೆ ಹೋಗಲು ಈ ವೇದಿಕೆ ಸಹಕಾರಿ. ನಿಮ್ಮ ಪ್ರಯಾಣವನ್ನು ಪ್ಲಾನ್ ಮಾಡಲು ಕ್ಲಿಯರ್‌ ಟ್ರಿಪ್‌ ಸಹಾಯ ಮಾಡುತ್ತದೆ.

ಎನ್ಗೂರು: ಆಂಗ್ಲ ಭಾಷೆಯ ನೆಲ ಇಂಗ್ಲೆಂಡ್. ಅಲ್ಲಿಗೆ ಹೋಗುವ ಮೊದಲು ನಿಮಗೆ ಸ್ವಲ್ಪ ಮಟ್ಟಿಗೆ ಆಂಗ್ಲ ಭಾಷೆ ಬಂದರೆ ಅನುಕೂಲ. ಈ ಎನ್ಗೂರು ಆ್ಯಪ್ ಮೂಲಕ ನೀವು 40-50 ಗಂಟೆಗಳಲ್ಲಿ ಭಾಷೆ ಕಲಿಯಬಹುದು. ನಿಮಗೆ ತಿಳಿದಿರುವ ಭಾಷೆ ಆಯ್ಕೆ ಮಾಡಿ ಈ ಆ್ಯಪ್‌ನಲ್ಲಿ ಇಂಗ್ಲಿಷ್‌ ಕಲಿಯಬಹುದು.

ADVERTISEMENT

ಕ್ಯಾಬಿ: ಈ ಆ್ಯಪ್ ಬಳಸಿ ನೀವು ಕಡಿಮೆ ದರದಲ್ಲಿ ಲಂಡನ್ ನಗರದಲ್ಲಿ ಸುತ್ತಾಡಬಹುದು. ದುಬಾರಿ ಬ್ಲಾಕ್ ಕ್ಯಾಬ್‍ಗಳನ್ನು ಬಳಸುವ ಬದಲು ಇದರ ಮೂಲಕ ಮಿನಿ ಕ್ಯಾಬ್ ಬುಕ್ ಮಾಡಿ ಕಡಿಮೆ ದರದಲ್ಲಿ ಪ್ರಯಾಣಿಸಬಹುದು. ನಗದು, ಕ್ರೆಡಿಟ್ ಕಾರ್ಡ್ ಮೂಲಕವು ಪ್ರಯಾಣದ ದರವನ್ನು ಪಾವತಿ ಮಾಡಬಹುದು.

ಬೀನ್‍ಹಂಟರ್: ಒಳ್ಳೆಯ ಕಾಫಿ ಶಾಪ್‌ಗಳನ್ನು ಈ ವೇದಿಕೆ ಮೂಲಕ ನೀವು ಹುಡುಕಬಹುದು. ಇದರಲ್ಲಿ ಕಾಫಿ ಶಾಪ್‌ನ ಫೋಟೊಗಳು, ಅದರ ರಿವ್ಯೂ ಹಾಗೂ ಕಮೆಂಟ್ಸ್‌ಗಳು ಲಭ್ಯವಿರುತ್ತವೆ. ಇದರ ಆಧಾರದ ಮೇಲೆ ನೀವು ನಿಮ್ಮ ನೆಚ್ಚಿನ ಕಾಫಿ ಶಾಪ್ ಆಯ್ಕೆ ಮಾಡಬಹುದು.

ಎಕ್ಸ್‌ ಕರೆನ್ಸಿ: ಕರೆನ್ಸಿ ರೇಟ್ ಬಗೆಗಿನ ಜ್ಞಾನ ಬಹಳ ಅವಶ್ಯಕ. ಇದರಿಂದ ನೀವು ಹೆಚ್ಚುವರಿ ಶುಲ್ಕ ನೀಡುವುದರಿಂದ ತಪ್ಪಿಸಿಕೊಳ್ಳಬಹುದು. ಇಂಟರ್ನೆಟ್ ಇಲ್ಲದೆಯೂ ಕಾರ್ಯ ನಿರ್ವಹಿಸುವುದು ಇದರ ವಿಶೇಷ.

ಟ್ರೈನ್‍ಲೈನ್: ನಿಮ್ಮ ಬೆರಳ ತುದಿಯಲ್ಲಿ ಇಂಗ್ಲೆಂಡ್ ಟ್ರೈನ್ ಮಾಹಿತಿಗಳನ್ನು ಪಡೆಯಲು ಈ ಟ್ರೈನ್‍ಲೈನ್ ಆ್ಯಪ್ ಬಳಸಿ. ಇದು ಯುರೋಪ್‍ನ ಮುಂಚೂಣಿಯಲ್ಲಿರುವ ಟ್ರೈನ್ ಹಾಗೂ ಕೋಚ್ ಆ್ಯಪ್ ಆಗಿದೆ. ಯೂರೋಪ್‍ನ 45 ದೇಶಗಳಿಗೆ ಈ ವೇದಿಕೆ ಮೂಲಕ ಟ್ರೈನ್ ಬುಕಿಂಗ್ ಮಾಡಬಹುದು. ಇದರಿಂದ ನೀವು ನಿಮ್ಮ ಪ್ರಯಾಣದ ಪ್ಲಾನ್ ಮುಂಚಿತವಾಗಿಯೇ ಮಾಡಿಕೊಳ್ಳಬಹುದು. ನಿಮ್ಮ ಕರೆನ್ಸಿಯಲ್ಲೆ ಕಡಿಮೆ ದರದಲ್ಲಿ ಟಿಕೆಟ್ ಬುಕ್ ಮಾಡಬಹುದು ಜತೆಗೆ ರಿಯಾಯಿತಿ ಕೂಡ ದೊರಕಲಿದೆ.

ಹಾಸ್ಟೆಲ್‍ವರ್ಲ್ಡ್‌: ಈ ಆ್ಯಪ್ ಮೂಲಕ ನೀವು ತಂಗುವ ಸ್ಥಳದ ಆಯ್ಕೆ ಮಾಡಿಕೊಳ್ಳಬಹುದು. ಕಡಿಮೆ ದರದಲ್ಲಿ ರಾತ್ರಿ ತಂಗುವ ಸ್ಥಳಗಳು ಈ ವೇದಿಕೆಯಲ್ಲಿ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.