ADVERTISEMENT

ದೇಶದಲ್ಲಿ ಐಫೋನ್‌ ಮಾರಾಟ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 20:00 IST
Last Updated 29 ಜನವರಿ 2020, 20:00 IST
ಐಫೋನ್‌
ಐಫೋನ್‌   

ನವದೆಹಲಿ (ಪಿಟಿಐ): ಆ್ಯಪಲ್‌ ಕಂಪನಿಯು ಭಾರತದಲ್ಲಿ ಡಿಸೆಂಬರ್ ತ್ರೈಮಾಸಿಕದಲ್ಲಿ ಐಫೋನ್‌ ಮಾರಾಟದಲ್ಲಿ ಎರಡಂಕಿ ಪ್ರಗತಿ ದಾಖಲಿಸಿದೆ.ಐಪಾಡ್ಸ್‌ಗೂ ಉತ್ತಮ ಬೇಡಿಕೆ ಇದೆ ಎಂದು ಕಂಪನಿ ತಿಳಿಸಿದೆ.

ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಭಾರತವಲ್ಲದೆ, ಚೀನಾ, ಬ್ರೆಜಿಲ್‌, ಥಾಯ್ಲೆಂಡ್‌, ಟರ್ಕಿಯಲ್ಲಿ ಹಾಗೂ ಅಭಿವೃದ್ಧಿ ಹೊಂದಿರುವ ದೇಶಗಳಾದ ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್‌ ಮತ್ತು ಸಿಂಗಪುರದಲ್ಲಿಯೂ ಎರಡಂಕಿ ಮಾರಾಟ ಪ್ರಗತಿ ಸಾಧಿಸಲಾಗಿದೆ ಎಂದು ಸಿಇಒ ಟಿಮ್‌ ಕುಕ್‌ ತಿಳಿಸಿದ್ದಾರೆ.

ಹೋಮ್‌ಪಾಡ್‌: ಭಾರತದ ಮಾರುಕಟ್ಟೆಗೆ ಸ್ಮಾರ್ಟ್‌ ಸ್ಪೀಕರ್‌ ‘ಹೋಮ್‌ಪಾಡ್‌’ ಬಿಡುಗಡೆ ಮಾಡಲಿದೆ. ಫೆಬ್ರುವರಿ ಅಂತ್ಯದ ವೇಳೆಗೆ ಲಭ್ಯವಾಗುವ ನಿರೀಕ್ಷೆ ಇದೆ.

ADVERTISEMENT

ಗೂಗಲ್‌ ಹೋಮ್‌ ಮತ್ತು ಅಮೆಜಾನ್‌ ಎಕೊಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಬರಲಿದ್ದು, ಇದರ ಬೆಲೆ ₹ 19,900 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.