ADVERTISEMENT

CAMON 20 Avocado: ನವೀನ ವಿನ್ಯಾಸ, ಆಧುನಿಕ ತಂತ್ರಜ್ಞಾನದ ಸ್ಮಾರ್ಟ್‌ಫೋನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಆಗಸ್ಟ್ 2023, 13:35 IST
Last Updated 30 ಆಗಸ್ಟ್ 2023, 13:35 IST
   

ನವದೆಹಲಿ: ಕಲೆ ಮತ್ತು ತಂತ್ರಜ್ಞಾನವನ್ನು ಹದವಾಗಿ ಬೆರೆಸಿದ ಅತ್ಯಾಧುನಿಕ ತಂತ್ರಜ್ಞಾನದ ಸ್ಮಾರ್ಟ್‌ಫೋನ್‌ ಅನ್ನು ಟೆಕ್‌ನೊ ಕಂಪನಿ ಅಭಿವೃದ್ಧಿಪಡಿಸಿ, ಪರಿಚಯಿಸಿದೆ. 

ವಿಶೇಷ ಆವೃತ್ತಿಯ ಕ್ಯಾಮಾನ್ 20 ಎಂಬ ಸ್ಮಾರ್ಟ್‌ಫೋನ್‌, ಉಬ್ಬಿದ ವಿನ್ಯಾಸವನ್ನು ಹೊಂದಿದೆ. ಹೊಸ ಮಾದರಿಯ ಕಲೆಯುಳ್ಳ ಫೋನ್ ಇದಾಗಿದೆ. ಹಸಿರು ಬಣ್ಣದ ಗುಣಮಟ್ಟದ ಚರ್ಮದ ಹೊದಿಕೆಯ ಸ್ಪರ್ಶವುಳ್ಳ ಮೇಲ್ಮೈ ಇದು ಹೊಂದಿದೆ. ಈ ಎಲ್ಲದರಿಂದ ಇದು ಕೇವಲ ಸ್ಮಾರ್ಟ್‌ಫೋನ್ ಆಗದೆ, ಒಂದು ಅದ್ಭುತ ವಿನ್ಯಾಸದ ವ್ಯಾಖ್ಯಾನವಾಗಿದೆ. ಬೆಲೆಯೂ ಆಕರ್ಷಕವಾಗಿದ್ದು, ಗ್ರಾಹಕರಿಗೆ ಹಿತವೆನಿಸುವಂತಿದೆ ಎಂದು ಕಂಪನಿ ಹೇಳಿದೆ.

ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕ್ಯಾಮಾನ್ 20 ಅವಕಾಡೊ ಆರ್ಟ್ ಎಡಿಷನ್‌ ಸ್ಮಾರ್ಟ್‌ಫೋನ್‌ 6.67 ಇಂಚುಗಳ ಎಫ್‌ಎಚ್‌ಡಿ+ ಪರದೆಯನ್ನು ಹೊಂದಿದೆ. ಡಾಟ್‌–ಇನ್ ಅಮೊಲೆಡ್‌ ಡಿಸ್‌ಪ್ಲೆ ಇದ್ದರದ್ದಾಗಿದೆ. 32 ಮೆಗಾ ಪಿಕ್ಸೆಲ್‌ನ ಕೃತಕ ಬುದ್ಧಿಮತ್ತೆಯ ಸೆಲ್ಫಿ ಫ್ರಂಟ್‌ ಕ್ಯಾಮೆರಾ ಹೊಂದಿದೆ. 64 ಮೆಗಾ ಪಿಕ್ಸೆಲ್‌ನ ಹಿಂಬದಿಯ ಕ್ಯಾಮೆರಾದಲ್ಲಿ ಆರ್‌ಜಿಬಿಡಬ್ಲೂ ಸೆನ್ಸರ್‌ ಅಳವಡಿಸಲಾಗಿದೆ. 5 ಸಾವಿರ ಎಂಎಎಚ್‌ ಬ್ಯಾಟರಿ ಹಾಗೂ ಅದಕ್ಕೆ 33 ವಾಟ್‌ನ ವೇಗದ ಚಾರ್ಜಿಂಗ್‌ ಹೊಂದಿದೆ. ಮೀಡಿಯಾಟೆಕ್‌ ಹಿಲಿಯೊ ಜಿ85 ಪ್ರೊಸೆಸರ್‌ ಅನ್ನು ಇದು ಹೊಂದಿದೆ. ಇದರಿಂದಾಗಿ ಇದರ ಕಾರ್ಯಕ್ಷಮತೆ ಹೆಚ್ಚು ಮೃದುವಾಗಿರುತ್ತದೆ ಹಾಗೂ ವೇಗವಾಗಿದೆ. 16 ಜಿ.ಬಿ. RAM (8 ಜಿ.ಬಿ.+8 ಜಿ.ಬಿ.) ಹೊಂದಿರುವ ಈ ಫೋನ್‌ನ ROM 256 ಜಿ.ಬಿ.ಯದ್ದಾಗಿದೆ.

ADVERTISEMENT

ನೂತನ ಫೋನ್ ಕುರಿತು ಮಾಹಿತಿ ನೀಡಿದ ಟೆಕ್‌ನೊ ಮೊಬೈಲ್ ಕಂಪನಿಯ ಸಿಇಒ ಆರ್ಜೀತ್‌ ತಲಪಾತ್ರ, ‘ಯುವ ಹಾಗೂ ಉತ್ಸಾಹಿ ತಂತ್ರಜ್ಞಾನಿಗಳ ಕಲ್ಪನೆಗೆ ಸರಿ ಹೊಂದುವ ವಿನ್ಯಾಸ ಹಾಗೂ ಆಧುನಿಕ ತಂತ್ರಜ್ಞಾನದ ಗಡಿಯನ್ನೂ ಮೀರಿದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಲ್ಲಿ ಕಂಪನಿ ಸದಾ ಮುಂಚೂಣಿಯಲ್ಲಿದೆ. ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹೊಸ ತಂತ್ರಜ್ಞಾನ ಪರಿಚಯಿಸುವಲ್ಲಿನ ಬದ್ಧತೆಯಿಂದಾಗಿ ಜಾಗತಿಕ ಮಟ್ಟದಲ್ಲಿ ನಮ್ಮದು ಮುಂಚೂಣಿಯ ತಂತ್ರಜ್ಞಾನದ ಉತ್ಪನ್ನ ಎಂಬುದು ಸಾಭೀತಾಗಿದೆ. ಈ ಹೊಸ ಸ್ಮಾರ್ಟ್‌ಫೋನ್ ಮೂಲಕ ತಂತ್ರಜ್ಞಾನ ಮತ್ತು ಕಲೆಯನ್ನು ಹದವಾಗಿ ಬೆರೆಸಿ, ಗ್ರಾಹಕರ ಮನಕ್ಕೊಪ್ಪುವ ಫೋನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ನಮ್ಮ ಪಾಲುದಾರಿಕೆ ಹಾಗೂ ಬದ್ಧತೆಯಿಂದಾಗಿ ವಿನ್ಯಾಸದಲ್ಲಿ ಅದ್ಭುತವನ್ನು ಸಾಧಿಸಿದ್ದೇವೆ. ಆ ಮೂಲಕ ತಂತ್ರಜ್ಞಾನ ಮತ್ತು ಕಲೆಯನ್ನು ಒಂದೇ ಫೋನ್‌ನಲ್ಲಿ ಅಳವಡಿಸಿದ ಹೊಸತನವನ್ನು ಮಾರುಕಟ್ಟೆಯಲ್ಲಿ ಸೃಷ್ಟಿಸಿದ್ದೇವೆ’ ಎಂದಿದ್ದಾರೆ.

‘ಕ್ಯಾಮಾನ್ 20 ಅವಕಾಡೊ ಆರ್ಟ್ ಎಡಿಷನ್‌ ಫೋನ್‌ ಮೂಲಕ ಗ್ರಾಹಕರಿಗೆ ಹೊಸ ಅನುಭೂತಿ ಸಿಗಲಿದೆ. ದೊಡ್ಡದಾದ ಮತ್ತು ಪ್ರಖರ ಡಿಸ್‌ಪ್ಲೆಯಿಂದಾಗಿ ವಿಡಿಯೊ ವೀಕ್ಷಣೆ, ಗೇಮಿಂಗ್‌, ಅಂತರ್ಜಾಲ ವೀಕ್ಷಣೆ ಇನ್ನಷ್ಟು ಉತ್ತಮ ಗುಣಮಟ್ಟದಲ್ಲಿ ಗ್ರಾಹಕರಿಗೆ ಸಿಗಲಿದೆ. ಕೃತಕ ಬುದ್ಧಿಮತ್ತೆಯ ಸೆಲ್ಫಿ ಕ್ಯಾಮೆರಾ ಮೂಲಕ ಅದ್ಭುತ ಚಿತ್ರ ಹಾಗೂ ವಿಡಿಯೊಗಳನ್ನು ಕಡಿಮೆ ಬೆಳಕಿನಲ್ಲೂ ತೆಗೆಯಬಹುದಾಗಿದೆ. ದೀರ್ಘ ಬಾಳಿಕೆಯ ಬ್ಯಾಟರಿ ಇದರದ್ದಾಗಿದ್ದು, ದಿನವಿಡೀ ಫೋನ್ ಅನ್ನು ಚಾರ್ಜ್‌ನ ಸಮಸ್ಯೆ ಇಲ್ಲದೆ ಬೆಳಸಬಹುದಾಗಿದೆ’ ಎಂದು ತಿಳಿಸಿದ್ದಾರೆ.

ಎಲ್ಲಕ್ಕಿಂತಲೂ ಮಿಗಿಲಾಗಿ ಇಂಥ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಮನಕ್ಕೊಪ್ಪುವ ವಿನ್ಯಾಸ ಕ್ಯಾಮಾನ್ 20 ಅವಕಾಡೊ ಫೋನ್‌ ₹15,999ಕ್ಕೆ ಲಭ್ಯ. ಎಲ್ಲಾ ಬಗೆಯ ಸೌಲಭ್ಯವನ್ನೂ ಹೊಂದಿರುವ ಕ್ಯಾಮಾನ್‌ 20 ಅವಕಾಡೊ ಫೋನ್‌ ಎಲ್ಲರ ಆಯ್ಕೆಯಾಗಿದೆ ಎಂದಿದ್ದಾರೆ.

ಟೆಕ್‌ನೊ ಕ್ಯಾಮಾನ್ 20 ಅವಕಾಡೊ ಆರ್ಟ್‌ ಎಡಿಷನ್‌ ಸ್ಮಾರ್ಟ್‌ಫೋನ್‌ನ ಪ್ರಮುಖ ಅಂಶಗಳು

  • 16.95 ಸೆಂ.ಮೀ (6.67 ಇಂಚು) ಎಫ್‌ಎಚ್‌ಡಿ+ ಪರದೆಯನ್ನು ಹೊಂದಿದೆ. ಡಾಟ್‌–ಇನ್ ಅಮೊಲೆಡ್‌ ಡಿಸ್‌ಪ್ಲೆ

  • ಇನ್ ಡಿಸ್‌ಪ್ಲೆ ಬೆರಳಚ್ಚು ಸೆನ್ಸರ್‌ ಇದರದ್ದು

  • 1080*2400 ರೆಸಲೂಷನ್ ಹಾಗೂ ಹೆಚ್ಚು ಕಾರ್ಯ ನಿರ್ವಹಿಸಬಲ್ಲ ಪರದೆ

  • ಟಿಯುವಿ ಹೀನ್‌ಲ್ಯಾಂಡ್‌ ಮಾನ್ಯತೆಯ ನೀಲಿ ಬಣ್ಣದಿಂದ ಕಣ್ಣಿಗೆ ರಕ್ಷಣೆ

  • ಗರಿಷ್ಠ ಸಮಯದವರೆಗೆ ಫೋನ್ ಬಳಕೆ ಮಾಡುವಂತೆ ವಿನ್ಯಾಸಗೊಳಿಸಲಾದ ಅದ್ಭುತ ಡಿಸ್‌ಪ್ಲೇ

  • ಹೊಸ ವಿನ್ಯಾಸದ ಗೀಚುಬರಹಗಳುಳ್ಳು (ಗ್ರಾಫಿಟಿ) ವಿನ್ಯಾಸವನ್ನು ಈ ಫೋನ್ ಹೊಂದಿದೆ

  • ರಿಂಗ್‌ ಫ್ಲಾಷ್‌ನೊಂದಿಗೆ ಡುಯಲ್ ಮ್ಯಾಟ್ರಿಕ್ಸ್ ಕ್ಯಾಮೆರಾ ವಿನ್ಯಾಸವಿದೆ

  • ಕೃತಕ ಬುದ್ಧಿಮತ್ತೆಯ 32 ಮೆಗಾ ಪಿಕ್ಸೆಲ್‌ನ ಮುಂಬದಿಯ ಕ್ಯಾಮೆರಾ ಬೆಳಕನ್ನು ಗ್ರಹಿಸಿ ಚಿತ್ರದ ಗುಣಮಟ್ಟ ಹೆಚ್ಚಿಸುವ ಸೌಕರ್ಯ ಹೊಂದಿದೆ

  • 80.6 ಡಿಗ್ರಿವರೆಗೂ ವಿಸ್ತರಿಸಬಹುದಾದ ಡುಯಲ್ ಫ್ಲಾಷ್‌ಲೈಟ್‌ ಹೊಂದಿರುವ 64 ಮೆಗಾ ಪಿಕ್ಸೆಲ್‌ನ ಹಿಂಬದಿಯ ಕ್ಯಾಮೆರಾ. ಇದು ಆರ್‌ಜಿಬಿಡಬ್ಲೂ ಸೆನ್ಸರ್ ಹೊಂದಿದೆ.

  • ಹೆಚ್ಚು ಸೌಂದರ್ಯ ಮತ್ತು ಸ್ಪಷ್ಟತೆ ಇರುವ ಚಿತ್ರಗಳನ್ನು ಇದು ಸೆರೆ ಹಿಡಿಯಲಿದೆ

ಇಷ್ಟೆಲ್ಲಾ ಸೌಕರ್ಯ ಇರುವ ಟೆಕ್‌ನೊ ಕ್ಯಾಮಾನ್ 20 ಅವಕಾಡೊ ಆರ್ಟ್‌ ಎಡಿಷನ್‌ ಸ್ಮಾರ್ಟ್‌ಫೋನ್‌ನ ಬೆಲೆ ₹15,999 ಎಂದು ಕಂಪನಿ ನಿಗದಿಪಡಿಸಿದೆ. ಜತೆಗೆ ಖರೀದಿಸುವವರ ಜೇಬಿಗೆ ಹೆಚ್ಚುವರಿ ಹೊರೆಯಾಗದಂತೆ ದಿನ ₹30ರಂತೆ ಇಎಂಐ ಸೌಕರ್ಯದೊಂದಿಗೆ ಈ ಫೋನ್ ತಮ್ಮದಾಗಿಸಿಕೊಳ್ಳಬಹುದು ಎಂದು ಕಂಪನಿ ಹೇಳಿದೆ. ಅಮೆಜಾನ್ ಮತ್ತು ರಿಟೇಲ್‌ ಮಳಿಗೆಯಲ್ಲಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.