‘ರಿಯಲ್ಮಿ’ ಸ್ಮಾರ್ಟ್ಫೋನ್ ಕಂಪನಿಯು ಹೀಲಿಯೊ ಪಿ 70 ಪ್ರೊಸೆಸರ್ನ ಮೂರು ಮೊಬೈಲ್ ಫೋನ್ಗಳನ್ನು ಬಿಡುಗಡೆ ಮಾಡಿದೆ. ಇದು 4230 ಎಂಎಎಚ್ ಬ್ಯಾಟರಿ ಹೊಂದಿದ್ದು, ತನ್ನ ವಿಭಾಗದಲ್ಲಿ ದೀರ್ಘ ಬ್ಯಾಟರಿ ಅವಧಿ ಹೊಂದಿದೆ.
‘ರಿಯಲ್ಮಿ’ 3ರಲ್ಲಿ 13 ಎಂಪಿ+2 ಎಂಪಿ ಡ್ಯುಯೆಲ್ ರೇರ್ ಕ್ಯಾಮೆರಾ ಜೊತೆಗೆ ನೈಟ್ ಸ್ಕೇಪ್ ಮತ್ತು ಕ್ರೋಮಾ ಬೂಸ್ಟ್ ಮೋಡ್ ಇದೆ. ಇದು 3ಜಿಬಿ ರ್ಯಾಮ್+32 ಜಿಬಿ ರ್ಯಾಮ್ ಹಾಗೂ 4ಜಿಬಿರ್ಯಾಮ್+62ಜಿಬಿರ್ಯಾಮ್ಗಳ ಎರಡು ಮಾದರಿಗಳಲ್ಲಿ ಲಭ್ಯವಿದೆ. ಜತೆಗೆ 6.2 ಇಂಚು ಡ್ಯೂಡ್ರಾಪ್ ಫೂಲ್ಸ್ಕ್ರೀನ್ ಮತ್ತು ಟ್ರಿಪಲ್ ಸಿಮ್ ಸ್ಲಾಟ್ಗಳಿದ್ದು, 256 ಜಿಬಿಗಳಿಗೆ ವಿಸ್ತರಿಸಬಹುದು.
ಈ ಎರಡೂ ಮಾದರಿಗಳನ್ನು ಕ್ರಮವಾಗಿ ₹8,999 ಹಾಗೂ ₹10,999 ಬೆಲೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಉಪಕರಣ ರೇಡಯೆಂಟ್ ಬ್ಲ್ಯೂ, ಡೈನಾಮಿಕ್ ಬ್ಲ್ಯಾಕ್ ಮತ್ತು ಕ್ಲಾಸಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. ಈ ಮಾದರಿಗಳು ಫ್ಲಿಪ್ಕಾರ್ಟ್ ಡಾಟ್ಕಾಮ್ ಮತ್ತು ರಿಯಲ್ ಮಿ ಡಾಟ್ ಕಾಮ್ಗಳಲ್ಲಿ ಮಾರ್ಚ್ 12ರಂದು ಮಧ್ಯಾಹ್ನ 12ರಿಂದ ಮಾರಾಟ ಆಗಲಿವೆ. ಮಾಹಿತಿಗೆ www.realme.com.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.