ADVERTISEMENT

ಹೈಸೆನ್ಸ್‌ನಿಂದ E7Q Pro QLED ಸ್ಮಾರ್ಟ್ ಟಿವಿ ಅನಾವರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮೇ 2025, 6:58 IST
Last Updated 29 ಮೇ 2025, 6:58 IST
   

ಇಲೆಕ್ಟ್ರಾನಿಕ್ಸ್‌ ಮತ್ತು ಗೃಹೋಪಯೋಗಿ ಉಪಕರಣಗಳಲ್ಲಿ ಮುಂಚೂಣಿಯಲ್ಲಿರುವ ಹೈಸೆನ್ಸ್‌ ಈಗ ಹೊಸ ಸ್ಮಾರ್ಟ್‌ ಟಿವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಆಧುನಿಕ ಗೇಮರ್‌ಗಳ ಬೇಡಿಕೆಗಳನ್ನು ಪೂರೈಸಲಯ ಮತ್ತು ಸಿನಿಮೀಯ ವೀಕ್ಷಣೆಯ ಅನುಭವ ನೀಡಲು ಹೈಸೆನ್ಸ್‌ E7Q ಪ್ರೊ QLED ಸ್ಮಾರ್ಟ್ ಟಿವಿ ಅನಾವರಣ ಮಾಡಿದೆ.

ಈ ಟಿವಿಯು 55 65 ಮತ್ತು 100 ಇಂಚುಗಳಲ್ಲಿ ಲಭ್ಯವಿದೆ. ಅಮೆಜಾನ್‌ನಲ್ಲಿ ಈ ಟಿವಿ ಲಭ್ಯವಿದ್ದು ಆರಂಭಿಕ ಬೆಲೆ ₹42,999 ಆಗಿದೆ. ಟಿವಿಗೆ 1 ವರ್ಷದ ಜಿಯೊಹಾಟ್‌ಸ್ಟಾರ್‌ ಚಂದಾದಾರಿಕೆ, ನೋ ಕಾಸ್ಟ್‌ ಇಎಂಐ ಆಯ್ಕೆ ಲಭ್ಯವಿದೆ. ಈ ಟಿವಿಯು VIDAA U8/U9ಗಳ (2025ರ ಮಾದರಿ) ಎಲ್ಲಾ ಅಪ್ಲಿಕೇಷನ್‌ಗಳಿಗೆ ಸಪೋರ್ಟ್‌ ಮಾಡಲಿದ್ದು, ಯಾವುದೇ ದೋಷ ಮತ್ತು ಭದ್ರತಾ ನವೀಕರಣಗಳ ಮೇಲೆ 8 ವರ್ಷಗಳ ಗ್ಯಾರಂಟಿಯನ್ನು ಹೊಂದಿದೆ.

ADVERTISEMENT

ಹೊಸ ಸ್ಮಾರ್ಟ್ ಟಿವಿ ಅದ್ಭುತವಾದ QLED ತಂತ್ರಜ್ಞಾನವನ್ನು ನೀಡುತ್ತದೆ. ಗುಣಮಟ್ಟದ ದೃಶ್ಯ ಬಣ್ಣವನ್ನು ಹೊಂದಿರುತ್ತದೆ, E7Q Pro ನ ಪ್ರಮುಖ 100 ಇಂಚಿನ ಮಾದರಿಯು ಸಿನಿಮಾ-ಗುಣಮಟ್ಟದ ಆಡಿಯೊ ಕಾರ್ಯಕ್ಷಮತೆಗಾಗಿ ಸಂಯೋಜಿತ ಸಬ್ ವೂಫರ್ ತಂತ್ರಜ್ಞಾನವನ್ನು ಹೊಂದಿದೆ.

ಗೇಮರ್‌ಗಳಿಗೆ ಈ ಟಿವಿ ಉತ್ತಮವಾಗಿದ್ದು, 144 ರಿಫ್ರೆಶ್‌ ರೇಟ್‌, ಡಾಲ್ಬಿ ವಿಷನ್ ಅಟ್ಮಾಸ್ ಮತ್ತು AMD ಫ್ರೀಸಿಂಕ್ ಪ್ರೀಮಿಯಂ ಪ್ರಮಾಣೀಕರಣ, AI ಸ್ಮೂತ್ ಮೋಷನ್ ವೈಶಿಷ್ಟ್ಯದೊಂದಿಗೆ, E7Q ಪ್ರೊ ಗೇಮರ್‌ಗಳಿಗಾಗಿ ಕಡಿಮೆ-ಲೇಟೆನ್ಸಿ ಗೇಮ್ ಮೋಡ್‌ನಲ್ಲಿ ಸುಗಮ ಚಲನೆಯ ಗ್ರಾಫಿಕ್ಸ್ ಅನಭವವನ್ನು ನೀಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.