ADVERTISEMENT

ಲಾವಾ ಮೇಡ್‌ ಇನ್‌ ಇಂಡಿಯಾ ಹೊಸ ಬಜೆಟ್ ಸ್ಮಾರ್ಟ್‌ಫೋನ್‌: ಬೆಲೆ ₹5,774

ಏಜೆನ್ಸೀಸ್
Published 9 ಜುಲೈ 2020, 8:41 IST
Last Updated 9 ಜುಲೈ 2020, 8:41 IST
ಲಾವಾ ಹೊಸ ಫೋನ್‌ ಝಡ್‌61 ಪ್ರೊ
ಲಾವಾ ಹೊಸ ಫೋನ್‌ ಝಡ್‌61 ಪ್ರೊ   
""

ಬೆಂಗಳೂರು: ಭಾರತೀಯ ಮೂಲದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಲಾವಾ ಹೊಸ ಫೋನ್‌ ಬಿಡುಗಡೆ ಮಾಡಿದೆ. ಲಾವಾ ಝಡ್‌61 ಪ್ರೊ (Z61 Pro) ಸ್ಮಾರ್ಟ್‌ಫೋನ್‌ಗೆ ₹5,774 ಬೆಲೆ ನಿಗದಿಯಾಗಿದೆ.

ಮಿಡ್‌ನೈಟ್‌ ಬ್ಲೂ ಮತ್ತು ಆ್ಯಂಬರ್‌ ರೆಡ್‌ ಬಣ್ಣಗಳಲ್ಲಿ ಈ ಫೋನ್‌ ಸಿಗಲಿದೆ.

5.45 ಇಂಚು ಎಚ್‌ಡಿ+ ಡಿಸ್‌ಪ್ಲೇ ಇದ್ದು, ಆರಂಭಿಕ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಸೂಕ್ತ ಆಯ್ಕೆಯಾಗಿದೆ. ಫೋನ್‌ ಹಿಂಬದಿಯಲ್ಲಿ 8ಎಂಪಿ ಕ್ಯಾಮೆರಾ ಮತ್ತು ಎಲ್‌ಇಡಿ ಫ್ಲ್ಯಾಷ್‌ ಹಾಗೂ ಸೆಲ್ಫಿಗಾಗಿ ಮುಂಭಾಗದಲ್ಲಿ 5ಎಂಪಿ ಕ್ಯಾಮೆರಾ ನೀಡಲಾಗಿದೆ. ಕ್ಯಾಮೆರಾ ಪ್ರಿಯರಿಗೆ ಪೋರ್ಟ್ರೇಟ್‌ ಮೋಡ್‌, ಪನೋರಮಾ, ಬರ್ಸ್ಟ್‌ ಮೋಡ್‌, ಫಿಲ್ಟರ್ಸ್‌, ಬ್ಯೂಟಿ ಮೋಡ್‌, ಎಚ್‌ಡಿಆರ್‌ ಹಾಗೂ ನೈಟ್‌ ಮೋಡ್‌ನಂತಹ ಆಯ್ಕೆಗಳಿವೆ.

ADVERTISEMENT

2ಜಿಬಿ ರ್‍ಯಾಮ್‌ ಮತ್ತು 16ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಲಾವಾ ಝಡ್‌61 ಪ್ರೊಗೆ 3,100ಎಂಎಎಚ್‌ ಬ್ಯಾಟರಿ ಅಳವಡಿಸಲಾಗಿದೆ. ಹೆಚ್ಚುವರಿಯಾಗಿ 128ಜಿಬಿ ವರೆಗೂ ಸಂಗ್ರಹ ಸಾಮರ್ಥ್ಯ ವಿಸ್ತರಿಸಿಕೊಳ್ಳುವ ಅವಕಾಶವಿದೆ.

ಮುಖದ ಗುರುತು ಪತ್ತೆ ಮಾಡಿ ಫೋನ್‌ ಅನ್‌ಲಾಕ್‌ ಆಗುವ ಆಯ್ಕೆ ಇದ್ದು, ಕೇವಲ 0.60 ಸೆಕೆಂಡ್‌ಗಳಲ್ಲಿ ಫೋನ್‌ ತೆರೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿದೆ. ಉಳಿದಂತೆ ಬ್ಲೂಟೂಥ್‌ 4.2, ವೈಫೈಮ ಜಿಪಿಎಸ್‌, ಡ್ಯೂಯಲ್‌ ಸಿಮ್‌, ಒಟಿಜಿ ಸಪೋರ್ಟ್‌ ಹಾಗೂ ಮೈಕ್ರೊ ಯುಎಸ್‌ಬಿ ಪೋರ್ಟ್‌ ಅಳವಡಿಸಲಾಗಿದೆ.

ಭಾರತೀಯ ಕಂಪನಿ ಮತ್ತು ದೇಶದಲ್ಲಿಯೇ ಸಿದ್ಧವಾಗಿರುವ ಫೋನ್‌ ಆಗಿರುವುದರಿಂದ ಜನರ ಗಮನ ಸೆಳೆದಿದೆ. ಚೀನಾ ಫೋನ್‌ಗಳ ಬದಲು ಭಾರತದ ಫೋನ್‌ ಹುಡುಕಾಟ ನಡೆಸುತ್ತಿರುವವರಿಗೆ ಇದು ಸಹಕಾರಿಯಾಗಬಹುದು. ₹7,000 ಬೆಲೆಗಿಂತ ಕಡಿಮೆಯ ಸ್ಮಾರ್ಟ್‌ಫೋನ್‌ಗಳಿಗೆ ಲಾವಾ ಈಗ ಪೈಪೋಟಿ ನೀಡುತ್ತಿದೆ. ಚೀನಾದ ರಿಯಲ್‌ಮಿ ಸಿ2, ಕ್ಸಿಯೋಮಿ ರೆಡ್‌ಮಿ 8ಎ, ವಿವೊ ವೈ911ಐ ಹಾಗೂ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಜೆ ಸರಣಿಯ ಫೋನ್‌ಗಳಿಗೆ ಸ್ಪರ್ಧೆಯೊಡ್ಡಬಹುದಾಗಿದೆ.

ಲಾವಾ ಝಡ್‌61 ಪ್ರೊ ಗುಣಲಕ್ಷಣಗಳು:

ಡಿಸ್‌ಪ್ಲೇ: 5.45 ಇಂಚು ಎಚ್‌ಡಿ
ಪ್ರೊಸೆಸರ್‌: 1.6 ಗಿಗಾಹರ್ಟ್ಸ್‌ ಆಕ್ಟಾ ಕೋರ್‌
ಸಾಮರ್ಥ್ಯ: 2ಜಿಬಿ ರ್‍ಯಾಮ್‌, 16ಜಿಬಿ ಸಂಗ್ರಹ (ಮೈಕ್ರೊಎಸ್‌ಡಿ ಕಾರ್ಡ್‌ ಮೂಲಕ 128ಜಿಬಿ ವರೆಗೂ ವಿಸ್ತರಿಸಬಹುದು)
ಕ್ಯಾಮೆರಾ: ಹಿಂಬದಿಯಲ್ಲಿ 8ಎಂಪಿ, ಸೆಲ್ಫಿಗಾಗಿ 5ಎಂಪಿ
ಬ್ಯಾಟರಿ: 3100ಎಂಎಎಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.