ADVERTISEMENT

MI ಹೊಸ ಸ್ಮಾರ್ಟ್‌ ಟಿವಿ '4X 2020 ಎಡಿಷನ್‌' ಬಿಡುಗಡೆ; 55 ಇಂಚು,8 ಜಿಬಿ ಸಂಗ್ರಹ

ಏಜೆನ್ಸೀಸ್
Published 28 ನವೆಂಬರ್ 2019, 13:09 IST
Last Updated 28 ನವೆಂಬರ್ 2019, 13:09 IST
MI ಹೊಸ ಸ್ಮಾರ್ಟ್‌ ಟಿವಿ '4X 2020 ಎಡಿಷನ್‌'
MI ಹೊಸ ಸ್ಮಾರ್ಟ್‌ ಟಿವಿ '4X 2020 ಎಡಿಷನ್‌'    

ಕಡಿಮೆ ದರ, ಆಧುನಿಕ ತಂತ್ರಜ್ಞಾನ ಮತ್ತು ಗುಣಮಟ್ಟದಲ್ಲೂ ರಾಜಿಯಾಗದ ಉತ್ಪನ್ನಗಳ ಮೂಲಕ ಭಾರತೀಯ ಗ್ರಾಹಕರನ್ನು ಸೆಳೆದುಕೊಂಡಿರುವ ಚೀನಾ ಮೂಲದ ಶಿಯೋಮಿ 'ಎಂಐ', ಈಗ 55 ಇಂಚಿನ ಹೊಸ ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡಿದೆ.

'ಎಂಐ 4ಎಕ್ಸ್‌ 2020 ಎಡಿಷನ್‌' 55 ಇಂಚಿನ 4ಕೆ ಎಚ್‌ಡಿಆರ್‌ ಡಿಸ್‌ಪ್ಲೇ ಹೊಂದಿದೆ. ಉತ್ತಮ ವೀಕ್ಷಣೆ ಅನುಭವದ ಜತೆಗೆ ಕೇಳುವಿಕೆಯ ಅನುಭವವನ್ನೂ ಉತ್ತಮ ಪಡಿಸಲಾಗಿದ್ದು, ಡಾಲ್ಬಿ ಆಡಿಯೊ ಮತ್ತು ಡಿಟಿಎಸ್‌–ಎಚ್‌ಡಿ ಅನುಭವ ಸಿಗಲಿದೆ. ಆ್ಯಂಡ್ರಾಯ್ಡ್‌9 ಆಪರೇಟಿಂಗ್‌ ಸಿಸ್ಟಮ್‌ನೊಂದಿಗೆಪ್ಯಾಚ್‌ವಾಲ್‌ 2.0 ಸಾಫ್ಟ್‌ವೇರ್‌ ಸಂಪರ್ಕ ವ್ಯವಸ್ಥೆಯು ಓವರ್ ದಿ ಟಾಪ್‌(ಒಟಿಟಿ) ಸೇವೆಗಳಿಗೆ ಅನುಮಾಡಿಕೊಡುತ್ತದೆ. ಅಮೆಜಾನ್‌ ಪ್ರೈಮ್‌, ಹಾಟ್‌ಸ್ಟಾರ್‌ ಹಾಗೂ ನೆಟ್‌ಫ್ಲಿಕ್‌ ಕಾರ್ಯಕ್ರಮಗಳ ವೀಕ್ಷಣೆಗೆ ಸಹಕಾರಿಯಾಗಿದೆ.

ಗೂಗಲ್‌ ಅಸಿಸ್ಟಂಟ್‌ ಹಾಗೂ ಯುಟ್ಯೂಬ್‌, ಕ್ರೋಮ್‌ಕಾಸ್ಟ್‌ ಮತ್ತು ಗೂಗಲ್‌ ಪ್ಲೇ ಸ್ಟೋರ್‌ ಅಪ್ಲಿಕೇಷನ್‌ಗಳನ್ನು ಒಳಗೊಂಡಿದೆ. ಡಾಟಾ ಉಳಿಸಿಕೊಳ್ಳಲು ಡಾಟಾ ಸೇವರ್‌ ಆಯ್ಕೆ ಸಹ ಇದೆ. ಇದು ಎಂಐ ಟಿವಿ 4ಎಕ್ಸ್‌ ಪ್ರೊ ಮಾದರಿಯ ಪರಿಷ್ಕೃತ ಟಿವಿ ಆಗಿದೆ.

ADVERTISEMENT

ಆರಂಭಿಕ ಕೊಡುಗೆ

ಭಾರತದಲ್ಲಿ ಎಂಐ ಹೊಸ ಸ್ಮಾರ್ಟ್‌ ಟಿವಿಯನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದು, ಭಾರತದಲ್ಲಿ ₹34,999 ಬೆಲೆ ನಿಗದಿಯಾಗಿದೆ. ಡಿಸೆಂಬರ್‌ 2ರ ಮಧ್ಯಾಹ್ನ 12ರಿಂದ ಅಮೆಜಾನ್, ಎಂಐ.ಕಾಂ ಹಾಗೂ ಎಂಐ ಹೋಮ್‌ ಸ್ಟೋರ್ಸ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ ಟಿವಿ ಖರೀದಿಸುವವರು ₹1,800 ಹೆಚ್ಚುವರಿಯಾಗಿ ನೀಡಿ ನಾಲ್ಕು ತಿಂಗಳ ಏರ್‌ಟೆಲ್‌ ಡಿಟಿಎಚ್‌ ಸಂಪರ್ಕ ಪಡೆದುಕೊಳ್ಳಬಹುದು. ಈ ಕೊಡುಗೆ 2020ರ ಜನವರಿ 31ರ ವರೆಗೂ ಇರಲಿದೆ.

8 ಜಿಬಿ ಸಂಗ್ರಹ ಸಾಮರ್ಥ್ಯ

ಕ್ವಾಡ್‌–ಕೋರ್‌ ಎಎಂಲಾಜಿಕ್‌ ಕಾರ್ಟೆಕ್ಸ್‌–ಎ53 ಚಿಪ್‌, ಗ್ರಾಫಿಕ್‌ ಮತ್ತು ಮಲ್ಟಿಮೀಡಿಯಾ ಪ್ರೊಸೆಸರ್‌Mali-450 ಎಂಪಿ3 ಜಿಪಿಯು, 2 ಜಿಬಿ ಡಿಡಿಆರ್‌ ರ್‍ಯಾಮ್‌ ಹಾಗೂ 8 ಜಿಬಿ ಸಂಗ್ರಹ ಸಾಮರ್ಥ್ಯ( eMMC ಕಾರ್ಡ್‌) ಹೊಂದಿದೆ. 10 ವ್ಯಾಟ್‌ನ ಎರಡು ಸ್ಪೀಕರ್‌ಗಳು, ಎರಡು ಯುಎಸ್‌ಬಿ 2.0 ಪೋರ್ಟ್‌ಗಳು, ಮೂರು ಎಚ್‌ಡಿಎಂಐ ಪೋರ್ಟ್‌ಗಳು, ಒಂದು ಇಥರ್ನೆಟ್‌ ಪೋರ್ಟ್‌, ಒಂದು ಹೆಡ್‌ಫೋನ್‌ ಜ್ಯಾಕ್‌, ಒಂದು ಎವಿ ಔಟ್‌, ಡ್ಯೂಯಲ್‌ ಬ್ಯಾಂಡ್‌ ವೈ–ಫೈ ಹಾಗೂ ಬ್ಲೂಟೂತ್‌ ರಿಮೋಟ್‌ ಕಂಟ್ರೋಲ್‌ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.