ADVERTISEMENT

ರಿಯಲ್‌ಮಿ 5, ರಿಯಲ್‌ಮಿ 5ಪ್ರೊ ಸ್ಮಾರ್ಟ್‌ಫೋನ್‌ ಮಂಗಳವಾರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 10:49 IST
Last Updated 18 ಆಗಸ್ಟ್ 2019, 10:49 IST
   

ಚೀನಾದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ರಿಯಲ್‌ಮಿ, ಎರಡು ಹೊಸ ಹ್ಯಾಂಡ್‌ಸೆಟ್‌ಗಳನ್ನು ಮಂಗಳವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ರಿಯಲ್‌ಮಿ 5 ಮತ್ತು ರಿಯಲ್‌ಮಿ 5 ಪ್ರೊ ಸ್ಮಾರ್ಟ್‌ಫೋನ್‌ಗಳನ್ನುಮಂಗಳವಾರ 12.30ಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.ಕ್ಯಾಮೆರಾ ಮತ್ತು ಬ್ಯಾಟರಿ ಬಗ್ಗೆ ಕೆಲವು ಅಂಶಗಳನ್ನು ತನ್ನ ಜಾಲತಾಣದಲ್ಲಿ ಹಂಚಿಕೊಂಡಿದೆ. ಇನ್ನೂ ಹೆಚ್ಚಿನ ಅಧಿಕೃತ ಮಾಹಿತಿಗೆ ಬಿಡುಗಡೆಯ ದಿನದವರೆಗೆ ಕಾಯಬೇಕಾಗುತ್ತದೆ.

ರಿಯಲ್‌ಮಿ 5:ಈ ಮೊಬೈಲ್‌ಗಳಲ್ಲಿ ಮೊದಲ ಬಾರಿಗೆ ಕ್ಯಾಡ್‌ ಕ್ಯಾಮೆರಾ ಅಳವಡಿಸಲಾಗಿದೆ. ವಿನ್ಯಾಸ, ಕ್ಯಾಮೆರಾ ಮತ್ತು ಹಾರ್ಡ್‌ವೇರ್‌ ದೃಷ್ಟಿಯಿಂದ ರಿಯಲ್‌ಮಿ ಸರಣಿಗಿಂತಲೂ ಅಪ್‌ಗ್ರೇಡ್‌ ಆಗಿದೆ.

ADVERTISEMENT

ಲೆನ್ಸ್:ಪ್ರೈಮರಿ,ಅಲ್ಟ್ರಾವೈಡ್‌–ಆ್ಯಂಗಲ್‌, ಸೂಪರ್‌ ಮ್ಯಾಕ್ರೊ ಹಾಗೂ ಪೋರ್ಟ್‌ರೇಟ್‌ ಲೆನ್ಸ್‌ಗಳಿವೆ.

ಬ್ಯಾಟರಿ: ಇದರಲ್ಲಿ 5,000 ಎಂಎಎಚ್‌ ಬ್ಯಾಟರಿ ಇದ್ದು, ಇದುವರೆಗೆ ಮಾರುಕಟ್ಟೆಯಲ್ಲಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗಿಂತಲೂ ಸಾಮರ್ಥ್ಯದಲ್ಲಿ ದೊಡ್ಡದಾದ ಬ್ಯಾಟರಿ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಕ್ಯಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ ಪ್ರೊಸೆಸರ್‌ ಒಳಗೊಂಡಿರಲಿದೆ.

ರಿಯಲ್‌ಮಿ 5 ಪ್ರೊ: ಇದರಲ್ಲಿ ಕ್ಯಾಡ್‌ ಕ್ಯಾಮೆರಾ ಸ್ಪೀಡ್‌ಸ್ಟರ್‌ ಇದೆ. 48 ಎಂಪಿ ಸೋನಿ ಐಎಂಎಕ್ಸ್‌ 586 ಕ್ಯಾಮೆರಾದ ಜತೆಗೆಪ್ರೈಮರಿ, ಅಲ್ಟ್ರಾವೈಡ್‌–ಆ್ಯಂಗಲ್‌, ಸೂಪರ್‌ ಮ್ಯಾಕ್ರೊ ಹಾಗೂ ಪೋರ್ಟ್‌ರೇಟ್‌ ಲೆನ್ಸ್‌ಗಳಿವೆ.

ವೇಗವಾಗಿ ಚಾರ್ಜ್‌ ಆಗಲು vooc ಫ್ಲ್ಯಾಷ್‌ ಚಾರ್ಜ್ರ್ 3.0 ಒಳಗೊಂಡಿದೆ. 30 ನಿಮಿಷಗಳಲ್ಲಿ ಶೇ 55ರಷ್ಟು ಚಾರ್ಜ್‌ ಆಗುತ್ತದೆ.

ಇದರಲ್ಲಿಯೂ ಕ್ಯಾಲ್ಕಂಸ್ನ್ಯಾಪ್‌ಡ್ರ್ಯಾಗನ್‌ ಪ್ರೊಸೆಸರ್‌ ಇರಲಿದೆ.

ಮಾಹಿತಿಗೆ:https://www.realme.com/in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.