ADVERTISEMENT

60 ವರ್ಷಗಳಲ್ಲಿ ಮೊದಲ ಬಾರಿಗೆ ತನ್ನ ಬ್ರ್ಯಾಂಡ್‌ಗೆ ಹೊಸ ರೂಪ ನೀಡಿದ ನೋಕಿಯಾ

ರಾಯಿಟರ್ಸ್
Published 27 ಫೆಬ್ರುವರಿ 2023, 5:11 IST
Last Updated 27 ಫೆಬ್ರುವರಿ 2023, 5:11 IST
ನೋಕಿಯಾ ಅಧ್ಯಕ್ಷ ಪೆಕ್ಕಾ ಲುಂಡ್ಮಾರ್ಕ್ ಅವರು ಕಂಪನಿಯ ಹೊಸ ಲೋಗೊ ಪರಿಚಯಿಸಿದರು     –ಎಎಫ್‌ಪಿ ಚಿತ್ರ
ನೋಕಿಯಾ ಅಧ್ಯಕ್ಷ ಪೆಕ್ಕಾ ಲುಂಡ್ಮಾರ್ಕ್ ಅವರು ಕಂಪನಿಯ ಹೊಸ ಲೋಗೊ ಪರಿಚಯಿಸಿದರು     –ಎಎಫ್‌ಪಿ ಚಿತ್ರ   

ಬಾರ್ಸಿಲೋನಾ: ದೂರಸಂಪರ್ಕ ಸಾಧನಗಳನ್ನು ತಯಾರಿಸುವ ನೋಕಿಯಾ ಕಂಪನಿಯು 60 ವರ್ಷಗಳಲ್ಲಿ ಮೊದಲ ಬಾರಿಗೆ ತನ್ನ ಬ್ರ್ಯಾಂಡ್‌ಗೆ ಹೊಸ ರೂಪ ನೀಡಿದೆ.

ಹೊಸ ಲೋಗೊ ‘ನೋಕಿಯಾ’ದ ಐದು ಅಕ್ಷರಗಳನ್ನು ಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸದ್ಯ ನೀಲಿ ಬಣ್ಣದಲ್ಲಿ ಇರುವ ಲೋಗೊವನ್ನು ಕೈಬಿಡಲಾಗಿದ್ದು, ಬೇರೆ ಬೇರೆ ಉದ್ದೇಶಕ್ಕೆ ಬಳಸಲು ಅನುಕೂಲ ಆಗುವಂತೆ ಹಲವು ಬಣ್ಣಗಳನ್ನು ಬಳಸಲಾಗಿದೆ.

ವಹಿವಾಟಿನಲ್ಲಿ ತ್ವರಿತಗತಿಯ ಬೆಳವಣಿಗೆ ಸಾಧಿಸುವ ಉದ್ದೇಶದಿಂದ ಈ ಬದಲಾವಣೆಗಳನ್ನು ಮಾಡಿರುವುದಾಗಿ ಕಂಪನಿ ಹೇಳಿದೆ.

ADVERTISEMENT

ಸೋಮವಾರದಿಂದ ಗುರವಾರದವರೆಗೆ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ (ಎಂಡ್ಬ್ಲ್ಯುಸಿ) ನಡೆಯಲಿದ್ದು, ಅದಕ್ಕೂ ಮೊದಲೇ ಕಂಪನಿಯು ತನ್ನ ಬ್ರ್ಯಾಂಡ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದೆ. ಸೇವೆಗಳನ್ನು ಪೂರೈಸುವ ವಹಿವಾಟಿನತ್ತ ಕಂಪನಿ ಗಮನ ಮುಂದುವರಿಸಲಿದ್ದು, ದೂರಸಂಪರ್ಕ ಕಂಪನಿಗಳಿಗೆ ಅಗತ್ಯ ಸಾಧನಗಳನ್ನು ನೀಡುವುದು, ಅದರಲ್ಲಿಯೂ ಮುಖ್ಯವಾಗಿ ಬೇರೆ ಉದ್ದಿಮೆಗಳಿಗೆ ಟೆಲಿಕಾಂ ಗಿಯರ್‌ ಮಾರಾಟ ಮಾಡಲು ಹೆಚ್ಚು ಗಮನ ಹರಿಸಲು ನಿರ್ಧರಿಸಿದೆ.

ಕಂಪನಿಯು ತನ್ನ ಬೆಳವಣಿಗೆಯ ಹಾದಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಮುಂದಾಗಿದೆ. ಷೇರು ವಿಕ್ರಯದಂತಹ ಪರ್ಯಾಯಗಳನ್ನು ಪರಿಶೀಲಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.