ADVERTISEMENT

Oppo F21 Pro: ಆಕರ್ಷಕ ವಿನ್ಯಾಸದ ಸ್ಮಾರ್ಟ್‌ಫೋನ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಏಪ್ರಿಲ್ 2022, 8:24 IST
Last Updated 13 ಏಪ್ರಿಲ್ 2022, 8:24 IST
ಒಪ್ಪೊ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ
ಒಪ್ಪೊ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ   

ಬೆಂಗಳೂರು: ಸ್ಮಾರ್ಟ್‌ಫೋನ್ ಫೋಟೊಗ್ರಫಿ ಪ್ರಿಯರಿಗಾಗಿ ಒಪ್ಪೊ, ಹೊಸ F21 Pro ಬಿಡುಗಡೆ ಮಾಡಿದೆ.

ತೆಳುವಾದ ವಿನ್ಯಾಸ, ತನ್ನ ಸೆಗ್ಮೆಂಟ್‌ನಲ್ಲೇ ಮೊದಲ ಬಾರಿಗೆ ಸೋನಿ IMX709 ಸೆಲ್ಫಿ ಕ್ಯಾಮೆರಾ ಸೆನ್ಸರ್ ಹೊಂದಿದೆ ಎಂದು ಒಪ್ಪೊ ಹೇಳಿದೆ.

ಒಪ್ಪೊ F21 Pro ಮತ್ತು F21 Pro 5G ದೇಶದ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ADVERTISEMENT

ಒಪ್ಪೊ F21 Pro ವೈಶಿಷ್ಟ್ಯಗಳು
ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 680 ಪ್ರೊಸೆಸರ್
32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
64 ಮೆಗಾಪಿಕ್ಸೆಲ್ ಜತೆಗೆ 2+2 ಮೆಗಾಪಿಕ್ಸೆಲ್ ತ್ರಿವಳಿ ಹಿಂಬದಿ ಕ್ಯಾಮೆರಾ
6.4 ಇಂಚಿನ ಅಮೊಲಿಡ್ ಡಿಸ್‌ಪ್ಲೇ
4500mAh ಬ್ಯಾಟರಿ, 33W ಸೂಪರ್‌ಚಾರ್ಜ್
8GB + 128GB ಇದರಲ್ಲಿದೆ.

ಒಪ್ಪೊ F21 Pro 5G
ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 695 ಪ್ರೊಸೆಸರ್
16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
64 ಮೆಗಾಪಿಕ್ಸೆಲ್ ಜತೆಗೆ 2+2 ಮೆಗಾಪಿಕ್ಸೆಲ್ ತ್ರಿವಳಿ ಹಿಂಬದಿ ಕ್ಯಾಮೆರಾ
6.4 ಇಂಚಿನ ಅಮೊಲಿಡ್ ಡಿಸ್‌ಪ್ಲೇ
4500mAh ಬ್ಯಾಟರಿ, 33W ಸೂಪರ್‌ಚಾರ್ಜ್
8GB + 128GB ಇದರ ವಿಶೇಷತೆ ಎಂದು ಒಪ್ಪೊ ಹೇಳಿದೆ.

ಬೆಲೆ ಮತ್ತು ಲಭ್ಯತೆ
ಒಪ್ಪೊ F21 Pro ದರ ₹22,999 ಇದ್ದು, ಏ.15ರಿಂದ ಲಭ್ಯವಾಗಲಿದೆ.

ಒಪ್ಪೊ F21 Pro 5G ದರ ₹26,999 ದರವಿದ್ದು, ಏ. 21ರಿಂದ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.