ADVERTISEMENT

5ಜಿ ತಂತ್ರಜ್ಞಾನ, 108ಎಂಪಿ ಕ್ಯಾಮೆರಾ; ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ಎಸ್‌20‘ ಸರಣಿ

ಏಜೆನ್ಸೀಸ್
Published 12 ಫೆಬ್ರುವರಿ 2020, 10:29 IST
Last Updated 12 ಫೆಬ್ರುವರಿ 2020, 10:29 IST
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌20 ಸರಣಿಯ ಸ್ಮಾರ್ಟ್‌ಫೋನ್‌
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌20 ಸರಣಿಯ ಸ್ಮಾರ್ಟ್‌ಫೋನ್‌   
""

ಸ್ಯಾನ್‌ ಫ್ರಾನ್ಸಿಸ್ಕೊ (ಅಮೆರಿಕ):ಜಗತ್ತಿಗೆ ಮತ್ತಷ್ಟು ವೇಗ ನೀಡುವ 5ಜಿ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಿದ್ಧತೆ ನಡೆದಿರುವಾಗಲೇ ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ಸ್‌ ದಿಗ್ಗಜ ಸ್ಯಾಮ್‌ಸಂಗ್‌ ಹೊಸ 'ಗ್ಯಾಲಕ್ಸಿ ಎಸ್‌20' ಅನಾವರಣಗೊಳಿಸಿದೆ. ಆರ್ಟಿಫಿಶಿಯಲ್‌ ಕ್ಯಾಮೆರಾ ತಂತ್ರಜ್ಞಾನ ಮತ್ತು 5ಜಿ ಅಂತರ್ಜಾಲ ವ್ಯವಸ್ಥೆಗೆ ಸಹಕಾರಿಯಾಗುವಂತೆ ಎಸ್‌20 ರೂಪಿಸಲಾಗಿದೆ.

ನಮ್ಮ ನಿತ್ಯದ ಕೆಲಸಗಳು, ಸಂಪರ್ಕ, ಸಂವಹನ, ಗೇಮಿಂಗ್‌,...ಹೀಗೆ ಎಲ್ಲವನ್ನೂ ಬದಲಿಸುವ ಸಾಮರ್ಥ್ಯ 5ಜಿ ಹೊಂದಿರಲಿದೆ. ಹೊಸ ತಲೆಮಾರಿನ ಬದಲಾವಣೆಗೆ ಆಗಲೇ ಸಜ್ಜಾಗಿರುವ ಸ್ಯಾಮ್‌ಸಂಗ್‌ 5ಜಿಗೆ ಸಹಕರಿಸುವ 'ಗ್ಯಾಲಕ್ಸಿ ಎಸ್‌20' ಸರಣಿ ಪರಿಚಯಿಸಿದೆ. ಗ್ಯಾಲಕ್ಸಿ ಎಸ್‌20,ಗ್ಯಾಲಕ್ಸಿ ಎಸ್‌20+ ಹಾಗೂಗ್ಯಾಲಕ್ಸಿ ಎಸ್‌20 ಅಲ್ಟ್ರಾ – ಮೂರು ಮಾದರಿಗಳಲ್ಲಿ ಲಭ್ಯವಿರಲಿದೆ ಎಂದು ಸ್ಯಾಮ್‌ಸಂಗ್‌ ಹೇಳಿದೆ.

ಭವಿಷ್ಯದ ಸಂಪರ್ಕ ವ್ಯವಸ್ಥೆಯನ್ನು ಗಮನದಲ್ಲಿರಿಸಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಎಐ) ಕ್ಯಾಮೆರಾ ಟೆಕ್ನಾಲಜಿ ಅಳವಡಿಸಲಾಗಿದೆ.ಅತ್ಯಂತ ಸುರಕ್ಷಿತ ಪ್ರೊಸೆಸರ್‌ ಬಳಸಲಾಗಿದ್ದು, ಹಾರ್ಡ್‌ವೇರ್‌ ಮೂಲಕ ಹ್ಯಾಕ್‌ ಅಥವಾ ಅಟ್ಯಾಕ್‌ಗಳಿಂದ ರಕ್ಷಣೆ ಸಿಗಲಿದೆ.

ADVERTISEMENT

ಕ್ಯಾಮೆರಾ ರೆಸಲ್ಯೂಷನ್‌ ಕಡೆಗೂ ಹೆಚ್ಚಿನ ಗಮನ ನೀಡಲಾಗಿದ್ದು, ಎಸ್‌20 ಮತ್ತು ಎಸ್‌20+ ಫೋನ್‌ಗಳಲ್ಲಿ 64ಎಂಪಿ ಕ್ಯಾಮೆರಾ ಅಳವಡಿಸಲಾಗಿದೆ. ಎಸ್‌20 ಅಲ್ಟ್ರಾದಲ್ಲಿ 108ಎಂಪಿ ಕ್ಯಾಮೆರಾ ನೀಡಲಾಗಿದೆ. ಹೊಸ ಫೋನ್‌ಗಳು ಮಾರ್ಚ್‌ 6ರಿಂದ ಖರೀದಿಗೆ ಸಿಗಲಿದೆ. ಬೆಲೆ 999–1,399 ಡಾಲರ್‌ (₹ 71,202–99,711) ಇರಲಿದೆ ಎಂದು ಕಂಪನಿ ತಿಳಿಸಿದೆ.

ಮೂರು ಕ್ಯಾಮೆರಾ ಮತ್ತು ಡೆಫ್ತ್‌ ವಿಷನ್‌ ಕ್ಯಾಮೆರಾದೊಂದಿಗೆ 8ಕೆ ವಿಡಿಯೊ ಸಾಮರ್ಥ್ಯ ಒಳಗೊಂಡಿರಲಿದೆ ಹಾಗೂ 100 ಪಟ್ಟು ಜೂಮ್‌ ಅನುಭವ ಸಿಗಲಿದೆ. ಸಿನಿಮಾ, ಟಿವಿ ಕಾರ್ಯಕ್ರಮಗಳನ್ನು ನೀಡುವ ವೇದಿಕೆ ನೆಟ್‌ಫ್ಲಿಕ್ಸ್‌ ಹಾಗೂ ಎಕ್ಸ್‌ಬಾಕ್ಸ್‌ ವಿಡಿಯೊ ಗೇಮ್‌ ಕಲ್ಸೋಲ್‌ ತಯಾರಿಸುವ ಮೈಕ್ರೊಸಾಫ್ಟ್ ಜೊತೆಗೆ ಹೊಸ ಒಪ್ಪಂದಗಳನ್ನು ಮಾಡಿಕೊಂಡಿದೆ.

ಜಾಗತಿಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಆ್ಯಪಲ್‌ ಐಫೋನ್‌ ಹಾಗೂ ಒನ್‌ಪ್ಲಸ್‌ ಫೋನ್‌ಗಳಿಂದ ಸ್ಯಾಮ್‌ಸಂಗ್‌ ಪೈಪೋಟಿ ಎದುರಿಸುತ್ತಿದೆ.

ಗ್ಯಾಲಕ್ಸಿ ಎಸ್‌20 ಸರಣಿ 5ಜಿ ಫೋನ್‌ಗಳಲ್ಲಿ ಏನೆಲ್ಲ ಇರಲಿದೆ?

* ಎಸ್‌20, ಎಸ್‌20+ : 64ಎಂಪಿ ಕ್ಯಾಮೆರಾ(30x ಜೂಮ್‌), 10ಎಂಪಿ ಸೆಲ್ಫಿ ಕ್ಯಾಮೆರಾ

* ಎಸ್‌20 ಅಲ್ಟ್ರಾ : 108ಎಂಪಿ ಕ್ಯಾಮೆರಾ (100x ಜೂಮ್‌), 40ಎಂಪಿ ಸೆಲ್ಫಿ ಕ್ಯಾಮೆರಾ

* 8ಕೆ ವಿಡಿಯೊ (ವಿಡಿಯೊ ಜೊತೆಗೆ 33ಎಂಪಿ ರೆಸಲ್ಯೂಷನ್‌ ಸ್ಟಿಲ್‌ ಪಡೆಯುವ ಸೌಲಭ್ಯ)

* ಪ್ರತಿ ಸೆಕೆಂಡ್‌ಗೆ 2ಜಿಬಿ ಡೌನ್‌ಲೋಡ್‌ (ಸ್ಟ್ರೀಮಿಂಗ್‌, ಗೇಮಿಂಗ್‌ಗೆ ಅನುಕೂಲ)

* 4000 ಎಂಎಎಚ್‌/ 5000 ಎಂಎಎಚ್‌ ಬ್ಯಾಟರಿ, 45 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌

* 128 ಜಿಬಿ ಸಂಗ್ರಹ ಸಾಮರ್ಥ್ಯ (ಮೈಕ್ರೊಎಸ್‌ಡಿ ಕಾರ್ಡ್‌ ಮೂಲಕ 1 ಟಿಬಿ ವರೆಗೂ ವಿಸ್ತರಿಸುವ ಅವಕಾಶ)

* ರ್‍ಯಾಮ್‌: 8 ಜಿಬಿ/ 12 ಜಿಬಿ

* ಡಿಸ್‌ಪ್ಲೇ: 6.2 / 6.7/ 6.9 ಇಂಚು ಕ್ಯುಎಚ್‌ಡಿ ಡೈನಾಮಿಕ್‌ ಅಮೋಲೆಡ್‌ ಡಿಸ್‌ಪ್ಲೇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.