ADVERTISEMENT

ಸ್ಮಾರ್ಟ್ ಸಾಧನಗಳ ಸೋಂಕು ನಿವಾರಿಸುವ ಸ್ಟೆರಿಲೈಸರ್

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 10:11 IST
Last Updated 5 ಆಗಸ್ಟ್ 2020, 10:11 IST
ಗ್ಯಾಜೆಟ್‌ಗಳನ್ನು ಸೋಂಕು ಮುಕ್ತವಾಗಿಸುವ ಯುವಿ ಸ್ಟೆರಿಲೈಸರ್
ಗ್ಯಾಜೆಟ್‌ಗಳನ್ನು ಸೋಂಕು ಮುಕ್ತವಾಗಿಸುವ ಯುವಿ ಸ್ಟೆರಿಲೈಸರ್   

ಕೋವಿಡ್ ಕಾಲದಲ್ಲಿ ಎಲೆಕ್ಟ್ರಾನಿಕ್ ಸಾಧನಗಳಿಗೂ ಸೋಂಕು ತಗುಲದಂತೆ ನೋಡಿಕೊಂಡರೆ ಅವುಗಳನ್ನು ಬಳಸುವವರೂ ಸುರಕ್ಷಿತವಾಗಿರಬಹುದು ಎಂಬ ಕಾರಣಕ್ಕಾಗಿ, ಇದೀಗ ಸ್ಮಾರ್ಟ್‌ಫೋನ್, ಸ್ಮಾರ್ಟ್ ವಾಚ್ ಮುಂತಾದವುಗಳ ಸೋಂಕು ನಿವಾರಣೆಗೆ ಸ್ಯಾಮ್‌ಸಂಗ್ ಹೊಸ ಸಾಧನವೊಂದನ್ನು ಬಿಡುಗಡೆ ಮಾಡಿದೆ. ಯುವಿ ಸ್ಟೆರಿಲೈಸರ್ ಎಂಬ ಈ ಉಪಕರಣವು ಹತ್ತು ನಿಮಿಷಗಳಲ್ಲಿ ಫೋನ್, ವಾಚ್, ಇಯರ್ ಬಡ್ಸ್ ಮುಂತಾದವುಗಳ ಸೋಂಕು ನಿವಾರಣೆ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇಂಟರ್‌ಟೆಕ್ ಮತ್ತು ಎಸ್‌ಜಿಎಸ್ ಎಂಬ ಎರಡು ಸ್ವತಂತ್ರ ಪ್ರಮಾಣೀಕರಣ ಸಂಸ್ಥೆಗಳು ಮಾಡಿರುವ ಪರೀಕ್ಷೆಗಳ ಪ್ರಕಾರ, ಈ ನೇರಳಾತೀತ (ಯುವಿ) ಸ್ಟೆರಿಲೈಸರ್‌ಗಳು ಇ.ಕೋಲಿ, ಸ್ಟೇಫಿಲೋಕೋಕಸ್ ಆರಿಯಸ್ ಮತ್ತು ಕ್ಯಾಂಡಿಡಾ ಅಲ್ಬಿಕನ್ಸ್ ಸೇರಿದಂತೆ ಶೇ.99 ಬ್ಯಾಕ್ಟೀರಿಯಾ ಮತ್ತು ರೋಗಾಣುಗಳನ್ನು ನಿವಾರಿಸುತ್ತದೆ ಎಂದು ಸ್ಯಾಮ್‌ಸಂಗ್ ಹೇಳಿದೆ.

ಬ್ಯಾಕ್ಟೀರಿಯಾ ಮತ್ತು ರೋಗಾಣುಗಳು ಹರಡುವುದನ್ನು ತಡೆಗಟ್ಟುವುದರಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ಯುವಿ ಸ್ಟೆರಿಲೈಸರ್‌ಗೆ ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆಯಿದೆ. 369 ಗ್ರಾಂ ತೂಕವಿರುವ ಈ ಸಾಧನದ ಒಳಗೆ ಫೋನ್ ಇತ್ಯಾದಿ ಇರಿಸಿದರೆ ಚಾರ್ಜ್ ಮಾಡುತ್ತಲೇ ಮೇಲ್ಮೈ ಹಾಗೂ ಕೆಳಭಾಗಗಳನ್ನು ಏಕಕಾಲದಲ್ಲಿ ಬ್ಯಾಕ್ಟೀರಿಯಾ-ಮುಕ್ತವಾಗಿಸಬಹುದು. Qi ತಂತ್ರಜ್ಞಾನ ಬೆಂಬಲಿಸುವ ಯಾವುದೇ ಸಾಧನಗಳನ್ನೂ ಇದರಲ್ಲಿ ಚಾರ್ಜ್ ಮಾಡಬಹುದಾಗಿದ್ದು, ಬೆಲೆ ರೂ. 3,599 ಆಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.