ADVERTISEMENT

3 ಹೊಸ QLED ಟಿವಿಗಳನ್ನು ಬಿಡುಗಡೆ ಮಾಡಿದ ಥಾಮ್ಸನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಏಪ್ರಿಲ್ 2025, 14:07 IST
Last Updated 29 ಏಪ್ರಿಲ್ 2025, 14:07 IST
   

ನವದೆಹಲಿ: ಫ್ರಾನ್ಸ್‌ನ ಪ್ರಮುಖ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಥಾಮ್ಸನ್ ಕಂಪನಿಯು ಭಾರತದಲ್ಲಿ 50, 55 ಮತ್ತು 65 ಇಂಚುಗಳ ಹೊಸ QLED ಟಿವಿಗಳನ್ನು ಬಿಡುಗಡೆ ಮಾಡಿದೆ.

ಹೊಸ ಮಾದರಿಯ ಟಿವಿಗಳನ್ನು ಅಸ್ತಿತ್ವದಲ್ಲಿರುವ ಫಿನಿಕ್ಸ್ ಸರಣಿಯ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇವುಗಳನ್ನು ಉತ್ತಮ ವೀಕ್ಷಣೆಯ ಅನುಭವ, ಅದ್ಭುತ ಬಣ್ಣ ಮತ್ತು ಅತ್ಯುತ್ತಮ ಕಾರ್ಯಕ್ಷಮತೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಹೊಸ ಟಿವಿಗಳ ಬೆಲೆಗಳು ಇಂತಿವೆ:

ADVERTISEMENT

* 50QAI1015: ₹26999

* 55QAI1025: ₹30999

* 65QAI1035: ₹43999

ಮೇ 2 ರಿಂದ ಆರಂಭವಾಗುವ 'SASA LELE' ಮಾರಾಟದ ಸಮಯದಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಮಾರಾಟವಾಗಲಿವೆ.

ಈ ಹೊಸ ಟಿವಿಗಳು ತಮ್ಮ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉತ್ತಮ ಬೆಲೆಯೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ಟಿವಿಗಳಿಗೆ ಸ್ಪರ್ಧೆ ಒಡ್ಡಲಿವೆ ಎಂದು ಸಂಸ್ಥೆ ತಿಳಿಸಿದೆ.

ಫ್ಲಿಪ್‌ಕಾರ್ಟ್ SASALELE SALE ಮಾರಾಟದ ಸಮಯದಲ್ಲಿ ಥಾಮ್ಸನ್ ತನ್ನ ಟಿವಿ, ಏರ್ ಕೂಲರ್, ವಾಷಿಂಗ್ ಮೆಷಿನ್, ಏರ್ ಕೂಲರ್ ಮತ್ತು ಸೌಂಡ್‌ಬಾರ್‌ಗಳ ಮೇಲೆ ಅಸಾಮಾನ್ಯ ಕೊಡುಗೆಗಳನ್ನು ಪ್ರಕಟಿಸಿದೆ.

ಥಾಮ್ಸನ್ ಫಿನಿಕ್ಸ್ ಸರಣಿಯ ಪ್ರಮುಖ ವೈಶಿಷ್ಟ್ಯಗಳು

* 1 ಬಿಲಿಯನ್ ಕಲರ್ಸ್ ಜೊತೆಗೆ QLED 4K ಡಿಸ್‌ಪ್ಲೆ – ಅಲ್ಟ್ರಾ ಶಾರ್ಪ್ 4 ರೆಸಲ್ಯೂಶನ್‌ನೊಂದಿಗೆ ಬ್ರಿಲಿಯಂಟ್ ಕಲರ್ ರೀಪ್ರೊಡಕ್ಷನ್

* ಪ್ರೋಸೆಸರ್ - AI PQ ಚಿಪ್‌ಸೆಟ್, ARM ಕಾರ್ಟೆಕ್ಸ್ A55*4, Google ಪರಿಸರ ವ್ಯವಸ್ಥೆಯೊಂದಿಗೆ ವಿಶೇಷ AI-ಚಾಲಿತ ರಿಯಲ್‌ಟೆಕ್ ಚಿಪ್‌ಸೆಟ್

* HDR10 ಲೈಫ್‌ಲೈಕ್ ದೃಶ್ಯಗಳಿಗಾಗಿ ಕಾಂಟ್ರಾಸ್ಟ್ ಮತ್ತು ಡೈನಾಮಿಕ್ ಶ್ರೇಣಿಯನ್ನು ವರ್ಧಿಸುತ್ತದೆ

* ಡಾಲ್ಬಿ ಅಟ್ಮಾಸ್ + ಟ್ರೂಸರೌಂಡ್ - ಇಮ್ಮರ್ಸಿವ್ ಆಡಿಯೊಗಾಗಿ ಶಕ್ತಿಯುತ 50W (2 ಸ್ಪೀಕರ್‌ಗಳು) ಮತ್ತು 60W (4 ಸ್ಪೀಕರ್‌ಗಳು) ಸೆಟಪ್

* ಸ್ಲೀಕ್ ವಿನ್ಯಾಸ: ಬೆಜೆಲ್-ಲೆಸ್, ಪ್ರೀಮಿಯಂ ಮೆಟಾಲಿಕ್ ಫಿನಿಶ್

* Google TV OS - ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೊ, ಯೂಟ್ಯೂಬ್, ಆಪಲ್ ಟಿವಿ ಒಳಗೊಂಡಂತೆ 10,000+ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳಿಗೆ ಅವಕಾಶ

* ಸ್ಮಾರ್ಟ್ AI ವೈಶಿಷ್ಟ್ಯಗಳು – - AI PQ ಚಿಪ್‌ಸೆಟ್, AI ಸ್ಮೂತ್ ಮೋಷನ್ (60Hz), ಮತ್ತು ಕಸ್ಟಮೈಸ್ಡ್‌ ಕಾರ್ಯಕ್ಷಮತೆಗಾಗಿ ಬಹು ಚಿತ್ರ ಮತ್ತು ಸೌಂಡ್ ಮೋಡ್‌ಗಳು

* ಧ್ವನಿ ನಿಯಂತ್ರಣ - ಹ್ಯಾಂಡ್ಸ್-ಫ್ರೀ ನ್ಯಾವಿಗೇಷನ್‌ಗೆ Google ಅಸಿಸ್ಟೆಂಟ್ ಬೆಂಬಲ

( ಕನೆಕ್ಟಿವಿಟಿ - ಡ್ಯುಯಲ್-ಬ್ಯಾಂಡ್ ವೈ-ಫೈ (2.4GHz + 5GHz), ಬ್ಲೂಟೂತ್ 5.0, ಇನ್‌ಬಿಲ್ಟ್ Chromecast ಮತ್ತು ಏರ್‌ಪ್ಲೇ, ಗೇಮ್ಸ್ ಕಂಟ್ರೋಲರ್, ಹೆಡ್‌ಫೋನ್ಸ್, ಕೀಬೋರ್ಡ್ಸ್ ಸೇರಿದಂತೆ ಬಾಹ್ಯ ಸಾಧನಗಳಿಗೆ ಬೆಂಬಲ.

ಹಾರ್ಡ್‌ವೇರ್ ಹೈಲೈಟ್ಸ್

* 2GB RAM + 16GB ಸ್ಟೋರೇಜ್

* Mali-G312 GPU ಜೊತೆಗೆ ARM ಕಾರ್ಟೆಕ್ಸ್ A554 ಪ್ರೊಸೆಸರ್

* 3 HDMI ಪೋರ್ಟ್‌ಗಳು (ARC, CEC), 2 USB ಪೋರ್ಟ್‌ಗಳು

* ಆಪ್ಟಿಕಲ್ ಔಟ್‌ಪುಟ್ ಮತ್ತು ಬಹು ಧ್ವನಿ ಮೋಡ್‌ಗಳು

* 6 ಪಿಕ್ಟರ್‌ ಮೋಡ್‌ಗಳು: ಸ್ಟ್ಯಾಂಡರ್ಡ್, ವಿವಿಡ್, ಸ್ಪೋರ್ಟ್, ಮೂವಿ, ಗೇಮ್, ಯೂಸರ್

* DVB-C, DVB-T/T2 ಬ್ರಾಡ್‌ಕಾಸ್ಟ್ ಮಾನದಂಡಕ್ಕೆ ಪೂರಕ

* 55 ಮತ್ತು 65 ಇಂಚಿನ ಟಿವಿಗಳಲ್ಲಿ 60W ಸ್ಪೀಕರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.