
THOMSON QLED MEMC ಟಿವಿ
ಥಾಮ್ಸನ್ ಸಂಸ್ಥೆಯು ತನ್ನ ಪ್ರಮುಖ ಕ್ಯೂಎಲ್‌ಇಡಿ ಎಂಇಎಂಸಿ ಶ್ರೇಣಿಯ ಟಿವಿಯನ್ನು ಅಧಿಕೃತವಾಗಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇಂದಿನಿಂದ (ನವೆಂಬರ್ 24) ಗ್ರಾಹಕರು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು ಎಂದು ತಿಳಿಸಿದೆ.
ಥಾಮ್ಸನ್ ಕ್ಯೂಎಲ್‌ಇಡಿ ಎಂಇಎಂಸಿ ಸರಣಿಯ ಟಿವಿಯು ಕ್ರಮವಾಗಿ 55, 65 ಮತ್ತು 75 ಇಂಚುಗಳಲ್ಲಿ ಖರೀದಿಗೆ ಲಭ್ಯವಿದೆ. ಇದು ₹31,999, ₹43,999 ಮತ್ತು ₹64,999 ಬೆಲೆ ಹೊಂದಿದೆ.
ಈ ಟಿವಿಯು ಗ್ರಾಹಕರ ಅನುಭವ ಹೆಚ್ಚಿಸಲು ವಿಶೇಷ ಆಡಿಯೋ ಸಿಸ್ಟಂ ವ್ಯವಸ್ಥೆ ಹೊಂದಿದೆ. ಥಾಮ್ಸನ್ ಡಾಲ್ಬಿ ಆಟ್ಮೋಸ್, ಡಾಲ್ಬಿ ಡಿಜಿಟಲ್ ಪ್ಲಸ್ ಮತ್ತು 4 ಪ್ರಬಲ ಅಂತರ್‌ನಿರ್ಮಿತ ಸ್ಪೀಕರ್‌ಗಳನ್ನು ಹೊಂದಿರುವ 70W ಡಾಲ್ಬಿ ಆಡಿಯೊ ಸ್ಟೀರಿಯೊ ಬಾಕ್ಸ್ ಸ್ಪೀಕರ್ ಸಿಸ್ಟಮ್ ಹೊಂದಿದೆ. ಟಿವಿಯಲ್ಲಿ ಅಳವಡಿಸಿರುವ ಈ ಆಡಿಯೊ ತಂತ್ರಜ್ಞಾನ ಮನೆಯಲ್ಲಿಯೇ ಉತ್ತಮ ಧ್ವನಿ ನೀಡುತ್ತದೆ.
ಪ್ರಮುಖ ವೈಶಿಷ್ಟ್ಯಗಳು
QLED 4K ಡಿಸ್‌ಪ್ಲೇ (1.1 Billion) ಮತ್ತು ವಿಭಿನ್ನವಾದ ವಿಡಿಯೊಗಾಗಿ HDR10+ ವ್ಯವಸ್ಥೆ ಹೊಂದಿದೆ.
ಡಾಲ್ಬಿ ವಿಷನ್, ಡಾಲ್ಬಿ ಆಟ್ಮೋಸ್ ಹಾಗೂ ಡಾಲ್ಬಿ ಡಿಜಿಟಲ್ ಪ್ಲಸ್ ತಂತ್ರಜ್ಞಾನವು ಚಿತ್ರಮಂದಿರದಂತಹ ಅನುಭವ ನೀಡುತ್ತದೆ.
70W ಡಾಲ್ಬಿ ಆಡಿಯೋ ಸ್ಟೀರಿಯೊ ಬಾಕ್ಸ್ ಸ್ಪೀಕರ್ ಜೊತೆಗೆ 4 ಅಂತರ್ಗತ ಸ್ಪೀಕರ್‌ಗಳನ್ನು ಹೊಂದಿದೆ.
ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಯೂಟ್ಯೂಬ್ ಮತ್ತು ಇತರೆ ಅಪ್ಲಿಕೇಶನ್‌ಗಳಿಗಾಗಿ ಆಡಿಯೋ ಸಕ್ರಿಯಗೊಳಿಸಲು ರಿಮೋಟ್ ವ್ಯವಸ್ಥೆ ನೀಡಲಾಗಿದೆ.
ಗೂಗಲ್ ಟಿವಿ 5.0 ಮೂಲಕ 10,000ಕ್ಕೂ ಅಧಿಕ ಅಪ್ಲಿಕೇಶನ್‌ಗಳು ಮತ್ತು 500,000 ಅಧಿಕ ಶೋಗಳು ಹಾಗೂ ಚಲನಚಿತ್ರಗಳ ವೀಕ್ಷಣೆ ಮಾಡಬಹುದು.
ಬೆಜೆಲ್ ಲೆಸ್ ಏರ್‌ಸ್ಲಿಮ್‌ನೊಂದಿಗೆ ಟಿವಿಯ ವಿನ್ಯಾಸಗೊಳಿಸಲಾಗಿದೆ.
ಸುಗಮ ಗೇಮಿಂಗ್‌ಗಾಗಿ VRR ಮತ್ತು ALLM ಜೊತೆಗೆ 120Hz MEMC ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.