ADVERTISEMENT

ವ್ಯಾಟ್ಸ್‌ಆ್ಯಪ್‌ನಲ್ಲಿ ಡಿಕ್ಟೇಷನ್ ಬಳಸಿ ಸಂದೇಶ ಕಳಿಸಿ

ರಶ್ಮಿ ಕಾಸರಗೋಡು
Published 23 ಜನವರಿ 2019, 19:30 IST
Last Updated 23 ಜನವರಿ 2019, 19:30 IST

ವಾಟ್ಸ್ಆ್ಯಪ್‍ನಲ್ಲಿ ಸಂದೇಶವನ್ನು ಟೈಪಿಸುವುದು ಅಥವಾ ವಾಯ್ಸ್ ಮೆಸೇಜ್ ಕಳುಹಿಸುವುದು ಮಾಮೂಲಿ. ಅದೇ ರೀತಿ ನಾವು ಟೈಪ್ ಮಾಡಲಿರುವ ಸಂದೇಶವನ್ನು ಕೀ ಬೋರ್ಡ್ ಆಲಿಸಿಕೊಂಡು ಟೆಕ್ಸ್ಟ್ ಮೆಸೇಜ್ ಆಗಿ ಮಾರ್ಪಾಡು ಮಾಡಲು ಡಿಕ್ಟೇಷನ್ ಫೀಚರ್ ಬಳಸಬಹುದು.

ಸಂದೇಶ ಕಳುಹಿಸುವುದು ಹೇಗೆ?

ಗೂಗಲ್ ಕೀಬೋರ್ಡ್ ಅಥವಾ iOS ಕೀಬೋರ್ಡ್ ಬಳಕೆದಾರರಾಗಿದ್ದರೆ ಇದರಲ್ಲಿ ಡಿಕ್ಟೇಷನ್ ಫೀಚರ್ ಲಭ್ಯವಿರುತ್ತದೆ. ಬೇರೆ ಕೀಬೋರ್ಡ್ ಬಳಸುವವರಾಗಿದ್ದರೆ ಗೂಗಲ್ ಪ್ಲೇ ಸ್ಟೋರ್‍‍ನಿಂದ Gboard ಡೌನ್‍ಲೋಡ್ ಮಾಡಿಕೊಳ್ಳಬಹುದು. ಮೊಬೈ‍ಲ್‍ನಲ್ಲಿ Gboard ಎನೇಬಲ್ ಮಾಡಿಕೊಂಡ ನಂತರ ವಾಟ್ಸ್ಆ್ಯಪ್ ಚಾಟ್ ಬಾಕ್ಸ್ ತೆರೆಯಿರಿ.

ADVERTISEMENT

ವಾಟ್ಸ್ಆ್ಯಪ್ ಚಾಟ್ ಬಾಕ್ಸ್ ತೆರೆದ ಕೂಡಲೇ ಚಾಟ್ ಬಾಕ್ಸ್‌ನ ಮೈಕ್ ಕೆಳಗೆ ಕೀಬೋರ್ಡ್ ಮೈಕ್ ಕಾಣಿಸುತ್ತದೆ. ಆ ಮೈಕ್‌ ಅನ್ನು ಸ್ವಲ್ಪ ಹೊತ್ತು ಪ್ರೆಸ್ ಮಾಡಿದ ಕೂಡಲೇ Speak Now ಎಂದು ಕಾಣಿಸುತ್ತದೆ. ನೀವು ಮಾತನಾಡುತ್ತಿದ್ದಂತೆ ಕೀ ಬೋರ್ಡ್ ನಿಮ್ಮ ದನಿಯನ್ನು ಆಲಿಸುತ್ತದೆ. ನೀವು ಟೈಪ್ ಮಾಡಬೇಕೆಂದಿರುವ ವಿಷಯವನ್ನು ಸ್ಪಷ್ಟವಾಗಿ ಹೇಳಿದರೆ ಅದನ್ನು ಕೇಳಿಸಿಕೊಂಡು ನಿಮ್ಮ ಸಂದೇಶ ಚಾಟ್ ಬಾಕ್ಸ್‌ನಲ್ಲಿ ಮೂಡಿ ಬರುತ್ತದೆ. ಹೀಗೆ ವಿಷಯಗಳನ್ನು ಹೇಳಿ ಟೈಪಿಸುವಾಗ ಅಕ್ಷರ ತಪ್ಪುಗಳಾಗುವುದು ಸಹಜ. ಅದನ್ನು ಎಡಿಟ್ ಮಾಡಿ ಕಳುಹಿಸಬಹುದು.

ತುಂಬಾ ಗದ್ದಲವಿರುವ ಜಾಗದಲ್ಲಿ ಈ ರೀತಿ ಡಿಕ್ಟೇಟ್ ಮಾಡುವುದಾದರೆ ಕೀಬೋರ್ಡ್ ನಿಮ್ಮ ದನಿಯನ್ನು ಸರಿಯಾಗಿ ಗ್ರಹಿಸಲಾರದು. ವಾಟ್ಸ್ಆ್ಯಪ್‍ನಲ್ಲಿ ಮಾತ್ರವಲ್ಲ ಯಾವುದೇ ಮೆಸೇಜಿಂಗ್ ಆ್ಯಪ್‍ಗಳಲ್ಲಿಯೂ ಈ ಡಿಕ್ಟೇಷನ್ ಫೀಚರ್ ಬಳಸಿ ಸಂದೇಶ ಕಳುಹಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.