ಪ್ರೀಮಿಯಂ ಮತ್ತು ಅಧಿಕ ಸಾಮರ್ಥ್ಯದ ಫೋನ್ಗಳ ಜೊತೆಗೆ ಬಜೆಟ್ ಫೋನ್ಗಳ ಕಡೆಗೂ ಗಮನ ಮುಂದುವರಿಸಿರುವ ಚೀನಾದ ಸ್ಮಾರ್ಟ್ಫೋನ್ ತಯಾರಿಕಾ ಸಂಸ್ಥೆ ಶಿಯೋಮಿ, ಮಂಗಳವಾರ 'ರೆಡ್ಮಿ 8ಎ ಡ್ಯೂಯಲ್' ಹೊಸ ಫೋನ್ ಬಿಡುಗಡೆ ಮಾಡಿದೆ.
ಡ್ಯೂಯಲ್ ಸಿಮ್ ಮತ್ತು ಡ್ಯೂಯಲ್ ಕ್ಯಾಮೆರಾ ಒಳಗೊಂಡಿರುವ ರೆಡ್ಮಿ 8ಎ ಡ್ಯೂಯಲ್; 2 ಜಿಬಿ ರ್ಯಾಮ್ ಮತ್ತು 3 ಜಿಬಿ ರ್ಯಾಮ್ ಎರಡು ಮಾದರಿಗಳಲ್ಲಿ ಲಭ್ಯವಿರಲಿದೆ. 32 ಜಿಬಿ ಸಂಗ್ರಹ ಸಾಮರ್ಥ್ಯವಿರುವ ಫೋನ್ನ ಆರಂಭಿಕ ಬೆಲೆ ₹ 6,499 ನಿಗದಿಯಾಗಿದೆ.
ಸ್ಕೈ ವೈಟ್, ಸೀ ಬ್ಲೂ ಹಾಗೂ ಮಿಡ್ನೈಟ್ ಗ್ರೇ ಬಣ್ಣಗಳಲ್ಲಿ ಲಭ್ಯವಿರುವ ರೆಡ್ಮಿ 8ಎ ಡ್ಯೂಯಲ್, ಫೆಬ್ರುವರಿ 18ರಿಂದ ಎಂಐ ಸ್ಟೋರ್, ಅಧಿಕೃತ ವೆಬ್ಸೈಟ್ ಹಾಗೂ ಅಮೆಜಾನ್ನಲ್ಲಿ ಖರೀದಿಗೆ ಸಿಗಲಿದೆ.
6.2 ಇಂಚು ಎಚ್ಡಿ ಎಲ್ಸಿಡಿ ಡಿಸ್ಪ್ಲೇ, ಗೊರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಹಾಗೂ ಪಿ2ಐ ನ್ಯಾನೊ ಕೋಟಿಂಗ್ ಇರುವುದರಿಂದ ಸ್ಪ್ಲ್ಯಾಷ್ ಪ್ರೂಫ್ ಸಹ ಆಗಿದೆ. ಇನ್ನು ಹಿಂಬದಿಯಲ್ಲಿ 13 ಎಂಪಿ ಮತ್ತು 2 ಎಂಪಿ ಎರಡು ಕ್ಯಾಮೆರಾಗಳು, ಇಂಟಿಗ್ರೇಟೆಡ್ ಗೂಗಲ್ ಲೆನ್ಸ್ ಒಳಗೊಂಡಿದೆ. ಸೆಲ್ಫಿಗಾಗಿ 8 ಎಂಪಿ ಕ್ಯಾಮೆರಾ ನೀಡಲಾಗಿದೆ.
ಕ್ವಾಲ್ಕಾಂ ಸ್ನ್ಯಾಪ್ಡ್ರ್ಯಾಗನ್ 439 ಪ್ರೊಸೆಸರ್, ಮೈಕ್ರೊಎಸ್ಡಿ ಕಾರ್ಡ್ ಮೂಲಕ 512 ಜಿಬಿ ವರೆಗೂ ಸಂಗ್ರಹ ಸಾಮರ್ಥ್ಯ ವಿಸ್ತರಿಸುವ ಅವಕಾಶ, 5000 ಎಂಎಎಚ್ ಬ್ಯಾಟರಿ ಮತ್ತು 18ವ್ಯಾಟ್ ಫಾಸ್ಟ್ ಚಾರ್ಜಿಂಗ್ ಹಾಗೂ ಯುಎಸ್ಬಿ ಟೈಪ್–ಸಿ ಪೋರ್ಟ್ ನೀಡಲಾಗಿದೆ.
ರೆಡ್ಮಿ 8ಎ ಮತ್ತು 8ಎ ಡ್ಯೂಯಲ್ ವ್ಯತ್ಯಾಸ
2019ರ ಸೆಪ್ಟೆಂಬರ್ನಲ್ಲಿ ಶಿಯೋಮಿ ರೆಡ್ಮಿ 8ಎ ಬಿಡುಗಡೆಯಾಗಿದೆ. 2 ಜಿಬಿ ಮತ್ತು 3 ಜಿಬಿ ರ್ಯಾಮ್ ಎರಡೂ ಮಾದರಿಗಳಲ್ಲಿ ಲಭ್ಯವಿದ್ದು, 32 ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಬ್ಯಾಟರಿ ಸಾಮರ್ಥ್ಯದಲ್ಲೂ ಸಹ 8ಎ ಮತ್ತು 8ಎ ಡ್ಯೂಯಲ್ನಲ್ಲಿ ವ್ಯತ್ಯಾಸವಿಲ್ಲ. ಆದರೆ, ಹಿಂಬದಿಯಲ್ಲಿ 12 ಎಂಪಿ ಸೋನಿಐಎಂಎಕ್ಸ್363 ಒಂದೇ ಕ್ಯಾಮೆರಾ ನೀಡಲಾಗಿತ್ತು. ಸೆಲ್ಫಿ ಕ್ಯಾಮೆರಾದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರೊಸೆಸರ್ ಸ್ನ್ಯಾಪ್ಡ್ರ್ಯಾಗನ್430 ಆಕ್ಟಾ–ಕೋರ್ ಬಳಸಲಾಗಿತ್ತು; ಹೊಸ ಫೋನ್ನಲ್ಲಿ '439' ನೀಡಲಾಗಿದೆ.
'ರೆಡ್ಮಿ 8ಎ' ಏನೆಲ್ಲ ಇದೆ?
* 13 ಎಂಪಿ + 2 ಎಂಪಿ ಕ್ಯಾಮೆರಾ, 8 ಎಂಪಿ ಸೆಲ್ಫಿ ಕ್ಯಾಮೆರಾ
* 5000 ಎಂಎಎಚ್ ಬ್ಯಾಟರಿ
* 6.22 ಇಂಚು ಎಚ್ಡಿ+ ಡಿಸ್ಪ್ಲೇ
* ಆಕ್ಟಾ–ಕೋರ್ ಕ್ವಾಲ್ಕಾಂ ಸ್ನ್ಯಾಪ್ಡ್ರ್ಯಾಗನ್ 439 ಪ್ರೊಸೆಸರ್
ಬೆಲೆ
* 2 ಜಿಬಿ ರ್ಯಾಮ್/ 32 ಜಿಬಿ ಸಂಗ್ರಹ ಸಾಮರ್ಥ್ಯ – ₹6,499
* 3 ಜಿಬಿ ರ್ಯಾಮ್/ 32 ಜಿಬಿ ಸಂಗ್ರಹ ಸಾಮರ್ಥ್ಯ – ₹6,999
20000 ಎಂಎಎಚ್ ಪವರ್ ಬ್ಯಾಂಕ್
ರೆಡ್ಮಿ 8ಎ ಡ್ಯೂಯಲ್ ಜೊತೆಗೆ ಎರಡು ಹೊಸ ಪವರ್ ಬ್ಯಾಂಕ್ಗಳನ್ನು ಬಿಡುಗಡೆ ಮಾಡಲಾಗಿದೆ. 10,000 ಎಂಎಎಚ್ ಮತ್ತು20,000 ಎಂಎಎಚ್ ಪವರ್ಬ್ಯಾಂಕ್ ಬಿಡುಗಡೆಯಾಗಿದ್ದು, ಅತ್ಯಾಧುನಿಕ 9 ಲೇಯರ್ ಸರ್ಕ್ಯೂಟ್ ಚಿಪ್ ಪ್ರೊಟೆಕ್ಷನ್, ಲಿಥಿಯಮ್ ಪಾಲಿಮರ್ ಬ್ಯಾಟರಿ, ಡ್ಯೂಯಲ್ ಯುಎಸ್ಬಿ ಔಟ್ಪುಟ್ (ಮೈಕ್ರೊ ಯುಎಸ್ಬಿ ಮತ್ತು ಟೈಪ್ ಸಿ) , ಜಾರಿ ಬೀಳದಂತೆ ತಡೆಯುವ ವಿನ್ಯಾಸ ಹೊಂದಿದೆ.
10,000 ಎಂಎಎಚ್– 10 ವ್ಯಾಟ್ ಫಾಸ್ಟ್ ಚಾರ್ಜಿಂಗ್: ಬೆಲೆ ₹ 799
20,000 ಎಂಎಎಚ್– 20ವ್ಯಾಟ್ ಫಾಸ್ಟ್ ಚಾರ್ಜಿಂಗ್: ಬೆಲೆ ₹ 1,499
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.