ADVERTISEMENT

ಸ್ಮಾರ್ಟ್‌ ಸಾಧನ: ಗುಣಮಟ್ಟದ ಪಿಟ್ರಾನ್‌ ಬಾಸ್‌ಬಡ್ಸ್ ಟ್ಯಾಂಗೊ ಬಿಡುಗಡೆ

ವಿಶ್ವನಾಥ ಎಸ್.
Published 3 ಫೆಬ್ರುವರಿ 2022, 12:03 IST
Last Updated 3 ಫೆಬ್ರುವರಿ 2022, 12:03 IST
ಪಿಟ್ರಾನ್‌ ಬಾಸ್‌ಬಡ್ಸ್‌ ಟ್ಯಾಂಗೊ
ಪಿಟ್ರಾನ್‌ ಬಾಸ್‌ಬಡ್ಸ್‌ ಟ್ಯಾಂಗೊ   

ಕೈಗೆಟಕುವ ಬೆಲೆಗೆ ಸ್ಮಾರ್ಟ್‌ ಸಾಧನಗಳನ್ನು ನೀಡುವಲ್ಲಿ ದೇಶಿ ಕಂಪನಿಗಳು ಹಲವು ಪ್ರಯೋಗಗಳನ್ನು ಮಾಡುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತಯಾರಿಸುವ ದೇಶಿ ಕಂಪನಿ ‘ಪಿಟ್ರಾನ್‌’ ಟ್ರೂ ವಯರ್‌ಲೆಸ್ ಸ್ಟೀರಿಯೊ (ಟಿಡಬ್ಲ್ಯುಎಸ್‌) ಪಿಟ್ರಾನ್‌ ಬಾಸ್‌ಬಡ್ಸ್ ಟ್ಯಾಂಗೊ ಬಿಡುಗಡೆ ಮಾಡಿದೆ. ಇದರ ಬೆಲೆ ₹ 1,299.

ಗಾತ್ರದಲ್ಲಿ ಇದು ಬೆಂಕಿಪೊಟ್ಟಣದಷ್ಟಿದೆ. ಸುಲಭವಾಗಿ ಕೈಯಲ್ಲಿ ಹಿಡಿದುಕೊಳ್ಳಬಹುದು.ಚಾರ್ಜಿಂಗ್‌ ಕೇಸ್‌ ಉತ್ತಮ ಗುಣಮಟ್ಟದ್ದಾಗಿದೆ. ಇಯರ್‌ ಬಡ್ಸ್‌ ಅನ್ನು ಚಾರ್ಜಿಂಗ್‌ ಕೇಸ್‌ನಿಂದ ಹೊರತೆಗೆಯುತ್ತಿದ್ದಂತೆಯೇ ‘ಪವರ್‌ ಆನ್‌, ಪೇರಿಂಗ್’ ಎನ್ನುವ ಧ್ವನಿ ಕೇಳಿಸುತ್ತದೆ. ಅದೇ ರೀತಿ ಬಡ್ಸ್‌ ಅನ್ನು ಕಿವಿಗೆ ಇಟ್ಟುಕೊಂಡು ಮೊಬೈಲ್‌ಗೆ ಸಂಪರ್ಕಿಸುವಾಗಲೂ ‘ಪಿಟ್ರಾನ್‌ ಟಿಡಬ್ಲ್ಯುಎಸ್‌ ಕನೆಕ್ಟೆಡ್‌’ ಎನ್ನುವುದು ಸಹ ದೊಡ್ಡ ಧ್ವನಿಯಲ್ಲಿ ಕೇಳಿಸುತ್ತದೆ. ಬಡ್ಸ್‌ನಲ್ಲಿ ಎಲ್‌ಇಡಿ ಇಂಡಿಕೇಟರ್‌ ಇರುವುದರಿಂದ ಕನೆಕ್ಟ್‌ ಮತ್ತು ಡಿಸ್ಕನೆಕ್ಟ್‌, ಚಾರ್ಜಿಂಗ್‌ ಮಾಹಿತಿ ತಿಳಿಯುತ್ತದೆ. ಹೀಗಿರುವಾಗ ಧ್ವನಿಯ ಮೂಲಕ ಮಾಹಿತಿ ನೀಡುವ ಅಗತ್ಯ ಇರಲಿಲ್ಲ.

ಸಂಗೀತ ಆಲಿಸಲು ಇದರ ಆಡಿಯೊ ಗುಣಮಟ್ಟ ಉತ್ತಮವಾಗಿದೆ. ಇಯರ್‌ ಟಿಪ್‌ ಇರುವುದರಿಂದ ಹೊರಗಿನ ಶಬ್ಧ ಕೇಳಿಸುವುದಿಲ್ಲ. ಇದರಿಂದಾಗಿ ಸಂಗೀತವನ್ನು ಆನಂದವಾಗಿ ಆಲಿಸಬಹುದು. ಸಂಗೀತ ಆಲಿಸುವಾಗ ಮತ್ತು ವಿಡಿಯೊ ಪ್ಲೇ ಮಾಡುವಾಗ ಹೊರಗಿನ ಶಬ್ಧ ಕೇಳಿಸದಂತೆ ತಡೆಯುವ ಇಎನ್‌ಸಿ (ಎನ್ವಿರಾನ್ಮೆಂಟಲ್‌ ನಾಯ್ಸ್‌ ಕ್ಯಾನ್ಸಲೇಷನ್) ವ್ಯವಸ್ಥೆಯು ಚೆನ್ನಾಗಿ ಕೆಲಸ ಮಾಡುತ್ತದೆ.

ADVERTISEMENT

ಚಾರ್ಜಿಂಗ್‌ ಕೇಸ್‌ ಟೈಪ್‌–ಸಿ ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆ ಹೊಂದಿದೆ. ಚಾರ್ಜಿಂಗ್‌ ಕೇಸ್‌ ಮತ್ತು ಬಡ್ಸ್‌ ಪೂರ್ತಿ ಚಾರ್ಜ್ ಆಗಲು ಒಂದೂವರೆ ಗಂಟೆ ಬೇಕು. ಚಾರ್ಜಿಂಗ್‌ ಕೇಸ್‌ 400 ಎಂಎಎಚ್‌ ಬ್ಯಾಟರಿ ಹೊಂದಿದೆ. ಚಾರ್ಜಿಂಗ್ ಕೇಸ್‌ ಪೂರ್ತಿ ಚಾರ್ಜ್ ಆದರೆ 40 ಗಂಟೆಯವರೆಗೆ ಬಳಸಬಹುದು. ಇಯರ್‌ಬಡ್ಸ್‌ ಒಮ್ಮೆ ಪೂರ್ತಿ ಚಾರ್ಜ್‌ ಆದರೆ ಆರು ಗಂಟೆಗಳವರೆಗೆ ಬಳಸಬಹುದು.

ಟಚ್ ಕಂಟ್ರೋಲ್‌ ಮೂಲಕಕಾಲ್‌ ಸ್ವೀಕರಿಸಬಹುದು, ಪ್ಲೇಲಿಸ್ಟ್‌ ಕೂಡ ನಿಯಂತ್ರಿಸಬಹುದು. ಸಿರಿ ಮತ್ತು ಗೂಗಲ್‌ ಅಸಿಸ್ಟಂಟ್‌ ಅನ್ನೂ ಸಕ್ರಿಯಗೊಳಿಸಬಹುದು. ನೀರಿನಿಂದ ರಕ್ಷಣೆ ನೀಡಲು ಐಪಿಎಕ್ಸ್‌ 4 ರೇಟಿಂಗ್ಸ್‌ ಇದೆ.

ಚಾರ್ಜಿಂಗ್‌ ಕೇಸ್‌ ಚಿಕ್ಕದಾಗಿದ್ದು, ಜೇಬಿನಲ್ಲಿ ಸುಲಭವಾಗಿ ಇಟ್ಟುಕೊಳ್ಳಬಹುದು. ಚಾರ್ಜಿಂಗ್‌ ಕೇಸ್‌ನಲ್ಲಿ ಇರುವ ಆಯಸ್ಕಾಂತವು ಇಯರ್‌ಬಡ್ಸ್‌ ಹಿಡಿದಿಟ್ಟುಕೊಳ್ಳಲು ನೆರವಾಗುತ್ತದೆ. ಆದರೆ, ಚಾರ್ಜಿಂಗ್‌ ಕೇಸ್‌ ಒಳಗಡೆ ಬಡ್ಸ್‌ ಅಲುಗಾಡದಂತೆ ವಿನ್ಯಾಸ ಮಾಡಿಲ್ಲ; ಅಂದರೆ, ಬಡ್ಸ್‌ ಇರುವ ಚಾರ್ಜಿಂಗ್‌ ಕೇಸ್‌ ಅನ್ನು ಜೇಬಿನಲ್ಲಿ ಇಟ್ಟುಕೊಂಡು ನಡೆಯುವಾಗ ಕೇಸ್‌ ಒಳಗೆ ಬಡ್ಸ್‌ ಅಲುಗಾಡುವ ಶಬ್ಧ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.