ADVERTISEMENT

ನವೆಂಬರ್‌ 23: ಭಾರತದ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಪುಣ್ಯಸ್ಮರಣೆ 

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 6:22 IST
Last Updated 23 ನವೆಂಬರ್ 2021, 6:22 IST
ಜಗದೀಶ್ ಚಂದ್ರ ಬೋಸ್
ಜಗದೀಶ್ ಚಂದ್ರ ಬೋಸ್    

ನವದೆಹಲಿ: ಭಾರತದ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರ ಪುಣ್ಯಸ್ಮರಣೆ ದಿನವಾದ ಇಂದು( ನ.23) ದೇಶದ ವಿವಿಧ ರಂಗಗಳ ಗಣ್ಯರು ಅನಂತ ನಮನಗಳನ್ನು ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಕೂ ಆ್ಯಪ್‌, ಟ್ವಿಟರ್‌, ಫೇಸ್‌ಬುಕ್‌. ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ನಮನಗಳನ್ನು ಸಲ್ಲಿಸಿದ್ದಾರೆ.

ಭೌತಶಾಸ್ತ್ರ, ಜೀವವಿಜ್ಞಾನಕ್ಕೆ ಅಪೂರ್ವ ಕೊಡುಗೆ ನೀಡಿದ ಖ್ಯಾತ ವಿಜ್ಞಾನಿ ಶ್ರೀ ಜಗದೀಶ್ ಚಂದ್ರ ಬೋಸ್ ಅವರ ಪುಣ್ಯಸ್ಮರಣೆಯಂದು ಅನಂತ ನಮನಗಳು‌. ಸಸ್ಯಸಂಕುಲಕ್ಕೂ ಭಾವನೆಗಳಿವೆ ಎಂಬ ಅವರ ವೈಜ್ಞಾನಿಕ ಪ್ರತಿಪಾದನೆ ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಹಿರಿಮೆ ತಂದುಕೊಟ್ಟಿತ್ತು.‌ ಅವರ ಸಾಧನೆ, ಕೊಡುಗೆಗಳು ಸ್ಮರಣೀಯ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕೂ ಮಾಡಿದ್ದಾರೆ.

ADVERTISEMENT

https://www.kooapp.com/koo/aragajnanendra/63eaf95b-2104-4dbe-9b7d-7dd1fa87a1cd

ಖ್ಯಾತ ಭೌತಶಾಸ್ತ್ರಜ್ಞ, ಸಸ್ಯಶಾಸ್ತ್ರಜ್ಞ ಹಾಗೂ ಜೀವ ಶಾಸ್ತ್ರಜ್ಞರಾಗಿದ್ದ ಶ್ರೀ ಜಗದೀಶ್ ಚಂದ್ರ ಬೋಸ್ ಅವರ ಪುಣ್ಯ ಸ್ಮರಣೆಯ ನಮನಗಳು. ವಿಜ್ಞಾನ ಲೋಕಕ್ಕೆ ಅವರ ಕೊಡುಗೆಗಳು ಅವಿಸ್ಮರಣೀಯ ಎಂದು ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಕೂ ಮಾಡಿದ್ದಾರೆ.

https://www.kooapp.com/koo/Akhandasrinivasmurthy/8897210c-f095-4a0a-aa1f-3a5101dcdad5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.