ADVERTISEMENT

ಸ್ಪೇಡೆಕ್ಸ್‌ ಡಾಕಿಂಗ್ ಪ್ರಯೋಗ ಮುಂದಕ್ಕೆ: ಇಸ್ರೊ

​ಪ್ರಜಾವಾಣಿ ವಾರ್ತೆ
Published 6 ಜನವರಿ 2025, 21:07 IST
Last Updated 6 ಜನವರಿ 2025, 21:07 IST
ಇಸ್ರೊ
ಇಸ್ರೊ   

ಬೆಂಗಳೂರು: ಇಸ್ರೊ ಉಡಾವಣೆ ಮಾಡಿದ್ದ ಸ್ಪೇಡೆಕ್ಸ್‌ ಉಪಗ್ರಹಗಳ ಜೋಡಣೆಯ (ಡಾಕಿಂಗ್‌) ಪ್ರಯೋಗ ಜ. 7 ಕ್ಕೆ ಮುಂದೂಡಲಾಗಿದೆ. ಈ ಹಿಂದೆ ನಿಗದಿ ಮಾಡಿದಂತೆ ಮಂಗಳವಾರ ಈ ಪ್ರಯೋಗ ನಡೆಯಬೇಕಿತ್ತು ಎಂದು ಇಸ್ರೊ ‘ಎಕ್ಸ್‌’ನಲ್ಲಿ ತಿಳಿಸಿದೆ.

ಉಪಗ್ರಹಗಳನ್ನು ಜೋಡಿಸುವ ಪ್ರಕ್ರಿಯೆಗೆ ಭೂಮಿಯ ಸಿಮ್ಯುಲೇಷನ್‌ನಿಂದ ಇನ್ನಷ್ಟು ದೃಢೀಕರಣದ ಅಗತ್ಯವಿತ್ತು. ಆದರೆ, ಈ ಪ್ರಯೋಗವನ್ನು ಸ್ಥಗಿತಗೊಳಿಸುವ ಸನ್ನಿವೇಶವನ್ನು ಸೋಮವಾರ ಗುರುತಿಸಲಾಯಿತು ಎಂದು ಇಸ್ರೊ ಹೇಳಿದೆ. ಒಂದು ವಾರದ ಹಿಂದೆ ಈ ಉಪಗ್ರಹಗಳನ್ನು ಉಡಾವಣೆ ಮಾಡಿ ಕಕ್ಷೆಗೆ ಸೇರಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT