ADVERTISEMENT

ಇಸ್ರೊ: ನ್ಯಾವಿಗೇಷನ್‌ ಉಪಗ್ರಹದಲ್ಲಿ ತಾಂತ್ರಿಕ ಲೋಪ

ಪಿಟಿಐ
Published 2 ಫೆಬ್ರುವರಿ 2025, 20:23 IST
Last Updated 2 ಫೆಬ್ರುವರಿ 2025, 20:23 IST
.
.   

ನವದೆಹಲಿ: ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ)ಉಡಾಯಿಸಿದ್ದ ‘ನ್ಯಾವಿಗೇಷನ್‌ ಉಪಗ್ರಹ’ದಲ್ಲಿ (ಎನ್‌ವಿಎಸ್‌–02) ಭಾನುವಾರ ತಾಂತ್ರಿಕ ಲೋಪ ಎದುರಾಗಿದೆ.

ಜನವರಿ 29ರಂದು ಇಸ್ರೊ, ಈ ಉಪಗ್ರಹವನ್ನು ಜಿಎಸ್‌ಎಲ್‌ವಿ–ಎಫ್‌15 ರಾಕೆಟ್ ಮೂಲಕ ಯಶಸ್ವಿಯಾಗಿ ಉಡ್ಡಯನ ಮಾಡಿತ್ತು.

‘ಉಪಗ್ರಹವನ್ನು ನಿಗದಿತ ಕಕ್ಷೆಯ ಸ್ಲಾಟ್‌ನಲ್ಲಿ ಇರಿಸುವ ಕಾರ್ಯ ತಾಂತ್ರಿಕ ಕಾರಣಗಳಿಂದ ನೆರವೇರಿಲ್ಲ. ಆ ನಿಟ್ಟಿನಲ್ಲಿ ಯತ್ನಗಳು ನಡೆದಿವೆ’ ಎಂದು ಇಸ್ರೊ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ADVERTISEMENT

ಎನ್‌ವಿಎಸ್‌–02 ಅನ್ನು ಭಾರತದ ಮೇಲೆ ಗೊತ್ತುಪಡಿಸಿದ ಭೂಸ್ಥಿರ ಕಕ್ಷೆಯಲ್ಲಿ ಇರಿಸಲಾಗಿದೆ. ಆದರೆ, ಅದರ ‘ಲಿಕ್ವಿಡ್‌ ಎಂಜಿನ್‌’ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ, ಅದನ್ನು ಗೊತ್ತುಪಡಿಸಿದ ಕಕ್ಷೆಗೆ ಕಳುಹಿಸುವ ಯತ್ನ ವಿಳಂಬವಾಗುತ್ತದೆ ಅಥವಾ ಆ ಕಾರ್ಯವನ್ನು ಪೂರ್ಣವಾಗಿ ಕೈಬಿಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಉಪಗ್ರಹವು ಪ್ರಸ್ತುತ ದೀರ್ಘವೃತ್ತಾಕಾರ ಕಕ್ಷೆಯಲ್ಲಿದೆ. ಇಂತಹ ಕಕ್ಷೆಯಲ್ಲಿ ಇರುವ ಉಪಗ್ರಹವನ್ನು ನ್ಯಾವಿಗೇಷನ್‌ಗಾಗಿ ಬಳಸಿಕೊಳ್ಳಲು ಅಗತ್ಯವಿರುವ ಪರ್ಯಾಯ ತಂತ್ರಗಳನ್ನು ರೂಪಿಸಲಾಗುತ್ತಿದೆ ಎಂದು ಇಸ್ರೊ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.