ADVERTISEMENT

ಮಾನವನ ಮಿದುಳುಗೆ ಚಿಪ್ ಅಳವಡಿಸಲು ಅನುಮತಿ ಗಿಟ್ಟಿಸಿಕೊಂಡ ಮಸ್ಕ್ ಒಡೆತನದ ನ್ಯೂರಾಲಿಂಕ್‌

ರಾಯಿಟರ್ಸ್
Published 26 ಮೇ 2023, 6:08 IST
Last Updated 26 ಮೇ 2023, 6:08 IST
   

ವಾಷಿಂಗ್ಟನ್‌: ಮಾನವನ ಮಿದುಳಿನಿಂದ ಕಂಪ್ಯೂಟರ್‌ಗೆ ನೇರ ಸಂವಹನ ಮಾಡಲು ಎಲಾನ್‌ ಮಸ್ಕ್‌ ಒಡೆತನದ ನ್ಯೂರಾಲಿಂಕ್‌ ಅಭಿವೃದ್ಧಿ ಪಡಿಸಿರುವ ಮೈಕ್ರೋಚಿಪ್‌ ಅನ್ನು ಮಾನವನ ಮೇಲೆ ಪ್ರಯೋಗ ಮಾಡಲು ಅಮೆರಿಕದ ಆಹಾರ ಹಾಗೂ ಔಷಧ ಆಡಳಿತ (ಎಫ್‌ಡಿಎ) ಅನುಮತಿ ನೀಡಿದೆ.

ಪ್ರಯೋಗ ಮಾಡಲು ಕೂಡಲೇ ಜನರನ್ನು ನೇಮಿಸಿಕೊಳ್ಳುವ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೇ ಅಧ್ಯಯನ ಉದ್ದೇಶವನ್ನೂ ಕಂಪನಿ ಬಹಿರಂಗಪಡಿಸಿಲ್ಲ.

‘ಮುಂದೊಂದು ದಿನ ನಮ್ಮ ತಂತ್ರಜ್ಞಾನವು ಅನೇಕ ಜನರಿಗೆ ಸಹಾಯ ಮಾಡಲು ಅನುವು ಮಾಡಿಕೊಟ್ಟ ಮೊದಲ ಹೆಜ್ಜೆ ಇದಾಗಿದೆ‘ ಎಂದು ಅನುಮತಿ ಲಭಿಸಿರುವ ನ್ಯೂರಾಲಿಂಕ್‌ ಹೇಳಿದೆ.

ADVERTISEMENT

ಈ ಹಿಂದೆ ಸುರಕ್ಷತಾ ಮಾನದಂಡದಿಂದಾಗಿ ಮಾನವನ ಮೇಲೆ ಚಿಪ್‌ ಪ್ರಯೋಗ ಮಾಡಲು ಎಫ್‌ಡಿಎ ಅನುಮತಿ ನಿರಾಕರಿಸಿತ್ತು.

ಏನಿದು ನ್ಯೂರಾಲಿಂಕ್‌?

ಮಾನವನ ಮಿದುಳಿನಿಂದ ನೇರವಾಗಿ ಕಂಪ್ಯೂಟರ್‌ ಹಾಗೂ ಮೊಬೈಲ್‌ಗೆ ಸಂವಹನ ಮಾಡಲು ಅಭಿವೃದ್ಧಿಪಡಿಸಲಾಗಿರುವ ಮೈಕ್ರೋಚಿಪ್‌ ಇದು. ಅಂಧರು ಅಥವಾ ಪಾರ್ಶ್ವವಾಯು ಪೀಡಿತರು ತಾವು ಯೋಚಿಸಿದಂತೆ ಕಂಪ‍್ಯೂಟರ್‌ ಹಾಗೂ ಮೊಬೈಲ್‌ ಬಳಕೆ ಮಾಡಲು ಇದರಿಂದ ಸಾಧ್ಯವಾಗಲಿದೆ.

ಈಗಾಗಲೇ ಇದನ್ನು ಮಂಗಗಳ ಮೇಲೆ ಪ್ರಯೋಗ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.