ADVERTISEMENT

2.8 ಟನ್ ಭಾರ ಹೊತ್ತು ದಾಖಲೆ ವೇಗದಲ್ಲಿ ಬಾಹ್ಯಾಕಾಶ ಸೇರಿದ ರಷ್ಯಾದ ಗಗನನೌಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2018, 13:23 IST
Last Updated 10 ಜುಲೈ 2018, 13:23 IST
   

ಮಾಸ್ಕೊ: ಮಿಂಚಿನ ವೇಗದಲ್ಲಿ 3 ಟನ್ ತೂಕದ ವಸ್ತುಗಳನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳ ಸರಕುಸಾಗಣೆಗಗನನೌಕೆಯನ್ನು ರಷ್ಯಾ ಬಾಹ್ಯಾಕಾಶಕ್ಕೆ ಕಳಿಸಿದೆ.2.8 ಟನ್ ತೂಕವಿರುವ ಆಹಾರ, ಇಂಧನ ಮತ್ತು ಇನ್ನಿತರ ವಸ್ತುಗಳನ್ನು ಹೊತ್ತೊಯ್ದ ಈ ಗಗನನೌಕೆ ದಾಖಲೆ ಸಮಯದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಸೇರಿದೆ.

ಎಂಎಸ್-09 ಎಂಬ ಗಗನನೌಕೆ ಜುಲೈ10ರಂದು ಮುಂಜಾನೆ 3.51ಕ್ಕೆ ಕಜಕಿಸ್ತಾನದ ಬೈಕೊನೂರ್ ಕೋಸ್ಮೊಡ್ರೋಮ್‍ನಿಂದ ಉಡಾವಣೆವಾಗಿತ್ತು. ನಾಲ್ಕು ಗಂಟೆ ಅವಧಿಯಲ್ಲಿ ಇದು ಬಾಹ್ಯಾಕಾಶಕ್ಕೆ ತಲುಪಿದೆ.

ಪೈಲಟ್ ರಹಿತ ಗಗನನೌಕೆ ಇದಾಗಿದ್ದು, ಸೋಯುದ್ ಬೂಸ್ಟರ್ ರಾಕೆಟ್‍ನ ಹೊಸ ಆವೃತ್ತಿಯಿಂದಾಗಿ ಇದು ಸಾಧ್ಯವಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ಕೇಂದ್ರ ರೋಸ್‍ಕೊಮೋಸ್ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.