ADVERTISEMENT

ಹೊಸ ಬ್ಲಾಗ್‌ ರಚಿಸುವುದು ಹೇಗೆ?

ದಯಾನಂದ ಎಚ್‌.ಎಚ್‌.
Published 27 ಡಿಸೆಂಬರ್ 2017, 19:30 IST
Last Updated 27 ಡಿಸೆಂಬರ್ 2017, 19:30 IST
ಹೊಸ ಬ್ಲಾಗ್‌ ರಚಿಸುವುದು ಹೇಗೆ?
ಹೊಸ ಬ್ಲಾಗ್‌ ರಚಿಸುವುದು ಹೇಗೆ?   

ಸಾಮಾಜಿಕ ಜಾಲತಾಣಗಳು ಹೆಚ್ಚಾದಂತೆ ತಮ್ಮ ಅಭಿಪ್ರಾಯವನ್ನು ಚುಟುಕಾಗಿ ಹೇಳುವವರು ಮತ್ತು ಅದಕ್ಕೆ ಚುಟುಕಾಗಿಯೇ ಪ್ರತಿಕ್ರಿಯಿಸುವವರು ಹೆಚ್ಚಾಗಿದ್ದಾರೆ. ಆದರೆ, ಚುಟುಕು ಬರಹಗಳ ಹೊರತಾಗಿ ದೀರ್ಘ ಬರಹಗಳನ್ನು ಇಷ್ಟ ಪಡುವವರೂ ಇರುತ್ತಾರೆ. ದೀರ್ಘವಾಗಿ ಬರೆಯುವವರು ಮತ್ತು ದೀರ್ಘ ಬರಹಗಳನ್ನು ಓದುವವರಿಗೆ ಬ್ಲಾಗ್‌ಗಳು ಸಹಕಾರಿ. ಹೀಗಾಗಿ ಹೊಸ ಬ್ಲಾಗ್‌ ರಚಿಸುವುದು ಹೇಗೆ ಎಂಬ ಬಗ್ಗೆ ಈ ವಾರ ತಿಳಿಯೋಣ.

ಹೊಸ ಬ್ಲಾಗ್‌ ರಚಿಸಲು ಮೊದಲು ನಿಮ್ಮ ಬ್ರೌಸರ್‌ನಲ್ಲಿ www.blogger.com ತಾಣಕ್ಕೆ ಹೋಗಿ. ಇಲ್ಲಿ ಮುಖಪುಟದಲ್ಲಿ ಕಾಣುವ CREATE YOUR BLOG ಎಂಬಲ್ಲಿ ಕ್ಲಿಕ್ ಮಾಡಿ. ಈಗ ನಿಮ್ಮ ಗೂಗಲ್‌ ಅಕೌಂಟ್‌ಗೆ ಸೈನ್‌ಇನ್‌ ಕೇಳುತ್ತದೆ. ಇಲ್ಲಿ ನಿಮ್ಮ ಜಿಮೇಲ್‌ ಐಡಿ ಮತ್ತು ಪಾಸ್‌ವರ್ಡ್‌ ನೀಡಿ ಸೈನ್‌ಇನ್‌ ಆಗಿ. ಈಗ ತೆರೆದುಕೊಳ್ಳುವ ಪುಟದಲ್ಲಿ ನಿಮ್ಮ ಬ್ಲಾಗ್‌ಗೆ ಒಂದು ಸೂಕ್ತ ಹೆಸರು ಕೊಡಿ. ನಿಮ್ಮ ಬ್ಲಾಗ್‌ ಹೆಸರಿನ ಅಥವಾ ನಿಮ್ಮ ಹೆಸರಿನ ಬ್ಲಾಗ್‌ ವಿಳಾಸ ರಚಿಸಿಕೊಳ್ಳಿ.

ಬಳಿಕ ನಿಮಗೆ ಇಷ್ಟವಾದ ಪುಟ ವಿನ್ಯಾಸ ಆಯ್ಕೆ ಮಾಡಿಕೊಂಡು CREATE BLOG ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಬ್ಲಾಗ್‌ ಪುಟ ರಚನೆಯಾಗುತ್ತದೆ. ಈಗ ಬ್ಲಾಗರ್‌ ಪುಟದಲ್ಲಿ Posts ಎಂಬಲ್ಲಿ ಕ್ಲಿಕ್‌ ಮಾಡಿ. ಇಲ್ಲಿ ಕಾಣುವ New Post ಆಯ್ಕೆ ಮಾಡಿಕೊಳ್ಳಿ. ಈಗ ಕಾಣುವ ಪುಟದಲ್ಲಿ ನಿಮ್ಮ ಬರಹ ಸೇರಿಸಿ. ಈ ಪುಟದಲ್ಲಿ ಚಿತ್ರ, ಜಾಲತಾಣಗಳ ಕೊಂಡಿ, ಫೇಸ್‌ಬುಕ್‌, ಟ್ವಿಟರ್‌ ಇಲ್ಲವೇ ಯೂಟ್ಯೂಬ್‌ ವಿಡಿಯೊ ಎಂಬೆಡ್‌ ಕೋಡ್‌ ನಿಮ್ಮ ಬರಹ ಪ್ರಕಟಿಸಬಹುದು.

ADVERTISEMENT

ಬ್ಲಾಗರ್‌ ಪುಟದಲ್ಲಿ ನಿಮ್ಮ ಬ್ಲಾಗ್‌ನ ಸ್ವರೂಪವನ್ನು ನಿಮಗೆ ಬೇಕಾದಂತೆ ಬದಲಿಸಿಕೊಳ್ಳಬಹುದು. ಭಾಷೆ, ಚಿತ್ರಗಳು, ಪುಟದ ವಿನ್ಯಾಸ, ಅಕ್ಷರ ವಿನ್ಯಾಸ ಎಲ್ಲವನ್ನೂ ನಿಮಗೆ ಬೇಕಾದಂತೆ ರೂಪಿಸಿಕೊಳ್ಳಬಹುದು. ನೀವು ಇದುವರೆಗೂ ಬ್ಲಾಗ್‌ ಹೊಂದಿಲ್ಲವೇ? ಹಾಗಾದರೆ ನಿಮ್ಮದಾದ ಒಂದು ಹೊಸ ಬ್ಲಾಗ್‌ ಅನ್ನು ಇಂದೇ ರಚಿಸಿಕೊಳ್ಳಿ. ನಿಮ್ಮ ಬರಹವನ್ನು ಬ್ಲಾಗ್‌ನಲ್ಲಿ ಪ್ರಕಟಿಸಲು ಆರಂಭಿಸಿ. ಬ್ಲಾಗ್‌ನಲ್ಲಿ ಪ್ರಕಟಿಸಿದ್ದನ್ನು ನೀವು ಫೇಸ್‌ಬುಕ್‌, ಟ್ವಿಟರ್‌ನಲ್ಲೂ ಹಂಚಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.