ADVERTISEMENT

ಇಬ್ಬರು ಯುಟ್ಯೂಬರ್‌ಗಳ ನಡುವೆ ಜಗಳ: ಪ್ರಕರಣ ದಾಖಲು

ಏಜೆನ್ಸೀಸ್
Published 9 ಮಾರ್ಚ್ 2024, 2:40 IST
Last Updated 9 ಮಾರ್ಚ್ 2024, 2:40 IST
<div class="paragraphs"><p>ಇಬ್ಬರು ಯುಟ್ಯೂಬರ್‌ಗಳ ನಡುವೆ ಜಗಳ</p></div>

ಇಬ್ಬರು ಯುಟ್ಯೂಬರ್‌ಗಳ ನಡುವೆ ಜಗಳ

   

ನವದೆಹಲಿ: ಒಟಿಟಿ ಬಿಗ್‌ಬಾಸ್ ವಿಜೇತ ಎಲ್ವಿಶ್‌ ಯಾದವ್‌, ಯುಟ್ಯೂಬರ್‌ ಸಾಗರ್ ಠಾಕೂರ್‌ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆ ಬಗ್ಗೆ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಎಲ್ವಿಶ್‌ ಯಾದವ್‌ ಮತ್ತು ಅವರ ಸಹಚರರು ಸಾಗರ್‌ ಠಾಕೂರ್‌ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಸಾಗರ್‌ ಕೈ, ಕಾಲು ಮತ್ತು ಬೆನ್ನಿನ ಮೇಲೆ ಸಾಕಷ್ಟು ಗಾಯಗಳಾಗಿವೆ. ಇವರಿಬ್ಬರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಜಗಳ ಶುರುವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಇವರ ನಡುವಿನ ಗಲಾಟೆಯ ವಿಡಿಯೊಗಳು ಹಾಗೂ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.